ಪಾರ್ಟಿಗಳಿಗೆ ಮಾದಕ ವಸ್ತು ಎಲ್‌ ಎಸ್‌ ಡಿ ಪೂರೈಸುತ್ತಿದ್ದ ಆರೋಪಿಯ ಬಂಧನ

ಪಾರ್ಟಿಗಳಿಗೆ ಮಾದಕ ವಸ್ತು ಎಲ್‌ಎಸ್‌ಡಿ ಡ್ರಗ್ ಸ್ಟ್ರಿಪ್ಸ್‌ಗಳನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 16 ಲಕ್ಷ ಮೌಲ್ಯ 840 ಎಲ್‌ಎಸ್ ಡಿ ಸ್ಟ್ರಿಪ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಈ ಕುರಿತು ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಯನ್ನು ಕೇರಳ ಕ್ಯಾಲಿಕಟ್ ನ ಮೊಹಮ್ಮದ್ ಅಜಿನಾಸ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಮಂಗಳೂರು ಪ್ರಮುಖವಾಗಿ ಕೇರಳ, ಗೋವಾದಲ್ಲಿ ನಡೆಯುವ ಹೈ- ಎಂಡ್ ಪಾರ್ಟಿಗಳಿಗೆ ಮತ್ತು ಗ್ರಾಹಕರಿಗೆ ಎಲ್‌ಎಸ್‌ಡಿ ಡ್ರಗ್ ಅನ್ನು ಸರಬರಾಜು ಮಾಡುತ್ತಿದ್ದ. ಒಂದು ಸ್ಟ್ರಿಪ್‌ಗೆ 2೦೦೦ ರಿಂದ 6೦೦೦ ರೂಗೆ ಮಾರಾಟ ಮಾಡುತ್ತಿದ್ದರು ಎಂದು ಅವರು ಹೇಳಿದರು. ಇನ್ನು ಆರೋಪಿ ಮೊಹಮ್ಮದ ಅಜಿನಾಸ್ ಮಂಗಳೂರು ನಗರದ ಕದ್ರಿ ಮೈದಾನದ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಖಚಿತ ಮಾಹಿತಿ ಪಡೆದು ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯಿಂದ ವಶಪಡಿಸಿಕೊಂಡಿ ಡ್ರಗ್ಸ್ ಪ್ರಮಾಣ ಅಧಿಕವಾಗಿರುವಾಗ ಆತನ ಸಂಪರ್ಕದಲ್ಲಿ ಪೆಡ್ಲರ್ ಹಾಗೂ ಗ್ರಾಹಕರ ಸಂಪರ್ಕವೂ ದೊಡ್ಡ ಮಟ್ಟದಲ್ಲಿರಬಹುದು. ಹೀಗಾಗಿ ಇದರಲ್ಲಿ ಭಾಗಿಯಾಗಿರುವವರನ್ನು ಎಂದು ನಾವು ತನಿಖೆ ಮಾಡುತ್ತೇವೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ. ಈ ವೇಳೆ ಡಿಸಿಪಿ ಹರಿರಾಂ ಶಂಕರ್ ಸೇರಿದಂತೆ ಮತ್ತಿತರರ ಅಧಿಕಾರಿಗಳು ಉಪಸಿತರಿದ್ದರು.

Related Posts

Leave a Reply

Your email address will not be published.