ನಿವೃತ್ತ ವೀರಯೋಧ ಲಾರೆನ್ಸ್ ಡಿಸೋಜ ನಿಧನ: ನಿವೃತ್ತ ಸೈನಿಕರ ಸಂಘದಿಂದ ಅಂತಿಮ ಗೌರವ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರಯೋಧ (ನಿವೃತ್ತ) ಲಾರೆನ್ಸ್ ಡಿಸೋಜ ಪಣಪಿಲ ಇವರು ನಿಧನರಾಗಿದ್ದು ನಿವೃತ್ತ ಸೈನಿಕರ ಸಂಘ ಮೂಡುಬಿದಿರೆ ಇವರಿಂದ ಅಂತಿಮ ಗೌರವ ಸಲ್ಲಿಸಲಾಯಿತು.

ದೇಶದ ತ್ರಿವರ್ಣ ಧ್ವಜವನ್ನು ಮೃತದೇಹದ ಮೇಲೆ ಹೊದಿಸಿ ಸರ್ಕಾರಿ ಸಮಾನ ಗೌರವ ಅರ್ಪಿಸಲಾಯಿತು. ಮೃತ ಯೋಧ ಲಾರೆನ್ಸ್ ಡಿಸೋಜರವರು ಭಾರತೀಯ ಭೂಸೇನೆಯಲ್ಲಿ ಸುಮಾರು ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜಮ್ಮು ಕಾಶ್ಮೀರ, ಅಲಹಾಬಾದ್ ಸೇರಿದಂತೆ ವಿವಿದೆಡೆ ಸೇವೆ ಸಲ್ಲಿಸಿದ್ದರು. ೯೮ ವಯಸ್ಸಾಗಿದ್ದು ವಯೋಸಹಜ ಸಮಸ್ಯೆಯನ್ನು ಹೊಂದಿದ್ದು ನಿಧನರಾಗಿದಗದಾರೆ. ವಿಷಯ ತಿಳಿದ ನಿವೃತ್ತ ಯೋಧರು, ರಾಜ್ಯ ಬಿಜೆಪಿಯ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಕೂಡಲೇ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ದರೆಗುಡ್ಡೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತುಳಸಿ ಮೂಲ್ಯ, ಉಪಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಸದಸ್ಯರಾದ ಮುನಿರಾಜ್ ಹೆಗ್ಡೆ ಪಣಪಿಲ, ದೀಕ್ಷಿತ್ ಪಣಪಿಲ, ಜನಿತಾ ಪಣಪಿಲ, ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ರುಕ್ಕಯ್ಯ ಪೂಜಾರಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಣ ಸುವರ್ಣ,ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅಶ್ವಥ್ ಪಣಪಿಲ, ಪ್ರಮುಖರಾದ ಸುಧಾಕರ ಡಿ.ಪೂಜಾರಿ ಪಣಪಿಲ, ಸಚಿನ್ ಪಣಪಿಲ, ಸುನಿಲ್ ಪೂಜಾರಿ ನಂದೊಟ್ಟು ಹಾಗೂ ಇತರರು ಅಂತಿಮ ನಮನ ಸಲ್ಲಿಸಿದರು

Related Posts

Leave a Reply

Your email address will not be published.