ನ.21ರಿಂದ ಜ.7ರ ತನಕ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ

ಪುತ್ತೂರು ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಾರ್ಪಾಡಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 21 ರಂದು ಆರಂಭಗೊಂಡು ಜನವರಿ 7 ರ ತನಕ ನಿರಂತರ 48  ದಿನಗಳ ಕಾಲ (ಒಂದು ಮಂಡಲ) ಸಂಜೆ ವಿಶೇಷ ರಂಗಪೂಜೆ ನಡೆಯಲಿದೆ.The Karpadi Subramanya Temple Puttur

ಮೂರನೇ ವರ್ಷದಲ್ಲಿ ನಡೆಯುತ್ತಿರುವ ಈ ವಿಶೇಷ ರಂಗಪೂಜೆಯು ಕಾರ್ಪಾಡಿ, ಶ್ರೀ. ಸುಬ್ರಹ್ಮಣ್ಯ ಕ್ಷೇತ್ರದ ವಿಶೇಷತೆಗಳಲ್ಲಿ ಒಂದು. ನಿರಂತರ 48 ದಿನಗಳ ಕಾಲ ನಡೆಯುವ ರಂಗಪೂಜೆಯಲ್ಲಿ ಪ್ರತೀದಿನ 12 ಕುಟುಂಬಗಳಿಗೆ ಸೇವೆ ಮಾಡಿಸಲು ಅವಕಾಶವಿದೆ. ಪೂಜೆ ಬಳಿಕ ಅನ್ನದಾನ ಸೇವೆಯೂ 48 ದಿನಗಳಲ್ಲಿ ನಡೆಯಲಿದೆ. 48ನೇ ದಿನ ಜನವರಿ 7 ರಂದು ದೊಡ್ಡ ರಂಗಪೂಜೆ ನಡೆದು ವರ್ಷಾವಧಿ ಕಿರುಷಷ್ಠಿ ಜಾತ್ರೋತ್ಸವ ಆರಂಭಗೊಳ್ಳುತ್ತದೆ.

ಜನವರಿ 8 ಮತ್ತು 9 ರಂದು ಕಿರುಷಷ್ಠಿ ಉತ್ಸವ ಹಾಗೂವ್ಯಾಘ್ರ ಚಾಮುಂಡಿ ನೇಮೋತ್ಸವ ನೆರವೇರುತ್ತದೆ. ಫೆಬ್ರವರಿ 13 ರಂದು ಕಾರ್ಪಾಡಿ ಕ್ಷೇತ್ರದಅಧೀನಕ್ಕೊಳಪಟ್ಟ ಉಳ್ಳಾಲ್ತಿ, ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವವು ನಡೆಯಅದೆ.ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಎ. ಸುಧಾಕರ ರಾವ್ ಆರ್ಯಾಪು, ದೇವಯ್ಯ ಗೌಡ ದೇವಸ್ಯ, ಕಿಶೋರ ಗೌಡ ಮರಿಕೆ, ವಿಠಲ ರೈ ಮೇರ್ಲ, ವನಿತಾ ನಾಯಕ್ ಮರಿಕೆ, ವಿನಯ ನಾಯ್ಡ ಕೊಟ್ಲಾರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.