ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಬಲಿ ಉತ್ಸವ

ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯಂದು ಒಳಗಾದ ದೇವರ ಬಲಿ ಉತ್ಸವ ವಾಡಿಕೆಯಂತೆ ದೀಪಾವಳಿ ಅಮವಾಸ್ಯೆ ದಿನದಂದು ಸಂಪ್ರದಾಯದಂತೆ ಆರಂಭಗೊಂಡಿದೆ. ಕಳೆದ ರಾತ್ರಿ ಶ್ರೀ ದೇವರ ಬಲಿ ಹೊರಟು ದೀಪಾವಳಿ ಉತ್ಸವ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವೇದ.ಮೂ.ವಿ.ಎಸ್.ಭಟ್ ಮತ್ತು ವೇ.ಮೂ. ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಉತ್ಸವಾದಿಗಳು ನಡೆಯಿತು.

ದೇವಳದ ಪ್ರಾಕಾರ ಗುಡಿಗಳಲ್ಲಿ ಹೂವಿನ ಪೂಜೆ ನಡೆಯಿತು. ಬಳಿಕ ದೇವಳದ ನಡೆಯಲ್ಲಿ ಅವಲಕ್ಕಿಯನ್ನು ಸೇರಿನಲ್ಲಿ ಅಳತೆ ಮಾಡುವ ಸಂಪ್ರದಾಯ ನಡೆಯಿತು. ಇದಾದ ಬಳಿಕ ಮಹಾಪೂಜೆ ನಡೆಯಿತು. ಮಹಾಪೂಜೆಯ ಬಳಿಕ ಶ್ರೀ ದೇವರ ಉತ್ಸವದ ಸಂದರ್ಭದಲ್ಲಿ ಬ್ರಹ್ಮವಾಹಕರು ದೇವರ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಇಡುವ ಮೊದಲು ಶ್ರೀ ದೇವಸ್ಥಾನದ ಧ್ವಜಸ್ಥಂಭದ ಬಳಿಯ ಕೊಡಿಮರದ ಬಳಿ ಬಲೀಂದ್ರ ಕಂಬ ಹಾಕಿ ಅದರಲ್ಲಿ ಹಣತೆ ಬೆಳಗಿಸಲಾಯಿತು. ಭಕ್ತಾದಿಗಳು ದೇವಾಲಯದ ಸುತ್ತಲೂ ಹಣತೆಯನ್ನು ಬೆಳಗಿಸಿದರು. ದೇವಳದವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಡಾ.ಸುಧಾ ಎಸ್ ರಾವ್, ರವೀಂದ್ರನಾಥ ರೈ ಬಳ್ಳಮಜಲು ಸೇರಿದಂತೆ ಹಲವಾರು ಮಂದಿ ಭಕ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.