ಕೋವಿಡ್ ವರದಿ ಕಡ್ಡಾಯ ಕ್ರಮ ಹಿಂಪಡೆಯಬೇಕೆಂದು ಎಐವೈಎಫ್ ಮಂಜೇಶ್ವರ ಸಮಿತಿ ಆಗ್ರಹ

ಮಂಜೇಶ್ವರ: ಎಐವೈಎಫ್ ಮಂಜೇಶ್ವರ ಏರಿಯಾ ಸಮಾವೇಶ ಟಿವಿ ಥೋಮಸ್ ಸ್ಮಾರಕ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಲಪಾಡಿ ಗಡಿ ಪ್ರದೇಶದಲ್ಲಿ ಕರ್ನಾಟಕ ಸರಕಾರ ಕೇರಳ ಜನತೆಗೆ ಆರ್‍ಟಿಪಿಸಿಆರ್ ನೆಗೆಟಿವ್ ಕಡ್ಡಾಯಗೊಳಿಸಿದ ಕ್ರಮವನ್ನು ಕೂಡಲೇ ಹಿಂತೆಗೆಯಬೇಕೆಂದು ಎಐವೈಎಫ್ ಮಂಜೇಶ್ವರ ಏರಿಯಾ ಸಮಿತಿ ಸಂಬಂಧಪಟ್ಟವರನ್ನು ಒತ್ತಾಯಿಸಿದೆ.

ಎಐವೈಎಫ್ ಮಂಜೇಶ್ವರ ಏರಿಯಾ ಅಧ್ಯಕ್ಷ ಪ್ರಥಮ್ ಕಣ್ವತೀರ್ಥ ಧ್ವಜಾರೋಹಣಗೈದರು. ಸಮಾವೇಶವನ್ನು ಎಐವೈಎಫ್ ಜಿಲ್ಲಾಧ್ಯಕ್ಷ ಬಿಜು ಉಣ್ಣಿತ್ತಾನ್ ಉದ್ಘಾಟಿಸಿದರು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್, ಸಿಪಿಐ ಮಂಜೇಶ್ವರ ಮಂಡಲ ಜತೆ ಕಾರ್ಯದರ್ಶಿ ಎಸ್. ರಾಮಚಂದ್ರ ಬಡಾಜೆ, ಎಐವೈಎಫ್ ಜಿಲ್ಲಾ ಉಪಾಧ್ಯಕ್ಷ ಅಜಿತ್ ಎಂ.ಸಿ, ಎಐವೈಎಫ್ ಜಿಲ್ಲಾ ಸಮಿತಿ ಸದಸ್ಯ ಮನು ಪುತ್ತಿಗೆ, ಎಐಟಿಯುಸಿ ಮೋಟಾರ್ ಯೂನಿಯನ್ ರಾಜ್ಯ ಉಪಾಧ್ಯಕ್ಷ ಮುಸ್ತಫಾ ಕಡಂಬಾರ್, ಎಐವೈಎಫ್ ಮಂಜೇಶ್ವರ ಮಂಡಲ ಅಧ್ಯಕ್ಷ ದಯಾಕರ ಮಾಡ ಮೊದಲಾದವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಬಳಿಕ ನೂತನ ಏರಿಯಾ ಸಮಿತಿಯನ್ನು ರೂಪೀಕರಿಸಲಾಯಿತು. ನೂತನ ಅಧ್ಯಕ್ಷರಾಗಿ ಶನೀಶ್ ಉದ್ಯಾವರ, ಕಾರ್ಯದರ್ಶಿಯಾಗಿ ಪ್ರಥಮ್ ಕಣ್ವತೀರ್ಥ, ಉಪಾಧ್ಯಕ್ಷರಾಗಿ ರಾಜ ದುರ್ಗಿಪಳ್ಳ, ಶೋಭಾ, ಜತೆ ಕಾರ್ಯದರ್ಶಿಯಾಗಿ ಧನರಾಜ್ ಕೀರ್ತೇಶ್ವರ, ಪ್ರಭಾವತಿ ಕಾಜೂರ್ ಆಯ್ಕೆಯಾದರು.

 

Related Posts

Leave a Reply

Your email address will not be published.