ಬರವಣಿಗೆಯಲ್ಲಿ ವೈಚಾರಿಕ ಅಭಿವ್ಯಕ್ತಿಯಿರಲಿ – ಗೀತಾ ಎ ಜೆ

ಉಜಿರೆ : ವಿದ್ಯಾರ್ಥಿಗಳು ಬರವಣಿಗೆಯಲ್ಲಿ ಹೊಸತನ,ವೈಚಾರಿಕತೆಯನ್ನು ಅಳವಡಿಸಿಕೊಂಡಾಗಓದುಗರನ್ನುಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುತ್ತದೆಎಂದು ಉಜಿರೆಯ ಎಸ್ ಡಿ ಎಂಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಪಕಿಗೀತಾ ಎ ಜೆ ಹೇಳಿದರು.

ಉಜಿರೆಯಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಘ ಆಯೋಜಿಸಿದ ” ಕ್ರಿಯಾಶೀಲ ಬರವಣಿಗೆಮತ್ತು ವರದಿಗಾರಿಕೆ ” ವಿಷಯದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸಮಗ್ರಬರವಣಿಗೆಯ ಅಡಿಪಾಯವಿದ್ದಾಗ ಮಾತ್ರ ಸುದ್ದಿ ಬರಹಗಳು, ಲೇಖನಗಳು,ವರದಿಗಳುಉತ್ಕೃಷ್ಟವಾಗುತ್ತದೆ. ವರದಿಗಳನ್ನು ಬರೆಯುವಾಗ ವಿಷಯದ ಕುರಿತು ಸ್ಪಷ್ಟ ಹಾಗೂ ವಾಸ್ತವಿಕವಿವರಣೆಗಳನ್ನು ನೀಡುತ್ತಾ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಶೈಲಿಯಲ್ಲಿ ಬರೆಯುವುದುಮುಖ್ಯವಾಗುತ್ತದೆ.

ವಿದ್ಯಾರ್ಥಿಗಳುಓದುವ ಹಂತದಲ್ಲಿ ಸೃಜನಾತ್ಮಕ ಹಾಗೂ ಕ್ರಿಯಾಶೀಲವಾಗಿ ಬರೆಯುವ ಕೌಶಲ್ಯವನ್ನುಮೈಗೂಡಿಸಿಕೊಳ್ಳಬೇಕು. ಆ ಮೂಲಕ ತಮ್ಮಲ್ಲಿರುವ ಭಿನ್ನ ಪರಿಕಲ್ಪನೆಗಳನ್ನು ಬರಹದ ಮೂಲಕಓದುಗರಿಗೆ ಹಿತವೆನಿಸುವಂತೆ ಪ್ರಸ್ತುತ ಪಡಿಸಲು ಸಾಧ್ಯವಿದೆ ಎಂದರು.

ಉಜಿರೆಯಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದವಿದ್ಯಾರ್ಥಿಗಳಾದ ಸುಮಾ ಕಂಚಿಪಾಲ್, ಆಕರ್ಷ ಆರಿಗ, ಶಂತನು ವಿದ್ಯಾರ್ಥಿಗಳನ್ನು ನಾಲ್ಕುತಂಡಗಳಾಗಿ ವಿಭಾಗಿಸಿ ಸ್ಥಳದಲ್ಲಿಯೇ ವರದಿ, ಲೇಖನ ಬರೆಸುವ ಪ್ರಾಯೋಗಿಕ ಚಟುವಟಿಕೆಗಳನ್ನುನಡೆಸಿದರು. ವಿದ್ಯಾರ್ಥಿಗಳ ಬರಹಗಳನ್ನು ತಿದ್ದಿ, ನಿರ್ದೇಶಿಸಿದರು.

ಈಕಾರ್ಯಕ್ರಮದಲ್ಲಿ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಚೌಟಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಸಾಂಸ್ಕೃತಿಕ ಸಂಘದವಿದ್ಯಾರ್ಥಿಗಳು, ಉಪಸ್ಥಿತರಿದ್ದರು.ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಪದ್ಮಶ್ರೀಹೆಗ್ಡೆ ಸ್ವಾಗತಿಸಿ, ನಿರೂಪಿಸಿದರು .ರಾಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯಕುಮಾರಿವಂದಿಸಿದರು.

Related Posts

Leave a Reply

Your email address will not be published.