ಡ್ರಗ್ಸ್ ಮುಕ್ತ ಮಂಗಳೂರಿಗೆ ಸಹಕರಿಸಿ: ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್

ಮಂಗಳೂರು ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕದ್ರವ್ಯಗಳಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳನ್ನು ಪತ್ತೆಹಚ್ಚಿರುವುದಲ್ಲದೆ, ಪ್ರಮುಖ ಆರೋಪಿಗಳನ್ನೂ ಬಂಧಿಸಲಾಗಿದೆ. ಡ್ರಗ್ಸ್ ಮುಕ್ತ ಮಂಗಳೂರು ಮಾಡುವಲ್ಲಿ ಇಲಾಖೆ ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಜನರು ಸಹಕರಿಸಬೇಕೆಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಅವರು ಮಂಗಳೂರಲ್ಲಿ ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದೋಬಸ್ತ್‌ಗಳ ವೀಕ್ಷಣೆ ಮಾಡಿ, ಸುದ್ದಿಗಾರದೊಂದಿಗೆ ಮಾತನಾಡಿದ್ರು, ಇಂದು ಅಂತಾರಾಷ್ಟ್ರೀಯ ಡ್ರಗ್ಸ್ ವಿರೋಧಿ ದಿನಾಚರಣೆಯಾಗಿದ್ದು, ಕರ್ನಾಟಕಾದ್ಯಂತ ಡಿಜಿಪಿ ಪ್ರವೀಣ್ ಸೂದ್‌ರವರ ನಿರ್ದೇಶನದ ಮೇರೆಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿರುವ, ವಿಲೇ ಆಗದಿರುವ ಎಲ್ಲಾ ಮಾದಕ ದ್ರವ್ಯಗಳನ್ನು ವಿಲೇ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ನ್ಯಾಯಾಲಯದಲ್ಲಿ ಇತ್ಯರ್ಥ ಆಗಿರುವ ಪ್ರಕರಣಗಳಲ್ಲಿ ಹಾಗೂ ತನಿಖೆಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿ ಇಲಾಖೆಯ ಡ್ರಗ್ಸ್ ವಿಲೇ ಸಮಿತಿಯ ನಿರ್ಧಾರದಂತೆ, ನ್ಯಾಯಾಲಯ ಹಾಗೂ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯೊಂದಿಗೆ ಡ್ರಗ್ಸ್ ವಿಲೇ ಕಾರ್ಯವನ್ನು ಮಂಗಳೂರು ನಗರದ ಹೊರವಲಯದ ಮುಲ್ಕಿ ಎಂಬಲ್ಲಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ವರ್ಷದಲ್ಲಿ ಡ್ರಗ್ಸ್ ಮಾರಾಟ, ಸೇವನೆ ಹಾಗೂ ಪೂರೈಕೆಗೆ ಸಂಬಂಧಿಸಿ 214ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. 3೦೦ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿದ್ದುಕೊಂಡು ಡ್ರಗ್ಸ್ ವ್ಯವಹಾರ ಮಾಡುತ್ತಿದ್ದ ನೈಜೀರಿಯಾ ಪ್ರಜೆ, ಒಮನ್ ಪ್ರಜೆ ಹಾಗೂ ಕೇರಳದ ಹಲವು ಜಿಲ್ಲೆ ಹಾಗೂ ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಕೇರಳದ ಆರೋಪಿಯನ್ನೂ ಇತ್ತೀಚೆಗೆ ಬಂಧಿಸಲಾಗಿದೆ. ಸಮಾಜವನ್ನು ಡ್ರಗ್ಸ್ ಮುಕ್ತ ಮಾಡುವಲ್ಲಿ ನಾವೆಲ್ಲಾ ಸಂಕಲ್ಪ ಮಾಡೋಣ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕರೆ ನೀಡಿದರು.

Related Posts

Leave a Reply

Your email address will not be published.