ಪ್ರಾಯೋಗಿಕ ಕಂಬಳದಲ್ಲಿ ಮೂಡಿ ಬಂದ ಭರವಸೆಯ ಓಟಗಾರರಿಗೆ ಬಹುಮಾನ

ಮೂಡುಬಿದಿರೆ : ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಆಶ್ರಯದಲ್ಲಿ 6ನೇ ವರ್ಷದ ಶಿಬಿರಾರ್ಥಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕಡಲಕೆರೆಯ ಕೋಟಿ ಚೆನ್ನಯ ಜೋಡುಕರೆ ಕಂಬಳ ಕೆರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ರೆಂಜಾಳ ಡ್ರೀಮ್ ಹೌಸ್ ವಲೇರಿಯನ್ ಸಾಂತ್‌ಮೇರ್ (ಪ್ರ), ಬೈಂದೂರು ದುರ್ಗಾ ಫ್ರೆಂಡ್ಸ್ (ದ್ವಿ) ನೇಗಿಲು ವಿಭಾಗದ ಈದು ಬಟ್ಟೇನಿ ಶ್ರೀಧರ್ ಗಿರಿಯಪ್ಪ ಪೂಜಾರಿ(ಪ್ರ) ಮತ್ತು ಶ್ರೀ ವಿಷ್ಣುಮೂರ್ತಿ ದೇವತಾ ಬಿಳಿಯೂರು ಮೇಗಿನಮನೆ ದಿವಾಕರ್ ಅನೂಪ್ ಭಂಡಾರಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದ.ಕ ಜಿಲ್ಲಾ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಬಹುಮಾನವನ್ನು ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ 33 ಮಂದಿ ಶಿಬಿರಾರ್ಥಿಗಳಿಗೆ ನೀಡಲಾದ ಪ್ರಮಾಣಪತ್ರವನ್ನು ವಿತರಿಸಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸರ್, ಸದಸ್ಯರಾದ ನರೇಂದ್ರ ಕೆರೆಕಾಡು,ಸಂತೋಷ್ ಪೂಜಾರಿ ಕಾರ್ಕಳ, ಚೇತಕ್ ಪೂಜಾರಿ, ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭದ್ ರಾವ್, ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷ ರಶ್ಮಿತ್ ಶೆಟ್ಟಿ, ಹೈಕೋರ್ಟ್ ನ್ಯಾಯವಾದಿ ಕ್ಷಿತ್ ಕುಮಾರ್ ಜೈನ್ ನಾರಾವಿ, ಉದ್ಯಮಿಗಳಾದ ಪ್ರೇಮನಾಥ ಮಾರ್ಲ, ಆರ್.ಕೆ.ಭಟ್, ಗಿರೀಶ್ ಮೋರ್ಲ, ಕಂಬಳ ಅಕಾಡೆಮಿಯಂಚಾಲಕ ಕೆ.ಗುಣಪಾಲ ಕಡಂಬ, ಸದಸ್ಯರುಗಳಾದ ಜೋನ್ ಸಿರಿಲ್ ಡಿ”ಸೋಜಾ, ಸೀತಾರಾಮ ಶೆಟ್ಟಿ, ಸುರೇಶ್ ಕೆ.ಪೂಜಾರಿ ರೆಂಜಾಳ ಕಾರ್ಯ, ಸುಭಾಶ್ಚಂದ್ರ ಚೌಟ ಕೆಲ್ಲಪುತ್ತಿಗೆ, ಜ್ವಾಲಾ ಪ್ರಸಾದ್, ರವೀಂದ್ರ ಕುಮಾರ್ ಕುಕ್ಕುಂದೂರು ಆದಿರಾಜ ಜೈನ್ ಅಲ್ಲಿಪಾದೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಅಜಿತ್ ಕುಮಾರ್ ಜೈನ್ ಈದು ಪಡ್ಯಾರ ಮನೆ, ವಿಶ್ವನಾಥ ಪ್ರಭು ಶಿರ್ವ, ಪ್ರಖ್ಯಾತ ಭಂಡಾರಿ ಬೆಳುವಾಯಿ, ಆಕರ್ಷ್ ಜೈನ್ ಪಡ್ಯಾರ ಮನೆ ಜನಾರ್ದನ ನಾಯ್ಕ್ ಕರ್ಪೆ, ಯಶವಂತ ಕಟಪಾಡಿ, ದಿನೇಶ್ ಪೂಜಾರಿ ಕಕ್ಯಪದವು, ವಿದ್ಯಾಧರ ಜೈನ್ ರೆಂಜಾಳ, ಸುದೀಪ್ ಹೆಗ್ಡೆ ಶಿರ್ಲಾಲು, ದಿನೇಶ್ ಶೆಟ್ಟಿ ಕಾಪು, ಪ್ರಕಾಶ್ ಕಜೆಕಾರು, ಅಶ್ವಥ್ ಕೆಲ್ಲಪುತ್ತಿಗೆ , ಸೂರಜ್ ಕುಕ್ಕುಂದೂರು ತೀರ್ಪುಗಾರರಾಗಿ ಭಾಗವಹಿಸಿದ್ದರು.

Related Posts

Leave a Reply

Your email address will not be published.