ದ.ಕ.ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫೂ ರದ್ದಾಗಲಿ :ಸಿಪಿಐ(ಎಂ)

ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಎಲ್ಲಾ ವಿಭಾಗದ ಜನತೆಗೆ ವಿನಾಃ ಕಾರಣ ತೊಂದರೆ ನೀಡುವ ವಾರಾಂತ್ಯದ ಕರ್ಫ್ಯೂವನ್ನು ಕೂಡಲೇ ರದ್ದುಮಾಡಬೇಕೆಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

CPIM ಹಿರಿಯ ನಾಯಕರಾದ ಕಾಂ.ಕೆ ಆರ್ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಿಪಿಐ(ಎಂ)ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಅವೈಜ್ಞಾನಿಕ ಕರ್ಫೂನಿಂದಾಗಿ ಕೋರೋನ ನಿಯಂತ್ರಣ ಆಗುವುದರ ಬದಲಿಗೆ ನಾಗರೀಕರಿಗೆ ಸಂಕಷ್ಟವನ್ನು ವಿಪರೀತವಾಗಿ ಹೆಚ್ಚಿಸಿದೆ. ಹೋಟೇಲ್,ಬಟ್ಟೆ,ಚಪ್ಪಲ್ ಶೂ ಅಂಗಡಿ,ತರಕಾರಿ ಅಂಗಡಿಗಳಿಗೆ ನಷ್ಟದಾರಿಯನ್ನು ತೋರಿಸುತ್ತಿರುವ ಜಿಲ್ಲಾಡಳಿತದ ಕ್ರಮವನ್ನು ಸಭೆಯು ತೀವ್ರವಾಗಿ ಖಂಡಿಸಿದೆ.ಸರಕಾರದ ಮಾರ್ಗಸೂಚಿ ಪ್ರಕಾರ ಪಾಸಿಟಿವ್ ದರ 5%ಕ್ಕಿಂತ ಕೆಳಗಡೆ ಬಂದರೆ ಲಾಕ್ ಡೌನ್ ತೆರವುಗೊಳಿಸಬೇಕು,2%ಕ್ಕಿಂತ ಕೆಳಗಡೆ ಬಂದರೆ ಶಾಲಾ ಕಾಲೇಜುಗಳನ್ನು ತೆರಯಬೇಕೆಂದಿದ್ದರೂ, ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಪಾಸಿಟಿವ್ ದರ 2% ಕ್ಕಿಂತ ಕೆಳಗಡೆ ಇಳಿದಿದ್ದರೂ ವಾರಾಂತ್ಯದ ಕರ್ಫೂ ವಿಧಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುತ್ತಿರುವುದು ಅವೈಜ್ಞಾನಿಕ ಕ್ರಮವಲ್ಲದೆ ಮತ್ತೇನು ಎಂದು ಪ್ರಶ್ನಿಸಿರುವ CPIM, ಜನರ ನೋವಿಗೆ ಸ್ಪಂದಿಸಬೇಕಾಗಿದ್ದ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ದಿವ್ಯ ಮೌನವಹಿಸಿ ಜಿಲ್ಲಾಧಿಕಾರಿಗಳ ಏಕಪಕ್ಷೀಯ ತೀರ್ಮಾನಕ್ಕೆ ಸಮ್ಮತಿ ನೀಡಿರುವುದು ಕೂಡ ಖಂಡನೀಯವಾಗಿದೆ. ವಾರಾಂತ್ಯದ ಕರ್ಪೂವನ್ನು ಕೂಡಲೇ ರದ್ದು ಪಡಿಸದ್ದರೆ ಜಿಲ್ಲೆಯ ಜಾತ್ಯಾತೀತ ಪಕ್ಷಗಳು ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು CPIM ದ.ಕ.ಜಿಲ್ಲಾ ಸಮಿತಿ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

Related Posts

Leave a Reply

Your email address will not be published.