ಕೆಇಬಿ ಅಧಿಕಾರಿಗಳ ಲಂಚಾವತಾರ ಕತ್ತಲಲ್ಲಿ ಮುಳುಗಿರುವ ಜನತೆ

ಸ್ವಾತಂತ್ರ್ಯ ಪೂರ್ವದ ಕನಸಾದ ಪ್ರತಿ ಮನೆಯಲ್ಲೂ ವಿದ್ಯುಚ್ಛಕ್ತಿ ಒದಗಿಸಬೇಕು ಎಂಬ ಯೋಜನೆಯಿಂದ ಇಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಮ್ಮ ನಾಯಕರೇ ಹೇಳುವಂತೆ 2 ಸಾವಿರದ ಇಪ್ಪತ್ತ ಐದರ ಒಳಗೆ ಪ್ರತಿ ಮನೆಯಲ್ಲೂ ಸಹ ವಿದ್ಯುತ್ ಇರಬೇಕು ಯಾವುದೇ ಮನೆ ಕತ್ತಲೆಯಲ್ಲಿ ಇರಬಾರದು ಎಂದು ಹೇಳುತ್ತಾರೆ ಆದರೆ ಇಲ್ಲಿರುವ ದಾರಿಯೇ ಬೇರೆಯಾಗಿದೆ ಕೆಲವು ಕೆಇಬಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಲಂಚಾವತಾರ ದಿಂದಾಗಿ ಕೆಲವೊಂದು ಮನೆಗಳು ಇಂದೂ ಕೂಡ ವಿದ್ಯುತ್ ಕಾಣದೆ ಕತ್ತಲೆಯಲ್ಲಿ ಮುಳುಗಿವೆ.

ಇದಕ್ಕೆ ನಿದರ್ಶನವೆಂದರೆ ಆಲೂರು ತಾಲ್ಲೂಕು ಕಾಮತಿಯಲ್ಲಿ ಈ ಹಿಂದೆ 2019- 20 ನೇ ಸಾಲಿನ ದೀನದಯಾಳ್ ಯೋಜನೆಯಡಿಯಲ್ಲಿ ಜನತಾ ಮನೆಗಳಿಗೆ ಉಚಿತ ಮೀಟರ್ ಹಾಕಿಕೊಡುವ ಭರವಸೆ ನೀಡಿದ್ದು ಆದರೆ ಇಂಜಿನಿಯರ್ ಅವರ ಬೇಜವಾಬ್ದಾರಿತನದಿಂದ ಸರಿಸುಮಾರು 15 ಮನೆಗಳು ಇಂದೂ ಕೂಡ ಕತ್ತಲೆಯಲ್ಲಿ ಜೀವನ ನಡೆಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಬಡವರಿಗೆ ನಿರ್ಗತಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಯಾವ ಯೋಜನೆ ಕೂಡ ಇಂದು ಬಡವರಿಗೆ ತಲುಪುತ್ತಿಲ್ಲ ಎಂಬುದೇ ವಿಷಾದನೀಯ ಇಲ್ಲಿರುವ ಕೆಲವು ಅಧಿಕಾರಿಗಳು ಜನರಿಂದ ಹಣವನ್ನು ಕಿತ್ತುಕೊಂಡು ಅವರು ಈ ಕೆಲಸವನ್ನು ಮಾಡಿ ಕೊಡದೆ ಸತಾಯಿಸುತ್ತಿದ್ದಾರೆ ಈ ಕೆಇಬಿ ಇಲ್ಲಿ ಇರುವ ಕೆಲವು ಜೀವಿಗಳು ಆ ಮನೆಯವರಿಂದ ಎರಡರಿಂದ 5ಸಾವಿರ ರೂಪಾಯಿಗಳವರೆಗೆ ಹಣ ತೆಗೆದುಕೊಂಡಿದ್ದು ವಿದ್ಯುತ್ ಸಂಪರ್ಕ ನೀಡದೆ ಇಂದು ನಾಳೆ ಮುಂದಿನ ತಿಂಗಳು ಎಂದು ನೆಪ ಹೇಳಿಕೊಂಡು ಮುಂದೂಡುತ್ತಿದ್ದಾರೆ. ಮನೆಗಳಲ್ಲಿ ಓದುವ ವಿದ್ಯಾರ್ಥಿಗಳ ಮಕ್ಕಳು ಗಳಿದ್ದರೂ ಬೀದಿ ದೀಪ ಅಥವಾ ಸೀಮೆಣ್ಣೆ ದೀಪದಲ್ಲಿ ಜೀವನ ಕಳೆಯುವ ಪರಿಸ್ಥಿತಿ ಬಂದೊದಗಿದೆ ಇಷ್ಟೆಲ್ಲಾ ಆದರೂ ಕೂಡ ಇದಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಾಗಲಿ ಅಥವಾ ಈ ಕ್ಷೇತ್ರದ ಜನ ಪ್ರತಿನಿಧಿಗಳಾಗಲಿ ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಮುಂದಾದರೂ ಸಂಬಂಧಪಟ್ಟ ಪ್ರತಿನಿಧಿಗಳು ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಇಂತಹ ದುರಾಸೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published.