Header Ads
Breaking News

ನಂದಿಕೂರಿನಲ್ಲಿ ಭಾರತಮಾತ ಪೂಜನಾ ಕಾರ್ಯಕ್ರಮ ಹಾಗೂ ದುರ್ಗಾ ದೌಡ್ ಬಗೆಗಿನ ಪೂರ್ವಭಾವಿ ಸಭೆ

ಹಿಂದು ಜಾಗರಣಾ ವೇದಿಕೆ ನಂದಿಕೂರು ಘಟಕದ ಉಡುಪಿಯಲ್ಲಿ ನಡೆಯಲಿರುವ ಭಾರತ ಮಾತಾ ಪೂಜನಾ ಕಾರ್ಯಕ್ರಮ ಮತ್ತು ದುರ್ಗಾ ದೌಡ್ ಪೂರ್ವಭಾವಿಯಾಗಿ ವಿಶೇಷ ಬೈಠಕ್ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಪ್ರತೀಕ್ ಕೋಟ್ಯಾನ್ ನವರ ನಂದಿಕೂರಿನ ಮನೆಯಲ್ಲಿ ನಡೆಯಿತು.


ಈ ಸಂದರ್ಭ ನಾಗರಾಜ ಭಟ್ ರವರು ಕಾಶಿ,ಅಯೋಧ್ಯೆ ಕ್ಷೇತ್ರ ಸಂದರ್ಶಿಸಿ ತಂದಿದ್ದ ಪವಿತ್ರವಾದ ತೀರ್ಥಪ್ರಸಾದವನ್ನು ಸದಸ್ಯರಿಗೆ ನೀಡಿ ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮವನ್ನು ಹಿಂ.ಜಾ.ವೇ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಸೂಡ ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ಹಿಂ.ಜಾ.ವೇ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಉಚ್ವಿಲ, ತಾಲೂಕು ಅಧ್ಯಕ್ಷರು ಶಶಿಧರ್ ಹೆಗ್ದೆ, ತಾಲೂಕು ಪ್ರಚಾರ ಪ್ರಮುಖ್ ಸಂತೋಷ್ ನಂಬಿಯಾರ್ ಕಂಚಿನಡ್ಕ, ಹಿಂದು ಮುಖಂಡರಾದ ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ನಿತಿನ್ ಶೆಟ್ಟಿ ಅಡ್ವೆ,ಸತೀಶ್ ದೇವಾಡಿಗ ನಂದಿಕೂರು, ಪಡುಬಿದ್ರಿ ವಲಯ ಅಧ್ಯಕ್ಷ ಪ್ರತೀಕ್ ಕೋಟ್ಯಾನ್, ವಲಯ ಉಪಾಧ್ಯಕ್ಷ ಉಮಾನಾಥ್ ಮೆಂಡನ್, ವಲಯ ಪ್ರಧಾನ ಕಾರ್ಯದರ್ಶಿ ಸುಹಾಸ್ ಶೆಟ್ಟಿ ನಟವರ್ಯ, ನಂದಿಕೂರು ಘಟಕಾಧ್ಯಕ್ಷ ನಿತಿನ್ ಶೆಟ್ಟಿ, ಘಟಕ ಉಪಾಧ್ಯಕ್ಷ ಸುಕೇಶ್ ಕುಲಾಲ್ ಉಪಸ್ಥಿತರಿದ್ದರು.