ಪುರಾತನ ಬಿಷ್ಟಮ್ಮನ ಕೆರೆ ಅಭಿವೃದ್ಧಿಗೊಳಿಸಲು ಒತ್ತಾಯ

ಬೇಲೂರು: ಬೇಲೂರಿನಲ್ಲಿರುವ ವಿಶ್ವಪ್ರಸಿದ್ಧ ಚನ್ನಕೇಶವ ದೇವಾಲಯಕ್ಕೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಿಂದ ಪ್ರವಾಸಿಗರು ಭೇಟಿ ನೀಡುವುದು ನಮಗೆಲ್ಲ ಗೊತ್ತಿರುವ ವಿಚಾರ. ಆದರೆ ಇಲ್ಲಿಯ ಪುರಾತನ ಹಾಗೂ ಹಳೆಯದಾದ ಬಿಷ್ಟಮ್ಮನ ಕೆರೆ ಮುಜರಾಯಿ ಇಲಾಖೆ ಅಧಿಕಾರಿಗಳು ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಹೌದು ಇಲ್ಲಿರುವ ಬಿಷ್ಮಮ್ಮನ ಕೆರೆಯ ಬಳಿ ಉದ್ಯಾನವನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಬಂದಂತಹ ಪ್ರವಾಸಿಗರಿಗೆ ವಾಟರ್ ಸ್ಪೊರ್ಟ್ಸ್, ಬೋಟ್ ಸೇವೆ ವ್ಯವಸ್ಥೆ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆಕರ್ಷಣೆಗೊಂಡು ಅಭಿವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ.

ಈ ಬಗ್ಗೆ ಯೂತ್ ಕಾಂಗ್ರೆಸ್ ಹಾಸನ ಜಿಲ್ಲಾ ಉಪಾಧ್ಯಕ್ಷ ರವೀಶ್ ಬಸವಾಪುರ ಮಾತನಾಡಿ, ಈಗಾಗಲೇ ಬೇಲೂರಿಗೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದು, ರುದ್ರೇಶ್ ಗೌಡ ರವರು ಶಾಸಕರಾಗಿದ್ದ ಸಂದರ್ಭದಲ್ಲಿ ಬಿಷ್ಮಮ್ಮನ ಕೆರೆಯ ಬಳಿ ಪ್ರವಾಸಿಗರಿಗೆ ಆಕರ್ಷಣೆಯ ಸ್ಥಳವನ್ನು ಮಾಡಬೇಕು ಎಂಬ ಕನಸನ್ನು ಕಂಡಿದ್ದರು, ಈಗಿರುವ ಶಾಸಕರು ಕೂಡ ತಾಲ್ಲೂಕು ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಜನಪರ ಕೆಲಸ ಮಾಡುತ್ತಿದ್ದು, ದಯವಿಟ್ಟು ಬಿಷ್ಮಮ್ಮನ ಕೆರೆಯ ಅಭಿವೃದ್ಧಿ ಕಡೆಗೂ ಒಲವು ತೋರಿಸಬೇಕಿದೆ, ಈ ಹಿಂದೆಯೂ ಕೂಡ ಇದೆ ಕೆರೆಗೆ ಬಸ್ ಬಿದ್ದು ಕೆಲವರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಸದ್ಯ ಇನ್ನಾದರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಇತ್ತ ಕಡೆ ಗಮನ ಹರಿಸಿದರೆ ಚನ್ನಕೇಶವ ಸ್ವಾಮಿ ದರ್ಶನ ಪಡೆದು ಪ್ರಸಿದ್ದವಾದ ಬಿಷ್ಟಮ್ಮನ ಕೆರೆಗೆ ಪ್ರವಾಸಿಗರನ್ನು ಸೆಳೆಯುವಂತಾಗಲಿ ಆದಷ್ಟು ಬೇಗ ಕಾಯಕಲ್ಪ ಸಿಗುವಂತಾಗಲಿ ಎಂದು ಹೇಳಿದರು.

 

Related Posts

Leave a Reply

Your email address will not be published.