ಕೇಂದ್ರ ಸರ್ಕಾರದಿಂದ ಮೂರು ಕೃಷಿ ಕಾನೂನು ವಾಪಸ್ : ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ

ನವದೆಹಲಿ: ಕೇಂದ್ರ ಸರ್ಕಾರ ಕೊನೆಗೂ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿದ್ದ, ದೇಶದ ಹಲವು ರಾಜ್ಯಗಳ ರೈತರು ವಿರೋಧಿಸುತ್ತಿದ್ದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮಹತ್ವದ ನಿರ್ಧಾರವನ್ನು ಮಾಡಿದೆ. 

ಶ್ರೀ ಗುರುನಾನಕ್ ದೇವ್​ಜಿ ಪ್ರಕಾಶ್ ಪುರಬ್ ಹಾಗೂ ದೇವ್ ದೀಪಾವಳಿ ಶುಭಕೋರುವ ಮೂಲಕ ಮಾತು ಆರಂಭಿಸಿದ ಪ್ರಧಾನಿ ಮೋದಿ, ಒಂದೂವರೆ ವರ್ಷಗಳ ನಂತರ ಕರ್ತಾರ್‌ಪಿರ್ ಕಾರಿಡಾರ್ ಮತ್ತೆ ತೆರೆದಿರುವುದು ಸಂತಸ ತಂದಿದೆ.

ಗುರುನಾನಕ್ ಅವರು ‘ವಿಚ್ ದುನಿಯಾ ಸೇವ್ ಕಮೈಯೆ, ತಾನ್ ದರ್ಗಾ ಬೈಸನ್ ಪೈಯೆಯಾ’ ಎಂದು ಹೇಳಿದ್ದರು. ಅಂದರೆ ದೇಶ ಸೇವೆಯ ಹಾದಿ ಹಿಡಿದರೆ ಮಾತ್ರ ಬದುಕು ಹಸನಾಗಲು ಸಾಧ್ಯ. ಜನರ ಜೀವನವನ್ನು ಸುಲಭಗೊಳಿಸಲು ನಮ್ಮ ಸರ್ಕಾರ ಈ ಸೇವಾ ಭಾವನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದರು.

ನಾನು 2014ರಲ್ಲಿ ಪ್ರಧಾನಿ ಆದಾಗ ನಮ್ಮ ಸರ್ಕಾರವೂ ರೈತರ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದೆ ಎಂದ ಪ್ರಧಾನಿ ಮೋದಿ, ಇದೇ ಸಂದರ್ಭದಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯುವ ಮೂಲಕ ಮಹತ್ವದ ಘೋಷಣೆ ಮಾಡಿದರು.

Related Posts

Leave a Reply

Your email address will not be published.