ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಕೊಟ್ಟ ದೂರಿನ ಶೀಘ್ರ ತನಿಕೆಗೆ ಸಿಪಿಐ ಒತ್ತಾಯ

ಮಂಗಳೂರಿನ ಪ್ರಖ್ಯಾತ ವೈದ್ಯ ಡಾ| ಬಿ ಶ್ರೀನಿವಾಸ ಕಕ್ಕಿಲ್ಲಾಯರು ಮತ್ತು ಜಿಮ್ಮೀಸ್ ಮಾರ್ಕೇಟಿನ ಸಿಬ್ಬಂದಿ ಮಧ್ಯೆ ನಡೆಯಿತೆನ್ನಲಾದ ಮಾತುಕತೆಗಳ ರಹಸ್ಯ ಸಿಸಿ ಟಿವಿ ದೃಶ್ಯವನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಜಿಮ್ಮೀಸ್ ಸುಪರ್ ಮಾರ್ಕೇಟ್ ಮಾಲಕರ ವಿರುದ್ಧ ಹಾಗೂ ಜಿಮ್ಮೀಸ್ ಮಾಲಕ ಮತ್ತು ಪೈ ಎಂಬವರು ಡಾ| ಕಕ್ಕಿಲ್ಲಾಯರನ್ನು, ಕಮ್ಯುನಿಷ್ಟ್ ಪಕ್ಷವನ್ನು, ಡಾಕ್ಟರರ ತಂದೆ ಬಿ ವಿ ಕಕ್ಕಿಲ್ಲಾಯರನ್ನು ದೂಷಿಸುತ್ತಾ ಫೋನು ಮಾತುಕತೆ ನಡೆಸಿರುವುದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಬಗ್ಗೆ ಜಿಮ್ಮೀಸ್ ಮಾಲಕ ಮತ್ತು ಪೈ ಎಂಬವರ ವಿರುದ್ಧ, ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಕದ್ರಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವರು. ಆದರೆ ಕದ್ರಿ ಪೋಲಿಸ್ ಠಾಣೆ ಆಪಾದಿತರ ವಿರುದ್ಧ ಯಾವುದೇ ಕ್ರಮ ಇಂದಿನವರೆಗೆ ಕೈಗೊಂಡಿಲ್ಲ.

ಈ ದೂರಿನ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) ಕಮ್ಯುನಿಸ್ಟ್ ಪಕ್ಷ-ರ್ಮಾಕ್ಸಿಸ್ಟ್(ಸಿಪಿಐಮ್), ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ, ಸಿಐಟಿಯು ಹಾಗೂ ಯುವ ಸಂಘಟನೆಗಳಾದ ಎಐವೈಎಫ್, ಡಿವೈಎಫ್‌ಐ ಮುಂತಾದ ಸಂಘಟನೆಗಳ ಪ್ರತಿನಿಧಿಗಳು ಇಂದು ಪೋಲಿಸ್ ಕಮಿಷನರನ್ನು ಬೇಟಿಯಾಗಿ ಮನವಿಯೊಂದನ್ನು ಅರ್ಪಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿರುವೆ ಎಂದು ಪೊಲೀಸ್ ಕಮಿಷನರ್ ಆಶ್ವಾಸನೆ ನೀಡಿರುವರು.ಈ ಮನವಿ ಸಲ್ಲಿಸುವ ನಿಯೋಗದಲ್ಲಿ ಸಿಪಿಐನ ವಿ ಕುಕ್ಯಾನ್, ಸಾಮಾಜಿಕ ಕಾರ್ಯಕರ್ತ ನಾಗೇಶ ಕಲ್ಲೂರ್, ಸಿಪಿಐಮ್‌ನ ಬಾಲಕೃಷ್ಣ ಶೆಟ್ಟಿ ಎಐಟಿಯುಸಿಯ ಎಚ್ ವಿ ರಾವ್, ಸಿಐಟಿಯುನ ಸುನಿಲ್ ಕುಮಾರ್ ಬಜಾಲ್, ಎಐವೈಎಫ್‌ನ ಜಗತ್‌ಪಾಲ್ ಡಿವೈಎಫ್‌ಐನ ಸಂತೋಷ್ ಕುಮಾರ್ ಬಜಾಲ್ ಮುಂತಾದವರು ಭಾಗವಹಿಸಿದ್ದರು.

Related Posts

Leave a Reply

Your email address will not be published.