ಡಾ. ಎನ್‍ ಎಸ್‍ ಎಎಂನಲ್ಲಿ ಇಂಟಿಗ್ರೇಟೆಡ್ ಪಿಯು ಬ್ಯಾಚ್‍ಗಳ ಪ್ರಾರಂಭ

ನಿಟ್ಟೆ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾಗಿರುವ ಮಂಗಳೂರಿನ ಡಾ| ಎನ್‍ಎಸ್‍ಎಎಂ ಪದವಿಪೂರ್ವ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಇಂಟಿಗ್ರೇಟೆಡ್ ಪಿಯು ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ.

ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್. ವಿನಯ ಹೆಗ್ಡೆಯವರ ಅಭಿಪ್ರಾಯದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ / ಜೆಇಇ ಮತ್ತು ಸಿಇಟಿ ಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ ಅವರ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವುದರಿಂದ ಕೋಚಿಂಗ್ ತಜ್ಞರ ಮತ್ತು ಪ್ರತಿಷ್ಠಿತ, ಅನುಭವಿ ಶಿಕ್ಷಕರ ಸೇವೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.

ಈ ತರಬೇತಿ ಪಡೆದ ವಿದ್ಯಾರ್ಥಿಗಳು ಯಶಸ್ವಿಯಾಗಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್‍ನಂತಹ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದು. ಈ ವಿಶೇಷ ತರಬೇತಿಗಾಗಿ ಶ್ರೀ ಆಂಡೊ ಪೌಲ್ ನೇತೃತ್ವದ ಎಕ್ಸಾಮ್ಸ್ 24*7 ಡಾಟ್.ಕಾಂ ತಂಡವು ನಿಟ್ಟೆ ಶಿಕ್ಷಕರೊಂದಿಗೆ ಸಹಕರಿಸುತ್ತಿದೆ.
ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿಯವರಾದ ಶ್ರೀ ವಿಶಾಲ್ ಹೆಗ್ಡೆಯವರು -ಡಾ| ಎನ್‍ಎಸ್‍ಎಎಂ ಪಿಯು ಕಾಲೇಜು ಪ್ರತಿ ವಿದ್ಯಾರ್ಥಿಗೆ ವೈಯುಕ್ತಿಕ ಗಮನವನ್ನು ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿನಿಲಯಗಳನ್ನು ಒಳಗೊಂಡಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದರು. ನಿಟ್ಟೆ ವಿದ್ಯಾಸಂಸ್ಥೆಯು ರಾಷ್ಟ್ರೀಯ
ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಪಡೆದ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಶಿಕ್ಷಣಸಂಸ್ಥೆಗಳು ಸೇರಿದಂತೆ 30ಕ್ಕೂ ಹೆಚ್ಚು ಸಂಸ್ಥೆಗಳನ್ನು ಮುನ್ನಡೆಸುತ್ತಿದೆ.
ಮಾಹಿತಿ ಪ್ರಕಟಣೆಯ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಪತಿಯವರಾದ ಡಾ| ಎಂ.ಎಸ್. ಮೂಡಿತ್ತಾಯ, ಡಾ| ಎನ್‍ಎಸ್‍ಎಎಂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ| ನವೀನ್ ಶೆಟ್ಟಿ ಕೆ, ಉಪಪ್ರಾಂಶುಪಾಲರು ಶ್ರೀಮತಿ ಅನುಪಮಾ ನಾೈಕ್ ಉಪಸ್ಥಿತರಿದ್ದರು.

ಡಾ| ಎನ್‍ಎಸ್‍ಎಎಂ ಪಿಯು ಕಾಲೇಜಿನಲ್ಲಿ ಇಂಟಿಗ್ರೇಟೆಡ್ ಪಿಯು ಬ್ಯಾಚ್ ಗೆ ಸೇರಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಪ್ರವೇಶಾತಿಗಾಗಿ 8722454431,9686227426 ಅಥವಾ 9880025624 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

Related Posts

Leave a Reply

Your email address will not be published.