ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಾಧನೆಗೈದವರಿಗೆ ಸನ್ಮಾನ

ಸಾಧಕರಿಗೆ ಸಮ್ಮಾನ ಮಾಡಿದಾಗ ಅವರ ಸಾಧನೆಗೆ ಮತ್ತಷ್ಟು ಹುರುಪು ಬರುತ್ತದೆ ಹಾಗೂ ಇತರರಿಗೂ ಆಸಕ್ತಿ ಬರಲು ಕಾರಣವಾಗುತ್ತದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಹೇಳಿದರು. ಅವರು ಮಂಗಳೂರಿನಲ್ಲಿ ಕ್ರೀಡಾ ವಿಭಾಗ ಮತ್ತು ರಾಷ್ಟ್ರೀಯ ಸೇವಾಯೋಜನೆಯಲ್ಲಿ ಸಾಧನೆಗೈದವರನ್ನು ಸಮ್ಮಾನಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡಿ ರಾಜ್ಯಕ್ಕೆ ಇನ್ನಷ್ಟು ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು. ಹರಿಯಾಣದ ರೋಟಕ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿರಿಯ ತ್ರೋಬಾಲ್ ತಂಡದಲ್ಲಿ ಭಾಗವಹಿಸಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದ ಸುರತ್ಕಲ್ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಾ ಗುಣಶೇಖರ ಶೆಟ್ಟಿ, ಸ್ವಾತಿ ಶರತ್ ಶೆಟ್ಟಿ, ದೆಹಲಿ ಮತ್ತು ಛತ್ತೀಸ್‍ಘಡದಲ್ಲಿ ನಡೆದ ತ್ರೋಬಾಲ್‍ನಲ್ಲಿ ಕಾಲೇಜು ವಿಭಾಗವನ್ನು ರಾಷ್ಟ್ರೀಯಮಟ್ಟವನ್ನು ಪ್ರತಿನಿಧಿಸಿದ ಮಂಗಳೂರಿನ ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಮಿಷಾ, ಗೋವಿಂದ ದಾಸ ಕಾಲೇಜಿನ ನಮೃತಾ ನಾಯಕ್ ಹಾಗೂ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರೀಯ ಸೇವಾ ಯೋಜನೆಯ 2019 – 20 ನೇ ಸಾಲಿನ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿ ಪುರಸ್ಕೃತೆ ಬಿಂದಿಯಾ ಎಲ್ ಶೆಟ್ಟಿ ಅವರನ್ನು ಶಾಸಕರು ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಶ್ವೇತಾ ಎ, ಸರಿತಾ ಶಶಿಧರ್, ಶೋಭಾ ರಾಜೇಶ್, ಲೋಕೇಶ್ ಬೊಳ್ಳಾಜೆ, ಲಕ್ಷೀ ಶೇಖರ್ ದೇವಾಡಿಗ, ಸುಮಿತ್ರಾ ಕರಿಯಾ, ಮಾಜಿ ಸದಸ್ಯ ಗುಣಶೇಖರ ಶೆಟ್ಟಿ, ಬಿಜೆಪಿ ಉತ್ತರ ಮಂಡಲ ಉಪಾಧ್ಯಕ್ಷರಾದ ಮಹೇಶ್ ಮೂರ್ತಿ ಸುರತ್ಕಲ್, ದಿನಕರ್ ಇಡ್ಯಾ, ಬಿಜೆಪಿ ಮುಖಂಡರು, ತರಬೇತುದಾರರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.