ಪಬ್ ಗಳಲ್ಲಿ ಹ್ಯಾಲೋವೀನ್ ಪಾರ್ಟಿ ನಿಲ್ಲಿಸುವಂತೆ ಕಮಿಷನರಿಗೆ ಮನವಿ

ಪಬ್ ಗಳಲ್ಲಿ ನಡೆಯಲಿರುವ ಮಾದಕದ್ರವ್ಯ Halloween (ಹ್ಯಾಲೋವೀನ್)ಪಾರ್ಟಿ ನಿಲ್ಲಿಸುವಂತೆ ಪೊಲೀಸ್ ಕಮಿಷನರಿಗೆ ಮನವಿ – ಬಜರಂಗದಳ ದುರ್ಗಾವಾಹಿನಿ
ಮಂಗಳೂರು ನಗರದಲ್ಲಿ ಇವತ್ತು ಕಾನೂನು ಬಾಹಿರವಾಗಿ ಪಬ್ ಗಳು ಕಾರ್ಯಾಚರಿಸುತ್ತಿದ್ದು ತಡರಾತ್ರಿಯ ವರೆಗೆ ತೆರೆದಿರುತ್ತದೆ ಮತ್ತು ಸಣ್ಣ ಪ್ರಾಯದ ಯುವಕ -ಯುವತಿಯರು ಪಬ್ ಗಳಿಗೆ ಹೋಗಿ ಕುಣಿದು, ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿರುತ್ತವೆ. ಇದೆ ಸಂಧರ್ಭದಲ್ಲಿ ಒಕ್ಟೋಬರ್ 30 ಮತ್ತು 31 ರಂದು ಶನಿವಾರ ಮತ್ತು ಭಾನುವಾರ ನಗರದ ಎಲ್ಲಾ ಪಬ್ ಗಳಲ್ಲಿ Halloween Party ಏರ್ಪಡಿಸಲಾಗಿದ್ದು ಅದರಲ್ಲಿ ಯುವತಿಯರಿಗೆ ಉಚಿತ ಟಿಕೆಟ್ ನೀಡುವ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಗೆ ವಿರೋಧವಾಗಿದ್ದು, ಈ ಕಾರ್ಯಕ್ರಮಗಳಲ್ಲಿ ಡ್ರಗ್ಸ್ ದಂಧೆ ನಡೆಯುವ ಸಂಶಯವಿದ್ದು, ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಡ್ರಗ್ಸ್ ನಶೆಗೆ ಸಿಲುಕಲಿದ್ದಾರೆ. ಹಾಗಾಗಿ ತಾವುಗಳು ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದಾಗಿ ಮತ್ತು ಕಾನೂನು ಮೀರಿ ವ್ಯಾಪಾರ ಮಾಡುತ್ತಿರುವ ಪಬ್ ಗಳಿಗೆ ಕಡಿವಾಣ ಹಾಕಬೇಕೆಂದು ಬಜರಂಗದಳ – ದುರ್ಗಾವಾಹಿನಿ ಬಲವಾಗಿ ಆಗ್ರಹಿಸಿ ಪೊಲೀಸ್ ಕಮಿಷನರಿಗೆ ಮನವಿ ಸಲ್ಲಿಸಲಾಯಿತು, ವಿಭಾಗ ಮಾತೃಶಕ್ತಿ ಪ್ರಮುಖ್ ಶ್ರೀಮತಿ ಸುರೇಖಾ ರಾಜ್, ಜಿಲ್ಲಾ ದುರ್ಗಾವಾಹಿನಿ ಸಂಚಾಲಕಿ ಶ್ರೀಮತಿ ಶ್ವೇತ ಅದ್ಯಪಾಡಿ,ವಿಶ್ವ ಹಿಂದು ಪರಿಷತ್ ಪ್ರಮುಖರಾದ ನಿತೇಶ್ ರಾಯ್ ಮತ್ತು ಶೈಲೇಶ್ ಅಡ್ಕ ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು

Related Posts

Leave a Reply

Your email address will not be published.