ಬ್ಯಾರಿಸ್ ಗ್ರೂಪ್ ವತಿಯಿಂದ ಗ್ರೀನ್ ವಾಕಥಾನ್-2021

ಬ್ಯಾರಿಸ್ ಗ್ರೂಪ್ ವತಿಯಿಂದ ಸೆಪ್ಟಂಬರ್ 25ರಂದು ಗ್ರೀನ್ ವಾಕಥಾನ್-2021 ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಾ ಅಡಿಟೋರಿಯಂನಿಂದ ಬಿಐಟಿ ಕ್ಯಾಂಪಸ್ ವರೆಗೆ ಆಯೋಜನೆ ಮಾಡಲಾಗಿದೆ ಎಂದು ಬಿಐಟಿ ಪ್ರಿನ್ಸಿಪಾಲ್ ಡಾ. ಎಸ್.ಐ ಮಂಜೂರು ಬಾಷಾ ಹೇಳಿದರು.

ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ವಿಶ್ವದಲ್ಲಿ ಬದಲಾಗುತ್ತಿರುವ ನಿರಂತರ ಹವಾಮಾನ ಬದಲಾವಣೆ, ಮನುಕುಲಕ್ಕೆ ದೊಡ್ಡ ಪರಿಣಾಮ ಬೀರಿದೆ. ಈ ಕಾರಣದಿಂದ ಭೂಮಿಯನ್ನು ರಕ್ಷಿಸುವ ಮಾನವನ ಜವಾಬ್ದಾರಿಗಳು ಹಲವಾರು ಪಟ್ಟು ಹೆಚ್ಚಾಗಿದೆ. ಇಂಧನ ಸಂರಕ್ಷಣೆ ಇಂಧನ ಉಳಿಸುವ ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯಗಳ ಬಳಕೆ ಜಾಗತಿಕ ತಾಪಮಾನ ಕಡಿಮೆ ಮಾಡುವುದು, ಗ್ರೀನ್ ಹೌಸ್ ಗ್ಯಾಸ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನೀತಿ, ಹೀಗೆ ಅನೇಕ ಭವಿಷ್ಯದಲ್ಲಿ ಉತ್ತಮ ಕಾಳಜಿ ಮತ್ತು ಸಮರ್ಥನೀಯವಾಗಿರಬೇಕು ಎಂದರು. ಇನ್ನು ಗ್ರೀನ್ ವಾಕಥಾನ್ ಅನ್ನು ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಧ್ವಜಾರೋಹಣ ಮಾಡಲಿರುವರು. ಬಿಐಟಿ ಕ್ಯಾಂಪಸ್‍ನಲ್ಲಿ ಸಯ್ಯದ್ ಮೊಹ್ಮದ್ ಬ್ಯಾರಿ ಅವರಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬೀಡ್ಸ್ ಫ್ರಿನ್ಸಿಪಾಲ್ ಆರ್. ಅಶೋಕ್ ಎಲ್.ಪಿ. ಮೆಂಡೊನ್ಸಾ, ಬಿಐಟಿ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಡಾ. ಅಜೀಜ್ ಮುಸ್ತಫಾ, ಬಿಐಟಿ ಮಂಗಳೂರು ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.