ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಂದ ರ್‍ಯಾಗಿಂಗ್ ಪ್ರಕರಣ 6ವಿದ್ಯಾರ್ಥಿಗಳ ಬಂಧನ

ಮಂಗಳೂರಿನ ಫಳ್ನೀರ್‌ನ ಖಾಸಗಿ ಕಾಲೇಜಿನಲ್ಲಿ ರ್‍ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ, ಆರು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

ಫಳ್ನೀರ್‌ನಲ್ಲಿರುವ ಖಾಸಗಿ ಕಾಲೇಜಿ ವಿದ್ಯಾರ್ಥಿಗಳಾದ ಶ್ರೀಲಾಲ್ , ಶಾಹಿದ್, ಅಮ್ಜದ್, ಜುರೈಜ್, ಹುಸೈನ್, ಲಿಮ್ಸ್, ಬಂಧಿತ ಆರೋಪಿಗಳಾಗಿದ್ದಾರೆ. ಜುಲೈ 14ರಂದು ರಾತ್ರಿ 8ಗಂಟೆಗೆ ನಗರದ ಹೋಟೆಲೊಂದರಲ್ಲಿ ರ್‍ಯಾಗಿಂಗ್‌ಗೆ ಒಳಗಾದ ಸಂತ್ರಸ್ತ ಮ್ಯಾನುಯಲ್ ಬಾಬು ಎಂಬುವರು ತನ್ನ ಸ್ನೇಹಿತರಾದ ಜೋಬಿನ್ ಹಾಗೂ ಶಾಕೀರ್ ಜತೆ ಊಟಕ್ಕಾಗಿ ತೆರಳಿದ್ದರು.

ಈ ಸಂದರ್ಭ ಪರಿಚಯಸ್ಥರಾದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಶ್ರೀಲಾಲ್ ಸಂತ್ರಸ್ತ ಮ್ಯಾನುಯಲ್‌ನನ್ನು ಉದ್ದೇಶಿಸಿ, ಏನು ಮುಖ ನೋಡುತ್ತಿಯಾ,ನೀವೂ ಜೂನಿಯರ್‌ಗಳು ,ನಾವೂ ಬರುವಾಗ ಎದ್ದು ನಿಂತು ಗೌರವ ಕೊಡಬೇಕು ಎಂದು ಬೆದರಿಸಿ ರ್‍ಯಾಗಿಂಗ್ ಮಾಡಿದ್ದಾರೆ. ತದ ಬಳಿಕ ರಾತ್ರಿ 10.30ರ ಸುಮಾರಿಗೆ ಅತ್ತಾವರದ ಅಪಾರ್ಟ್‌ಮೆಂಟ್ನ ರೂಮಿನಲ್ಲಿ ಮ್ಯಾನುಯಲ್ ಇದ್ದ ಸಂದರ್ಭ 6 ಆರೋಪಿಗಳು ಮಾರಕಾಯುಧ ಸಹಿತ ಆಗಮಿಸಿದ್ದಾರೆ. ಏಕಾಏಕಿ ರೂಮ್ ಪ್ರವೇಶಿಸಿದ ಆರೋಪಿಗಳು ಮ್ಯಾನುಯಲ್‌ಗೆ ಪುನಃ ನಿಂದಿಸಿದ್ದಾರೆ. ಬಳಿಕ ಒಳವಸ್ತ್ರದಲ್ಲಿ ನಿಂತು ಬಸ್ಕಿ ತೆಗೆಯಲು ಹೇಳಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿ ಜೀವ ಬೆದರಿಕೆಯನ್ನು ಒಡಿದ್ದಾರೆ ಎಂದು ಕಮೀಷನರ್ ಹೇಳಿದರು. ಈ ಸಂಬಂಧ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅವರು ಹೇಳಿದರು.

Related Posts

Leave a Reply

Your email address will not be published.