ನೀರುಮಾರ್ಗದ ಸುಬ್ರಹ್ಮಣ್ಯ ಭಜನಾ ಮಂದಿರ ಕಳವು ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ

ಮಂಗಳೂರು: ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ ಮಂಗಳೂರು ಇತ್ತೀಚಿಗೆ ಮಂದಿರದಲ್ಲಿ ನಡೆದ ಕಳವು ಪ್ರಕರಣ, ಗರ್ಭಗುಡಿಯ ಪಾವಿತ್ರ್ಯತೆಗೆ ದಕ್ಕೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿವಂತೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳು ಸೇರಿ ಮಂಗಳೂರು ನಗರದ ಹೊರವಲಯದ ನೀರುಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ವಿಹೆಚ್‍ಪಿ ಮುಖಂಡ ಶರಣ್ ಪಂಪ್ವೆಲ್ ಮಾತನಾಡಿ, ಭಜನಾ ಮಂದಿರ ಕೇವಲ ಭಜನ ಕೇಂದ್ರ ಅಲ್ಲ ಅದು ಶ್ರದ್ದಾ ಕೇಂದ್ರ ಆಗಿದೆ. ಆದ್ರೆ ಅಂತಹಾ ಪವಿತ್ರ ಸ್ಥಳಕ್ಕೆ ಕಳ್ಳರು ನುಗ್ಗಿ ವಿಗ್ರಹ ಕಳವು ಮಾಡ್ತಾರೆ ಮಾತ್ರವಲ್ಲದೆ ಈ ಭಾಗದಲ್ಲಿ ಅನೇಕ ದೇವಾಲಯ ಭಜನಾ ಮಂದಿರಗಳ ಈ ರೀತಿಯ ಕೃತ್ಯ ಹೇರಳವಾಗಿ ನಡಿತಾ ಇದೆ. ಇನ್ನೂ ಜಿಲ್ಲೆಯ ಅನೇಕ ಹಿಂದೂ ವಿರೋಧ ಕೃತ್ಯಗಳ ನಡಿಯುತ್ತಿದೆ ದೇವಾಲಯಗಳಿಗೆ ಅವರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕಾರ್ಯ ನಿರಂತರವಾಗಿ ಆಗ್ತಾ ಇದೆ. ಇದ್ರ ವಿರುದ್ಧ ಹಿಂದೂ ಸಮಾಜ ಜಾಗೃತರಾಗಬೇಕು ಇನ್ನೂ ಈ ಭಾಗದಲ್ಲಿ ನಡೆದ ಈ ಘಟನೆಯ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದ್ದರು.

ಪ್ರತಿಭಟನೆಯಲ್ಲಿ ಹಿಂದೂ ಮುಖಂಡರಾದ ಗಣರಾಜ್ ಭಟ್ ಖೆದಿಲಾಯ, ಸುಬ್ರಹ್ಮಣ್ಯ ಭಜನಾ ಮಂದಿರದ ಅರ್ಚಕರು ಶೇಷಾದ್ರಿ ಭಟ್, ಸುಬ್ರಹ್ಮಣ್ಯ ಭಜನಾ ಮಂಡಳಿಯ ಅಧ್ಯಕ್ಷ ತುಕಾರಾಂ ಮತ್ತಿತರರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.