ನ.8ರಂದು ಲೇಡಿಹಿಲ್‌ನಲ್ಲಿ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಹೊಸ ಮಳಿಗೆ ಉದ್ಘಾಟನೆ

ಚಿನ್ನ ಮತ್ತು ವಜ್ರಾಭರಣಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ನ ಹೊಸ ಮಳಿಗೆ ನವಂಬರ್ 8ರಂದು ನಗರದ ಲೇಡಿಹಿಲ್‌ನಲ್ಲಿ ಗಣ್ಯರ ಸಮ್ಮುಖದಲ್ಲಿ  ಉದ್ಘಾಟನೆಗೊಳ್ಳಲಿದೆ.
1947ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ಚಿನ್ನಾಭರಣ ಮಳಿಗೆ ಕೇವಲ ಕರಾವಳಿಯಲ್ಲಿ ಮಾತ್ರವಲ್ಲ ನೆರೆಹೊರೆಯ ಜಿಲ್ಲೆಯವರಿಗೂ ಚಿರಪರಿಚಿತವಾಗಿದೆ. ಆಭರಣಗಳ ಸುಂದರ ವಿನ್ಯಾಸ ಮತ್ತು ಕಸೂತಿ ಕೌಶಲದಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಮೊದಲು ನಗರದ ಲೇಡಿಹಿಲ್‌ನಲ್ಲಿಯೇ 2017 ಜೂನ್.16ರಂದು ನವೀಕೃತ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ಸ್ಥಾಪನೆಯಾಗಿತ್ತು. ಎಸ್.ಎಲ್ ಶೇಟ್ ಡೈಮಂಡ್ ಹೌಸ್‌ನ ಆಭರಣಗಳ ವಿನ್ಯಾಸಗಳಿಗೆ ಸಾಕಷ್ಟು ಪ್ರಶಸ್ತಿ ಮತ್ತು ಮೆಚ್ಚುಗೆ ಕೂಡ ಸಿಕ್ಕಿದೆ. ವಿಶೇಷವಾಗಿ 2018ರಲ್ಲಿ ಗೋವಾದಲ್ಲಿ ನಡೆದ ಇಂಟರ್ ನ್ಯಾಶನಲ್ ಫೇಮ್ ಅವಾರ್ಡ್, 2018ರಲ್ಲಿ ಮಂಗಳೂರಿನ ಅತ್ಯುತ್ತಮ ಜ್ಯುವೆಲರಿ ಮಳಿಗೆ ಎನ್ನುವ ಪ್ರಶಸ್ತಿಗೆ ಭಾಜನವಾಗಿದೆ.


ಲೇಡಿಹಿಲ್‌ನಲ್ಲಿ ಹೊಸ ಮಳಿಗೆ ಉದ್ಘಾಟನೆಗೊಳ್ಳಲಿದ್ದು, ಈ ಶಾಖಾ ಮಳಿಗೆ ಪಾರ್ಕಿಂಗ್ ಸೌಲಭ್ಯ ಸಹಿತ 15,೦೦೦ ಚದರ ಅಡಿ ವಿಸ್ತೀರ್ಣ ಹೊಂದಿದ್ದು, 916 ಚಿನ್ನಾಭರಣ, ವಜ್ರಾಭರಣಗಳು, ಅಮೂಲ್ಯ ಸ್ಟೋನ್‌ಗಳು, ಪ್ಲಾಟಿನಂ, ನವರತ್ನ ಸ್ಟೋನ್‌ಗಳು, ಬೆಳ್ಳಿಯ ಆಭರಣಗಳು ಹಾಗೂ ಇತರ ವಸ್ತುಗಳ ಸಂಗ್ರಹವಿದೆ.
ಸಂಸ್ಥೆಯು ಗ್ರಾಹಕರಿಗೆ ಉದ್ಘಾಟನಾ ಕೊಡುಗೆಯನ್ನು ಪ್ರಕಟಿಸಿದ್ದು, 1 ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿ ಉಚಿತ ಹಾಗೂ 1 ಗ್ರಾಂ ಚಿನ್ನಕ್ಕೆ 150 ರೂ. ತನಕ ರಿಯಾಯಿತಿ ಇದೆ. ಈ ಕೊಡುಗೆ ನ.16ರ ತನಕ ಚಾಲ್ತಿಯಲ್ಲಿರುತ್ತದೆ.
ಎಸ್.ಎಲ್ ಶೇಟ್ ಡೈಮಂಡ್ ಹೌಸ್‌ನ ಪಾಲುದಾರರಾದ ಪ್ರಸಾದ್ ಶೇಟ್ ಮತ್ತು ಪ್ರಸನ್ನ ಶೇಟ್ ಅವರು ಮಾತನಾಡಿ, ನಗರದ ಲೇಡಿಹಿಲ್‌ನಲ್ಲಿ ನವೆಂಬರ್ ೮ರಂದು ಹೊಸ ಮಳಿಗೆ ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಶುಭಾರ್ಶೀವಾದಗಳೊಂದಿಗೆ ಶ್ರೀ ಕ್ಷೇತ್ರದ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಶೋರೂಂನ್ನು ಉದ್ಘಾಟಿಸಲಿದ್ದಾರೆ. ಇನ್ನೂ ಗ್ರಾಹಕರಿಗಾಗಿ ಉದ್ಘಾಟನಾ ಕೊಡುಗೆಯನ್ನು ಕೂಡ ಪ್ರಕಟಿಸಿದ್ದೇವೆ ಎಂದು ಹೇಳಿದರು.
ಇನ್ನು ನ.8ರಿಂದ 14ರ ಧನ್ ತೆರಾಸ್‌ವರೆಗಿನ ಅವಧಿಯಲ್ಲಿ ಗ್ರಾಹಕರು ಖರೀದಿಸುವ ಚಿನ್ನ ಮತ್ತು ವಜ್ರಾಭರಣ ಹಾಗೂ ಬೆಳ್ಳಿಯ ಆಭರಣ ಮತ್ತು ಬೆಳ್ಳಿಗೆ ವಿಶೇಷ ರಿಯಾಯಿತಿ ಸಿಗಲಿದೆ. ಎಚ್‌ಡಿಎಫ್‌ಸಿ ಕಾರ್ಡ್ ಬಳಕೆದಾರರಿಗೆ ಬ್ಯಾಂಕಿನಿಂದ ಶೇ.5ರಷ್ಟು ವಿನಾಯಿತಿ ಸಿಗಲಿದೆ.
ಎಸ್‌ಎಲ್ ಶೇಟ್ ಡೈಮಂಡ್ ಹೌಸ್ ಎಂ. ರವೀಂದ್ರ ಶೇಟ್, ಶರತ್ ಶೇಟ್ ಮತ್ತು ದೀಪ್ತಿ ಶೇಟ್, ಸುಮಂತ್ ಶೇಟ್, ಪ್ರಸಾದ್ ಶೇಟ್ ಹಾಗೂ ಪ್ರಸನ್ನ ಶೇಟ್ ಮತ್ತು ಕಾಂಚನ ಶೇಟ್, ಶಿವಾನಿ ಶೇಟ್, ಮಾಸ್ಟರ್ ವಿರಾಜ್ ಶೇಟ್ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.

 

Related Posts

Leave a Reply

Your email address will not be published.