ನಿಟ್ಟೆ ಡಾ. ಶಂಕರ್ ಅಡ್ಯಂತಾಯ ಸ್ಮಾರಕ ಕಾಲೇಜು: ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಉಳ್ಳಾಲ: ಮಂಗಳೂರಿನ ನಂತೂರಿನಲ್ಲಿ ಕಾರ್ಯಚರಿಸುತ್ತಿರುವ ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸೋಮೇಶ್ವರ ಕಡಲ ಕಿನಾರೆಯ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು.

ಶಾಸಕ ಯು.ಟಿ ಖಾದರ್ ಸ್ವಚ್ಛ ಭಾರತ ಅಭಿಯಾನ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಾಲೇಜಿನಲ್ಲಿ ಕಲಿತ ಪಾಠಗಳು ಆತನ ವ್ಯಕ್ತಿತ್ವ ರೂಪಿಸುತ್ತದೆ. ಅಲ್ಲಿ ಪಡೆದ ಶಿಕ್ಷಣವೇ ಅವರ ಮುಂದಿನ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆಯಾಗಬಲ್ಲದು. ಆರೋಗ್ಯವಂತ ಸಮಾಜಕ್ಕೆ ಸ್ವಚ್ಛತೆಯೇ ತಳಹದಿ ಈ ನಿಟ್ಟಿನಲ್ಲಿ ಮಂಗಳೂರಿನ ಡಾ. ಎನ್. ಎಸ್.ಎ. ಎಮ್. ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ವಚ್ಛತಾ ಕಾಳಜಿ ಮಾದರಿಯಾದುದು ಎಂದು ಹೇಳಿದರು.

ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಸ್ವಚ್ಛತೆ ದಿನನಿತ್ಯದ ಅಭ್ಯಾಸವಾಗಬೇಕು. ಹಳೆವಿದ್ಯಾರ್ಥಿಗಳ ಈ ಕಾರ್ಯ ಸ್ಫೂರ್ತಿದಾಯಕವಾದುದು. ಈ ದೇಶದ ನೆಲ, ಜಲ, ಗಾಳಿ ಉಪಯೋಗಿಸುವ ನಮಗೆ ಅವನ್ನೆಲ್ಲ ಸ್ವಚ್ಛವಾಗಿರಿಸುವ ಹೊಣೆಗಾರಿಕೆಯೂ ಇದೆ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವು ಸ್ವಚ್ಛವಾಗೋಣ, ಪರಿಸರ ಸ್ವಚ್ಛವಾಗಿಡೋಣ ಆ ಮೂಲಕ ಇಡೀ ದೇಶವನ್ನು ಸ್ವಚ್ಛಮಾಡುವ ಸಂಕಲ್ಪ ಮಾಡೋಣ, ರಾಷ್ಟ್ರ ನಾಯಕರ ಸಂಕಲ್ಪ ಸಾಕಾರಗೊಳಿಸಿ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಿಸಬೇಕು ಎಂಬ ಹೇಳಿದರು

ಈ ಸಂದರ್ಭ ಇತ್ತೀಚೆಗೆ ಸಿ.ಎ ಪರೀಕ್ಷೆ ತೇರ್ಗಡೆಯಾದ ಸಂಸ್ಥೆಯ ಹಳೆವಿದ್ಯಾರ್ಥಿ ಸುನಿಲ್ ರವರನ್ನು ಶಾಸಕ ಯು.ಟಿ ಖಾದರ್ ಗೌರವಿಸಿದರು.
ಸಂಸ್ಥೆಯ ಉಪಪ್ರಾಂಶುಪಾಲರಾದ ಅನ್ನಪೂರ್ಣ ನಾಯ್ಕ್, ಹಳೆವಿದ್ಯಾರ್ಥಿ ಸಂಘದ ಉಸ್ತುವಾರಿ ಉಪನ್ಯಾಸಕಿ ಸಂಗೀತ ಶೆಟ್ಟಿ, ವಿದ್ಯಾರಾಣಿ ಆಳ್ವ, ವೀಣಾ ಉಳ್ಳಾಲ್, ಗೀತಾ ಶೆಟ್ಟಿ,ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ , ಕುಮಾರಿ ಚಿನ್ಮಯಿ ವಿ.ಭಟ್, ಕುಮಾರಿ ಬಿಂದಿಯಾ ಶೆಟ್ಟಿ , ಕಾರ್ತಿಕ್ ನಾಯಕ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.