ಪಡುಬಿದ್ರಿ ಬಾಲ ಗಣಪತಿಯ ಅಂತಿಮ ಶೋಭಾಯಾತ್ರೆಗೆ ಕ್ಷಣಗಣನೆ

ಪಡುಬಿದ್ರಿಯ ಇತಿಹಾಸ ಪ್ರಸಿದ್ಧ ಬಾಲಗಣಪತಿ(ಗುಡ್ಡೆ ಗಣಪತಿ) ದೇವರ ವಾರ್ಷಿಕ ಶೋಭಾಯಾತ್ರೆಗೆ ಕ್ಷಣ ಗಣನೆ ಆರಂಭಗೊಂಡಿದೆ.


ಗಣೇಶ ಚೌತಿಯ ದಿನದಂದ್ದು ಪ್ರತಿಷ್ಠಾಪನೆಗೊಂಡು ನವರಾತ್ರಿ ಸಂದರ್ಭ ತಾಯಿ ಶಾರದೆಯ ಒಂಭತ್ತು ದಿನಗಳ ಭವ್ಯ ಪೂಜಾ ಕೈಂಕರ್ಯಗಳನ್ನು ವೀಕ್ಷಿಸಿ ಎಲ್ಲಾ ಕಡೆಗಳಲ್ಲೂ ಶಾರದೆ ವಿಸರ್ಜನಾ ಕಾರ್ಯಕ್ರಮ ನಡೆದರೆ ಇಲ್ಲಿ ಮಾತ್ರ ಬಾಲಗಣೇಶನ ವಿಸರ್ಜನಾ ಮೆರವಣಿಗೆ ನಡೆಯುತ್ತಿದೆ. ಈ ಪುಣ್ಯಕ್ಷೇತ್ರದ ವಿಶೇಷತೆ ಏನೆಂದರೆ ಇಂದು ಬೃಹತ್ ಕಟ್ಟಡ ಹೊಂದಿದ ದೇವಾಲಯವಲ್ಲ. ಪುಟ್ಟ ಮಣ್ಣಿನ ಆಲಯದೊಳಗೆ ಗಣಪ ವಿರಾಜಮಾನನಾಗಿದ್ದಾನೆ. ಈ ಕ್ಷೇತ್ರದ ಹಿನ್ನಲೆ ಹೀಗಿದೆ… ಈ ಹಿಂದೆ ಗುಡ್ಡಗಳಿಗೆ ದನಗಳನ್ನು ಮೇಯಿಸಲು ಹೋಗುತ್ತಿದ್ದ ದನಗಾಯಿ ಬಾಲಕರು ಆಡುವುದಕ್ಕಾಗಿ ಮಣ್ಣಿನಿಂದ ನಿರ್ಮಾಣ ಮಾಡಿದ ಪುಟ್ಟ ಆಲಯ ನಿರ್ಮಿಸಿ ಗಣಪತಿಯ ಹೆಸರು ಹೇಳಿಕೊಂಡು ಪೂಜಿಸುತ್ತಿದ್ದು, ಅದೇ ಮಕ್ಕಳ ಕಷ್ಮಲ ರಹಿತ ಭಕ್ತಿಗೆ ಮೆಚ್ಚಿದ ಗಣಪ ಈಗಲೂ ಈ ಮಕ್ಕಳು ನಿರ್ಮಿತ ಆಲಯದಲ್ಲಿ ಬಾಲಕರು ನಿರ್ಮಿಸಿದ್ದಾರೆ ಎಂಬ ನಿಟ್ಡಿನಲ್ಲಿ ಬಾಲಗಣಪತಿಯಾಗಿಯೂ…ಗುಡ್ಡದಲ್ಲಿ ಇರುವುದರಿಂದ ಗುಡ್ಡೆ ಗಣಪತಿಯಾಗಿಯೂ ಪೂಜಿಸಲ್ಪಡುತ್ತಿದೆ. ಇಲ್ಲಿನ ಪ್ರಮುಖ ಹರಕೆ ರಂಗಪೂಜೆ ಹಾಗೂ ನವರಾತ್ರಿ ಸಂದರ್ಭ ಇಲ್ಲಿನ ಹೆಸರು ಹೇಳಿ ವೇಷ ಹಾಕುವುದು. ಈ ಹರಕೆಯಿಂದಾಗಿ ಅದೆಷ್ಟೋ ಭಕ್ತಾಧಿಗಳು ತಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಂಡ ಅದೆಷ್ಟೋ ನಿದರ್ಶನಗಳಿವೆ. 

Related Posts

Leave a Reply

Your email address will not be published.