ಕಾರ್ಕಳ ಪುರಸಭೆಯಲ್ಲಿ ಹಿಟ್ಲರ್ ಆಡಳಿತ

ಕಾರ್ಕಳ ಪುರಸಭಾಧ್ಯಕ್ಷೆ ಸುಮಾಕೇಶವ್ ರಿಂದ ಸಾಮಾಜಿಕ ತಾರತಮ್ಯ, ಪರಿಶಿಷ್ಟ ಪಂಗಡದವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಹಾಗೂ ತುಚ್ಚವಾಗಿ ಕಾಣುತ್ತಿದ್ದಾರೆ. ಪರಿಶಿಷ್ಟ ಪಂಗಡದ ಮೀಸಲಾತಿ ನಿಧಿಯನ್ನು ಪರಿಶಿಷ್ಟ ಪಂಗಡದ ಪುರಸಭಾ ಸದಸ್ಯರ ಗಮನಕ್ಕೆ ತರದೆ ಸಾಮಾನ್ಯ ವರ್ಗಗಳ ನಿಧಿಗೆ ವರ್ಗಾಯಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಉಪಾಧ್ಯಕ್ಷ ಸೋಮನಾಥ್ ನಾಯ್ಕ್ ಆರೋಪಿಸಿದ್ದಾರೆ.

ಅವರು ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಮನೆ ರಿಪೇರಿ ಪರಿಹಾರ ನಿಧಿಯನ್ನು ಕ್ಲಪ್ತ ಸಮಯದಲ್ಲಿ ನೀಡದೆ ಪುರಸಭಾಧ್ಯಕ್ಷ ಸುಮಾ ಕೇಶವ ತಾರತಮ್ಯ ಮಾಡುತ್ತಿದ್ದಾರೆ ಹಾಗೂ ಬಡವರ ಬಗ್ಗೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಸೋಮನಾಥ ನಾಯಕ್ ಆರೋಪಿಸಿದ್ದಾರೆ. ಇಂತಹ ಅವಮಾನದ ಪರಾಕಾಷ್ಠೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

ಪರಿಶಿಷ್ಟ ಪಂಗಡದವರ ಕುರಿತು ಪುರಸಭಾಧ್ಯಕ್ಷೆಯವರ ನಡವಳಿಕೆ ಖಂಡನೀಯ, ಒಬ್ಬ ವ್ಯಕ್ತಿಯ ಹಕ್ಕುಗಳನ್ನು ತಡೆಯುವುದೆಂದರೆ, ಅದನ್ನು ನಿರಾಕರಿಸಿದಂತೆ. ಮೂಲಭೂತ ಹಕ್ಕುಗಳು ಸಂವಿಧಾನ ಪೀಠಿಕೆಯ ಅಡಿಗಲ್ಲುಗಳು. ಸರ್ವ ಮಾನವರು ಸಮಾನರು ಹಾಗಾಗಿ ಮಾನವ ಹಕ್ಕುಗಳು ಎಲ್ಲರಿಗೂ ಸಿಗಲೇಬೇಕು. ಅವಗಣನೆ ಮತ್ತು ಅವಮಾನಗಳ ದಳ್ಳುರಿಯಲ್ಲಿ ಪರಿಶಿಷ್ಟ ಪಂಗಡದವರಿಗೆ ನ್ಯಾಯ ಸಿಗುವಂತೆ ಮಾಡಲು ಅಹಿಂಸಾತ್ಮಕವಾಗಿ ಹೋರಾಟ ನಡೆಸುವುದಾಗಿ ಸೋಮನಾಥ್ ನಾಯ್ಕ್ ತಿಳಿಸಿದ್ದಾರೆ ಎಂದು ಹೇಳಿದರು.

ಇದೊಂದು “ಹಿಟ್ಲರ್” ಆಡಳಿತ, ಅಸಂವಿಧಾನಿಕ, ಕಾನೂನುಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧೀ ನಡೆ, ಇಂತಹಾ ದುಷ್ಟ ಆಡಳಿತಕ್ಕೆ ಯಾರು ತಲೆ ಬಾಗುವುದಿಲ್ಲ ಬದಲಾಗಿ ಅದನ್ನು ಪ್ರತಿಭಟಿಸುತ್ತಾರೆ ಎಂದು ಸೋಮನಾಥ ನಾಯ್ಕ್ ತಿಳಿಸಿದ್ದಾರೆ. ಪ್ರಜಾಪ್ರಭುತ್ವ ತತ್ವಗಳ ನಂಬಿಕೆಯಿರದ ಸುಮಾ ಕೇಶವ್ ರವರು ತಕ್ಷಣ ಪುರಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಂಗಡದವರ ಕ್ಷಮೆಯನ್ನು ಯಾಚಿಸಲಿ ಎಂದು ಪುರಸಭಾ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಉಪಾಧ್ಯಕ್ಷ ಸೋಮನಾಥ ನಾಯ್ಕ್ ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published.