ಕಾರ್ಕಳ: ತೋಟದ ಕೆಲಸಕ್ಕೆ ಬಂದಾತನಿಂದ ಚಿನ್ನದ ಉಂಗುರ ಕಳವು

ಕಾರ್ಕಳ ಕುಕ್ಕಂದೂರು ಗ್ರಾಮದ ಗುಂಡ್ಯಡ್ಕ ದಲ್ಲಿ ವಾಸವಾಗಿರಯವ ದೇಜು ಶೆಟ್ಟಿ ರವರ ಮನೆಗೆ ತೋಟದ ಕೆಲಸಕ್ಕೆ ಬಂದ ಬೆಳ್ತಂಗಡಿ ತಾಲೂಕಿನ ಜಯಪ್ರಕಾಶ್ ಮನೆಯ ಒಡತಿ ಸರಳ ಶೆಟ್ಟಿ ರವರು ಸ್ನಾನಕ್ಕೆಂದು ಹೋದಾಗ ಅವರ ಬೆಡ್ ರೂಂನಲ್ಲಿದ್ದ ಚಿನ್ನದ ಉಂಗುರವನ್ನು ಕಳವು ಮಾಡಿದ್ದು ಈ ಬಗ್ಗೆ ಸರಳ ಶೆಟ್ಟಿ ರವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಅದರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಬಳಿಕ ಉಂಗುರವನ್ನು ವೇಣೂರಿನ ಸೊಸೈಟಿಯೊಂದರಲ್ಲಿ ಅಡವಿಟ್ಟು ರೂ 6೦೦೦/- ವನ್ನು ಸಾಲವಾಗಿ ಪಡೆದು ಆರೋಪಿಯು ಮನೆಯವರಿಗೆ ತನ್ನ ಮೇಲೆ ಸಂಶಯ ಬರಬಾರದೆಂದು ಮನೆಯವರು ಚಿನ್ನದ ಉಂಗುರವನ್ನು ಹುಡುಕಾಡುವ ಸಮಯ ಅರೋಪಿಯೂ ಮನೆಯವರೊಂದಿಗೆ ಸೇರಿ ಹುಡುಕಾಡುವಂತೆ ನಟಿಸಿ ಅವರ ಮನೆಯಲ್ಲಿಯೇ ಇದ್ದನು. ಕೆಲ ದಿನಗಳ ಬಳಿಕ ಆರೋಪಿ ಕೆಲಸಕ್ಕೆ ಬಾರದಿರುವುದು ಕಂಡು ಅತನೇ ಚಿನ್ನದ ಉಂಗುರವನ್ನು ಕಳವು ಮಾಡಿರಬಹುದೆಂದು ಆತನ ಮೇಲೆ ಮನೆಯವರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದರು.

ಕಾರ್ಕಳ ಡಿ ವೈಎಸ್ ಪಿ ವಿಜಯಪ್ರಸಾದ್ ಮತ್ತು ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ರವರ ಮಾರ್ಗದರ್ಶನದಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಪಿ ಎಸ್ ಐ ಮಧು ಬಿ ಇ ಮತ್ತು ದಾಮೋದರ ಕೆ ಬಿ ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಹೆಚ್ ಸಿ ಸದಾಶಿವ ಶೆಟ್ಟಿ, ಪಿ ಸಿ ಘನಶ್ಯಾಮ್ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಕಳ ಬಜಗೋಳಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಲ್ಲಿ ಆತನು ತಪ್ಪೊಪ್ಪಿಕೊಂಡಿದ್ದು ಬಳಿಕ ಆರೋಪಿಯೊಂದಿಗೆ ವೇಣೂರಿಗೆ ಹೋಗಿ ಆತನು ಕಳವು ಮಾಡಿದ ಚಿನ್ನದ ಉಂಗುರವನ್ನು ಅಡವು ಇಟ್ಟು ಸಾಲ ಪಡೆದ ಬ್ಯಾಂಕ್ ನಿಂದ ಉಂಗುರವನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

 

Related Posts

Leave a Reply

Your email address will not be published.