ಕೋವಿಡ್ ಸಂಕಷ್ಟದ ಮಧ್ಯೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ: ಶಾಹುಲ್ ಹಮೀದ್

ಕೊರೋನಾ ಸಂಕಷ್ಟದ ಮಧ್ಯೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ರಾಜ್ಯದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಒತ್ತಾಯಿಸಿದ್ದಾರೆ.

ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,2020-21 ಸಾಲಿನಲ್ಲಿ ಕಡಿತ ಗೊಳಿಸಿ 152 ಕೋಟಿ ಮೀಸಲಿಡಲಾಗಿದೆ. ಇದರಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪರಿತಾಪಿಸುವಂತಾಗಿದೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಯಾವುದೇ ಹಣ ಕಾಸು ಬಂದಿಲ್ಲ. ಒಂದು ರೂಪಾಯಿನೂ ಸರ್ಕಾರದಿಂದ ಬಿಡುಗಡೆ ಆಗಿಲ್ಲ. ಕೆಎಂಡಿಸಿಗೆ 120 ಕೋಟಿ ಬಿಡುಗಡೆ ಮಾಡಿದ್ರು. ಆದ್ರೆ ಇದನ್ನು ಪರಿಷ್ಕರಿಸಿ 105 ಕೋಟಿಗೆ ಇಳಿಸಲಾಯಿತು. ಮತ್ತೆ ಪರಿಷ್ಕರಿಸಿ 75 ಕೋಟಿಗೆ ಇರಿಸಲಾಗಿದೆ. ಪರಿಷ್ಕರಿಸಿದ 75 ಕೋಟಿ ಅನುದಾನದಲ್ಲಿ ಈ ವರೆಗೆ ಒಂದು ರೂಪಾಯಿಯು ನೀಡಿಲ್ಲ. ಸರ್ಕಾರ ವಿದ್ಯಾರ್ಥಿಗಳಿಗೆ ಮೋಸ ಮಾಡ್ತಾ ಬಂದಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಜೀವನದಲ್ಲಿ ಸರ್ಕಾರದ ಚೆಲ್ಲಾಟ ಆಡ್ತಾ ಇದೆ. ಸ್ಕಾಲರ್ ಶಿಪ್ ನೀಡ್ತೇವೆಂದು ಈಗಾ ವಿದ್ಯಾರ್ಥಿಗಳನ್ನು ನಡು ನೀರಿನಲ್ಲಿ ಕೈಬಿಟ್ಟಿದೆ. ಮೆಡಿಕಲ್ ವಿದ್ಯಾಭ್ಯಾಸ ಮಾಡುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ ನೀಡುತ್ತಿತ್ತು. ಇದೀಗಾ ಅದ್ರಲ್ಲೂ ವೇತನ ಕಡಿತಗೊಳಿಸಿ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕೋಡಿಜಾಲ್ ಇಬ್ರಾಹಿಂ, ಅಬ್ದುಲ್ ರವೂಫ್, ಆರೀಫ್ ಬಾವ, ಯೂಸುಫ್, ಹೊನ್ನಯ್ಯ, ಶಬೀರ್, ಅಬ್ದುಲ್ ಮಜೀದ್, ನವೀನ್ ಡಿಸೋಜ, ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.

 

 

Related Posts

Leave a Reply

Your email address will not be published.