ಪುತ್ತಿಗೆ ಗ್ರಾಮಸಭೆ: ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಗ್ರಾಮಸ್ಥರಿಂದ ಆಗ್ರಹ

 ಮೂಡುಬಿದಿರೆ : ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ಒಂದೇ ಗ್ರಾಮದಲ್ಲಿ ಎರಡೆರಡು ಶಾಲೆಗಳು ಇರುವುದರಿಂದ ಮಕ್ಕಳು ಹಂಚಿ ಹೋಗುತ್ತಾರೆ. ಅಲ್ಲದೆ ಶಿಕ್ಷಕರ ಕೊರತೆಯೂ ಇದೆ. ಇದನ್ನೆಲ್ಲಾ ತಪ್ಪಿಸಲು ಗ್ರಾಮದಲ್ಲಿ ಒಂದೇ ಶಾಲೆಗೆ ಅವಕಾಶ ನೀಡಿ ಆಗ ಸುಲಭವಾಗುತ್ತದೆ ಎಂದು ಗ್ರಾಮ ಪಂಚಾಯತ್‍ನ ಮಾಜಿ ಸದಸ್ಯ ನಾಗವರ್ಮ ಜೈನ್ ಸಲಹೆ ನೀಡಿದರು

ಅವರು ಪುತ್ತಿಗೆ ಪಂಚಾಯತ್ ಸಮುದಾಯ ಭವನದಲ್ಲಿ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪುತ್ತಿಗೆ ಗ್ರಾಮ ಪಂಚಾಯತ್‍ನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮಾತನಾಡಿ ಸರಕಾರಿ ಶಾಲೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.ಗ್ರಾಮಸ್ಥರಾದ ಅಚ್ಯುತ ಸಂಪಿಗೆ ಮಾತನಾಡಿ ಸರಕಾರಿ ಶಾಲೆಗಳನ್ನು ಉಳಿಸಲು ನಾವು ಯಾವ ರೀತಿಯ ಪ್ರಯತ್ನವನ್ನೂ ಮಾಡಿಲ್ಲ. ರಾಜಕರಣಿಗಳು, ನಾಗರಿಕರ ಸಹಕಾರದಿಂದ ಹೆಜ್ಜೆಗೊಂದು ಎಂಬಂತೆ ಖಾಸಗಿ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣದಲ್ಲಿ ಲಾಭಿಯನ್ನು ಆರಂಭಿಸಿದರು ಇದರಿಂದಾಗಿ ಸರಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಯಿತು ಅಲ್ಲದೆ ಹೆತ್ತವರಿಗೆ ಖಾಸಗಿ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಮೇಲೆ ವ್ಯಾಮೋಹ ಹೆಚ್ಚಾಯಿತು. ಇದಲ್ಲದೆ ಸರಕಾರಿ ಶಾಲೆಗಳ ಕಟ್ಟಡಗಳು ಇನ್ನೂ ಕೂಡಾ ಹಳೆಯ ರೀತಿಯಲ್ಲೇ ಇವೆ ಇವುಗಳನ್ನು ಸರಕಾರದ ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಎಂದು ಹೇಳಿದ ಅವರು ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲೇ ಹೋರಾಟಗಳಾಗಬೇಕು ಅದು ಈ ಪಂಚಾಯತ್ ಮೂಲಕವೇ ಆಗಲಿ ಎಂದು ಆಗ್ರಹಿಸಿದರು.

ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಹಾಕಲು ಒಪ್ಪದಿದ್ದವರ ಮನ ಒಲಿಸುವ ಪ್ರಯತ್ನ ಆಯಾ ವಾರ್ಡಿನ ಸದಸ್ಯರು ಮಾಡಬೇಕೆಂದು ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ/ಮನಿಷಾ ತಿಳಿಸಿದರು. ಸಹಾಯಕ ಕೃಷಿ ಅಧಿಕಾರಿ ಯುಗೇಂದ್ರ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಅರಣ್ಯ ರಕ್ಷಕ ಶಂಕರ್ ಗೌಡ, ಕಲ್ಲಮುಂಡ್ಕೂರು ಪ್ರಭಾರ ಶಾಖಾಧಿಕಾರಿ ಸುಭಾಷ್ ಆಚಾರ್ಯ ಅಂಗನವಾಡಿ ಕಾರ್ಯಕರ್ತೆ ಮಾಹಿತಿ ನೀಡಿದರು.ಉಪಾಧ್ಯಕ್ಷೆ ತಾಹೀರ ಬಾನು ಮತ್ತು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.