ತೆಂಕನಿಡಿಯೂರು : ಗದ್ದೆಗಿಳಿದ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಪ್ರಾಂಶುಪಾಲರು ಮತ್ತು  ಉಪನ್ಯಾಸಕರು, ವಿದ್ಯಾರ್ಥಿಗಳು ಉಡುಪಿಯ ಕುತ್ಪಾಡಿಯಲ್ಲಿ ಗದ್ದೆಗಿಳಿದು ಕಳೆಕೀಳುವ ಕಾರ್ಯವನ್ನು ನಡೆಸಿದರು.

ಕೇದಾರೋತ್ಪನ್ನ ಟ್ರಸ್ಟ್ ಉಡುಪಿಯ 1500 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಕಾರ್ಯವನ್ನು ಕೈಗೊಂಡಿದೆ. ಪರಿಸರದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅವರಿಗೆ ತರಬೇತಿ ನೀಡುವುದರೊಂದಿಗೆ ಕೃಷಿ ಕಾರ್ಯವನ್ನು ಕೈಗೊಳ್ಳುತ್ತಿದೆ. ಅದರ ಅಂಗವಾಗಿ ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು, ಹದಿನಾರು ಉಪನ್ಯಾಸಕರು ಹಾಗೂ 60 ವಿದ್ಯಾರ್ಥಿಗಳು ಕಳೆಕೀಳುವ ಕಾರ್ಯವನ್ನು ನಡೆಸಿದರು. ಉಪನ್ಯಾಸಕರು ಗದ್ದೆಗಿಳಿದು ಕೆಲಸ ಮಾಡಿದ್ದು ಪರಿಸರದ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಶಾಸಕರಾದ ಕೆ. ರಘುಪತಿ ಭಟ್ ಅವರು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು,ವಿದ್ಯಾರ್ಥಿ ಸಮೂಹ ಕೃಷಿ ಕಾರ್ಯಗಳ ಬಗ್ಗೆ ಗಮನ ನೀಡಬೇಕೆಂದು ಸಂದೇಶ ನೀಡಿದೆ. ಹೊಸ ಶಿಕ್ಷಣ ನೀತಿಯಲ್ಲಿರುವಂತೆ ಸಮುದಾಯದೊಂದಿಗೆ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಇಂತಹ ಚಟುವಟಿಕೆಗಳು ಪೂರಕ ಎಂದು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನಕರಬಾಬು, ರಂಗಕಲಾವಿದ ಶ್ರೀ ಪ್ರದೀಪ್ ಕುತ್ಪಾಡಿ, ಸಂಘಟಕ ಶ್ರೀ ಮುರಳೀ ಕಡೆಕಾರ್ ಉಪಸ್ಥಿತರಿದ್ದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸುಮಾರು 1 ಎಕ್ರೆ ಪ್ರದೇಶದ ಗದ್ದೆಯಲ್ಲಿ ಕಳೆಕೀಳುವ ಕಾರ್ಯವನ್ನು ನಡೆಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ ಪಾಟ್ಕರ್ ಕಾರ್ಯಕ್ರಮವನ್ನು ಸಂಘಟಿಸಿದರು.

Related Posts

Leave a Reply

Your email address will not be published.