ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ಕಡ್ಡಾಯ: ಇದು ಖರೀದಿದಾರರು, ಮಾರಾಟಗಾರರಿಗೆ ಅತ್ಯಗತ್ಯ: ಎಂ.ಪಿ.ಅಹ್ಮದ್

ಬೆಂಗಳೂರು: ಗ್ರಾಹಕರ ಹಕ್ಕುಗಳು ಅತ್ಯಂತ ಮಹತ್ವ ಮತ್ತು ಅಗತ್ಯ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ಅನೇಕ ಕಾನೂನುಗಳನ್ನು ತಂದಿವೆ. ಗ್ರಾಹಕರು ತಾವು ಖರೀದಿಸುವ ಯಾವುದೇ ಉತ್ಪನ್ನವಾಗಲೀ ಅದಕ್ಕೆ ನೀಡುವ ಹಣಕ್ಕೆ ತಕ್ಕಂತೆ ಮೌಲ್ಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರಲ್ಲಿ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಸರ್ಕಾರ ಚಿನ್ನ ಮತ್ತು ಚಿನ್ನದ ಉತ್ಪನ್ನಗಳಿಗೆ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದ ಕಾನೂನು ಜೂನ್ 16 ರಿಂದ ಜಾರಿಗೆ ಬಂದಿದೆ.

ಚಿನ್ನ ಮತ್ತು ಚಿನ್ನದ ಉತ್ಪನ್ನಗಳಿಗೆ ಹಾಲ್‌ಮಾರ್ಕ್ ಕಡ್ಡಾಯ ಮಾಡುವ ಆದೇಶವು ಗ್ರಾಹಕರನ್ನು ವಂಚಿಸುವ ಮಾರಾಟಗಾರರಿಗೆ ಕಡಿವಾಣ ಹಾಕುತ್ತದೆ. ಅಲ್ಲದೇ, ಕಳಪೆ ಗುಣಮಟ್ಟದ ಚಿನ್ನವನ್ನು ಮಾರಾಟ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಗ್ರಾಹಕರು ವಂಚನೆಗೊಳಗಾಗುವ ಪ್ರಕರಣಗಳಿಗೆ ಅಂತ್ಯ ಹಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿನ್ನದ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರ ಹಕ್ಕುಗಳನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕಾನೂನು ಕಠಿಣ ರೀತಿಯಲ್ಲಿ ಜಾರಿಯಾಗಬೇಕು. ಏಕೆಂದರೆ, ಗ್ರಾಹಕರು ಮಾರಾಟಗಾರರಿಂದ ವಂಚನೆ ಮೂಲಕ ಅಥವಾ ಮೋಸ ಹೋಗುವುದರ ವಿರುದ್ಧ ವಿಮೆಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಖರೀದಿದಾರರ ಹಿತಾಸಕ್ತಿಯನ್ನು ಕಾನೂನುಬದ್ಧವಾಗಿ ರಕ್ಷಿಸುವ ಕರ್ತವ್ಯ ಸರ್ಕಾರದ್ದಾಗಿದೆ. ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸುವ ಮೂಲಕ ಸರ್ಕಾರ ಇನ್ನು ಮುಂದೆ ಚಿನ್ನ ಮತ್ತು ಚಿನ್ನದ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರ ಹಿತ ರಕ್ಷಣೆ ಮಾಡಲಿದ್ದರೆ, ಕೆಲವು ಮಾರಾಟಗಾರರು ಗ್ರಾಹಕರನ್ನು ವಂಚಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ಕಾನೂನು ಅವರ ಹಕ್ಕುಗಳನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತದೆ.

ವಿಚಾರಗಳನ್ನು ದೃಷ್ಟಿಕೋನದಿಂದ ಹೇಳುವುದಾದರೆ, ಆಭರಣಗಳ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು ಆಭರಣದ ಝಿಂಕ್, ಬೆಳ್ಳಿ ಮುಂತಾದ ಲೋಹಗಳನ್ನು ಚಿನ್ನದೊಂದಿದೆ ಬೆರೆಸುತ್ತಾರೆ. ಏಕೆಂದರೆ, ಚಿನ್ನವು ಲೋಹವಾಗಿ ದುರ್ಬಲವಾಗಿರುತ್ತದೆ ಮತ್ತು ಅದು ಒಡೆಯುವ ಸಾಧ್ಯತೆ ಇದೆ. ಚಿನ್ನದಲ್ಲಿರುವ ಇತರೆ ಲೋಹಗಳ ಪ್ರಮಾಣವನ್ನು ಆಧರಿಸಿ, ಬ್ಯೂರೋ ಆಫ್ ಇಂಡಿಯಾ ಸ್ಟಾಂಡರ್ಡ್ಸ್ (ಬಿಐಎಸ್) ಚಿನ್ನವನ್ನು 18 ಕ್ಯಾರೆಟ್, 22 ಕ್ಯಾರೆಟ್ ಇತ್ಯಾದಿಗಳಾಗಿ ವರ್ಗೀಕರಿಸಲಾಗುತ್ತದೆ. ಇದರ ಪ್ರತಿ ವರ್ಗವು ಚಿನ್ನದ ಶುದ್ಧತೆಯನ್ನು ಸೂಚಿಸುತ್ತದೆ. 22 ಕ್ಯಾರೆಟ್ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಗ್ರಾಂ ಆಭರಣವು ಶೇ.೯೧.೬ ಚಿನ್ನವನ್ನು ಹೊಂದಿರಬೇಕು ಎಂಬುದನ್ನು ಕಾನೂನು ಹೇಳುತ್ತದೆ. 18 ಕ್ಯಾರೆಟ್‌ಗೆ ಶೇ.75 ಮತ್ತು 14 ಕ್ಯಾರೆಟ್‌ನಲ್ಲಿ ಶೇ.58.5 ರಷ್ಟು ಚಿನ್ನದ ಅಂಶವನ್ನು ಹೊಂದಿರಬೇಕು.

ಈ ಗುಣಮಟ್ಟಗಳು ಸ್ವಲ್ಪ ಸಮಯದವರೆಗೆ ಇದ್ದರೂ, ಈ ಉತ್ತಮ ಅಭ್ಯಾಸಗಳನ್ನು ವ್ಯಾಪಕವಾಗಿ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಬಿಐಎಸ್ ನಿಗದಿಪಡಿಸಿರುವ ಈ ಮಾನದಂಡಗಳನ್ನು ಸರ್ಕಾರವು ಈಗ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳುವುದು. ಹಾಲ್‌ಮಾರ್ಕಿಂಗ್ ಪ್ರಮಾಣಪತ್ರಗಳನ್ನು ಒದಗಿಸಲು ಸರ್ಕಾರವು ಹಲವಾರು ಖಾಸಗಿ ಸಂಸ್ಥೆಗಳಿಗೆ ಶುದ್ಧತೆಯನ್ನು ಪರೀಕ್ಷಿಸಲು ಮತ್ತು ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ನೀಡಿದೆ. ಸ್ಪಷ್ಟವಾಗಿ ಗುರುತಿಸಲಾದ ಚಿನ್ನದ ಶುದ್ಧತೆಯೊಂದಿಗೆ ಪ್ರತಿ ಹಾಲ್‌ಮಾರ್ಕ್ ಮಾಡಿದ ಉತ್ಪನ್ನದಲ್ಲಿ ಬಿಐಎಸ್ ಹಾಲ್‌ಮಾರ್ಕ್ ಇರಬೇಕು. ಇದಲ್ಲದೇ, ಹಾಲ್‌ಮಾರ್ಕಿಂಗ್ ಏಜೆನ್ಸಿ ಮತ್ತು ಆಭರಣಗಳ ಹೆಸರುಗಳು ಸಹ ಕಡ್ಡಾಯವಾಗಿದೆ. ಈ ಲೇಬಲಿಂಗ್‌ನಿಂದಾಗಿ ಯಾವುದೇ ವಂಚನೆ ಸಂದರ್ಭದಲ್ಲಿ ಕಾನೂನು ಜಾರಿ ಸಂಸ್ಥೆಗಳು ಅಪರಾಧಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಭವಿಷ್ಯದಲ್ಲಿ ಬಿಐಎಸ್ ಹಾಲ್‌ಮಾರ್ಕಿಂಗ್ ಹೊರತಾಗಿ ಚಿನ್ನದ ಉತ್ಪನ್ನಗಳು ಆರು ಅಂಕೆಗಳ ವಿನೂತನ ಗುರುತಿನ ಸಂಖ್ಯೆಯನ್ನು (ಎಚ್‌ಯುಡಿ) ಹೊಂದಿರುತ್ತದೆ.

ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವ ಮೂಲಕ ಗ್ರಾಹಕರು ಮೂರು ಹಂತಗಳಲ್ಲಿ ಲಾಭ ಪಡೆಯಲಿದ್ದಾರೆ. ಮೊದಲ ಮತ್ತು ಪ್ರಮುಖ ಪ್ರಯೋಜನವೆಂದರೆ ಗ್ರಾಹಕರು ತಾವು ಖರೀದಿಸುವ ಚಿನ್ನದ ಶುದ್ಧತೆಯನ್ನು ಖಾತರಿಪಡಿಸಿಕೊಳ್ಳಬಹುದು. ಎರಡನೆಯ ಪ್ರಯೋಜನವೆಂದರೆ ಚಿನ್ನದ ಉತ್ಪನ್ನಗಳ ಹೆಚ್ಚಿನ ಮರು ಮಾರಾಟ ಅಥವಾ ವಿನಿಮಯ ಮೌಲ್ಯವು ಉಳಿದುಕೊಳ್ಳುತ್ತದೆ. ಮೂರನೇ ಪ್ರಯೋಜನವೆಂದರೆ ಚಿನ್ನ ಮತ್ತು ಚಿನ್ನದ ವಸ್ತುಗಳನ್ನು ಖರೀದಿಸುವವರಿಗೆ ಕಾನೂನು ರಕ್ಷಣೆ ದೊರೆಯುತ್ತದೆ.

ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಅಧ್ಯಕ್ಷರಾದ ನಾನು, ಕೆಲವು ಆಭರಣ ತಯಾರಕರು ಕಳಪೆ ಗುಣಮಟ್ಟದ ಚಿನ್ನದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹೇಗೆ ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂಬುದರ ಬಗ್ಗೆ ಸುದೀರ್ಘವಾಗಿ ಮಾತನಾಡಬಲ್ಲೆ. ನಮ್ಮ ಗ್ರಾಹಕರು ತಮ್ಮ ಹಣಕ್ಕೆ ಶೇ.1೦೦ ರಷ್ಟು ಮೌಲ್ಯವನ್ನು ಖಾತರಿಪಡಿಸುವುದಕ್ಕೆ ನಾವು ಕೇವಲ ಬಿಐಎಸ್ ಹಾಲ್‌ಮಾರ್ಕ್‌ನ ಚಿನ್ನವನ್ನು ಕಳೆದ 21 ವರ್ಷಗಳಿಂದ ಮಾರಾಟ ಮಾಡುತ್ತಿದ್ದೇವೆ. ಇಂತಹ ತತ್ತ್ವಬದ್ಧ ನಿಲುವು ಹಿಂದಿನ ಕಾಲದಲ್ಲಿ ವ್ಯವಹಾರದಲ್ಲಿ ಬೆಳೆಯಲು ನಮಗೆ ಸಹಕಾರಿಯಾಯಿತು. ಪ್ರಸ್ತುತ ಕೇವಲ ಶೇ.3೦ ರಷ್ಟುಆಭರಣ ವ್ಯಾಪಾರಿಗಳು ಮಾತ್ರ ಬಿಐಎಸ್ ಹಾಲ್‌ಮಾರ್ಕ್ ಚಿನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ಹೆಚ್ಚಿನ ಆಭರಣ ವ್ಯಾಪಾರಿಗಳು ನಕಲಿ ಹಾಲ್‌ಮಾರ್ಕ್ ಮಾಡಿದ ಪ್ರಮಾಣಪತ್ರದ ನೆರವಿನಿಂದ ಮತ್ತು ಅಕ್ರಮವಾಗಿ ಪ್ರಮಾಣೀಕರಣಗೊಂಡ ಏಜೆನ್ಸಿಗಳಿಂದ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ಮೋಸ ಮಾಡಿದ ಉದಾಹರಣೆಗಳಿವೆ. ಆದ್ದರಿಂದ, ಸರ್ಕಾರ ಕಾನೂನು ಉಲ್ಲಂಘಿಸಿ ಹಾಲ್‌ಮಾರ್ಕ್ ಪ್ರಕ್ರಿಯೆಯಲ್ಲಿ ತೊಡಗಿರುವವರನ್ನು ನಿಯಂತ್ರಿಸಲು ನಿಯಮಿತವಾಗಿ ಎಲ್ಲಾ ಏಜೆಂಟ್‌ಗಳನ್ನು ಪರೀಕ್ಷಿಸುತ್ತಿರಬೇಕು. ಶುದ್ಧ ಚಿನ್ನವನ್ನು ಪ್ರಮಾಣೀಕರಿಸಲು ಸಮರ್ಪಕ ಸಂಖ್ಯೆಯ ಏಜೆನ್ಸಿಗಳು ಇಲ್ಲ ಎಂಬ ದೂರುಗಳು ನಿರ್ದಿಷ್ಠ  ವಲಯಗಳಿಂದ ಬಂದಿವೆ.

ಇದು ಸರಿಯಲ್ಲ. ದೇಶದಲ್ಲಿ 965 ಹಾಲ್‌ಮಾರ್ಕಿಂಗ್ ಕೇಂದ್ರಗಳಿವೆ. ಆದರೆ, ಇವುಗಳು ತಮ್ಮ ಪೂರ್ಣವಾದ ಸಾಮರ್ಥ್ಯದಿಂದ ಕೆಲಸ ಮಾಡುತ್ತಿಲ್ಲ. ಅವರ ಸೇವೆಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಹಾಲ್‌ಮಾರ್ಕ್ ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಇದಲ್ಲದೇ, ದೇಶದಲ್ಲಿ ಅಕ್ರಮ ಮಾರ್ಗಗಳ ಮೂಲಕ ನಡೆಯುತ್ತಿರುವ ಚಿನ್ನ ಕಳ್ಳಸಾಗಣೆಯನ್ನು ಈ ಹಾಲ್‌ಮಾರ್ಕಿಂಗ್ ತಡೆಗಟ್ಟಲಿದೆ. ಒಂದು ವೇಳೆ ಸರ್ಕಾರವು ಇ-ಆಡಳಿತ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಜಾರಿಗೆ ತಂದಲ್ಲಿ ಪ್ರತಿಯೊಬ್ಬರೂ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಈ ಮೂಲಕ ಅಕ್ರಮ ಚಿನ್ನ ವ್ಯವಹಾರಕ್ಕೆ ಕಡಿವಾಣ ಹಾಕಬಹುದಾಗಿದೆ. ಆರು ಅಂಕೆಗಳ ವಿನೂತನ ಗುರುತಿನ ಸಂಖ್ಯೆಯನ್ನು ಜಾರಿಗೆ ತಂದರೆ ಎಲ್ಲರೂ ಚಿನ್ನದ ಉತ್ಪನ್ನಗಳಲ್ಲಿ ಕಡ್ಡಾಯವಾಗಿ ಹಾಲ್‌ಮಾರ್ಕಿಂಗ್ ಅನ್ನು ಖಾತರಿಪಡಿಸಲಿದ್ದಾರೆ.
ಹಾಲ್‌ಮಾರ್ಕಿಂಗ್‌ನಿಂದ ಚಿನ್ನಾಭರಣಗಳ ತಯಾರಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಇದರಿಂದ ಮಾರಾಟಗಾರರು ಶುದ್ಧ ಚಿನ್ನವನ್ನು ಮಾರಾಟ ಮಾಡಬಹುದು, ಇದರ ಮೂಲಕ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಆದ್ದರಿಂದ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯ ಮಾಡುವ ಸರ್ಕಾರದ ನಿರ್ಧಾರಕ್ಕೆ ಇಡೀ ಉದ್ಯಮವು ಬೆಂಬಲ ನೀಡಬೇಕು.

Related Posts

Leave a Reply

Your email address will not be published.