ಮಂಡೆಕೋಲು ಗ್ರಾಮದ ಅಂಬ್ರೋಟಿ-ಉದ್ದಂತಡ್ಕ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟನೆ

ಸುಳ್ಯ :ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ 15ನೇ ಹಣಕಾಸು ಯೋಜನೆಯಡಿಯಲ್ಲಿ ಪ್ರಪ್ರಥಮ ಬಾರಿಗೆ 5 ಲಕ್ಷ ರೂಪಾಯಿ ಮಂಜೂರಾದ ಅನುದಾನದಲ್ಲಿ ಅಂಬ್ರೋಟಿ-ಉದ್ದಂತಡ್ಕ ರಸ್ತೆ ಕಾಂಕ್ರಿಟೀಕರಣಗೊಂಡು ಸಾರ್ವಜನಿಕ ಸಂಚಾರಕ್ಕೆ ಇಂದು ಅನುವು ಮಾಡಿಕೊಡಲಾಗಿದೆ.

ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಸಿಕೊಂಡ ಮಂಡೆಕೋಲು ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿಯವರು ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ರಸ್ತೆ ಅಭಿವೃದ್ಧಿ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ಹಲವು ರಸ್ತೆಗಳು ಇನ್ನು ಕೆಲವೇ ದಿನಗಳಲ್ಲಿ ಪಂಚಾಯತ್ ಅನುದಾನದಲ್ಲಿ ಕಾಂಕ್ರಿಟೀಕರಣಗೊಳ್ಳಲಿದೆ.

ಇನ್ನು ಕಾಂಕ್ರಿಟೀಕರಣಗೊಂಡ ನೂತನ ರಸ್ತೆಯನ್ನು ಸುಳ್ಯದ ಎನ್‌ಎಂಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಗಿರಿಧರ್ ಗೌಡ ಅವರು ತೆಂಗಿನಕಾಯಿ ಒಡೆದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಂಡೆಕೋಲು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಜಯರಾಜ್ ಕುಕ್ಕೆಟ್ಟಿ, ಪದ್ಮನಾಭ ಚೌಟಾಜೆ, ವಾಸುದೇವ ಬತ್ಲಿಮನೆ, ಜಯಪ್ರಕಾಶ್ ಕೊಡಂಚಿಜಾರ್, ಮಂಡೆಕೋಲು ಗ್ರಾಮದ ೪ ಮತ್ತು ೫ನೇ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರು, ಉದ್ದಂತಡ್ಕ ಭಾಗದ ಸ್ಥಳೀಯರು ಹಾಗೂ ಕಾಂಟ್ರಾಕ್ಟರ್ ಕೀರ್ತನ್ ಮತ್ತು ಮಿಲನ್ ಪಾತಿಕಲ್ಲು ಉಪಸ್ಥಿತರಿದ್ದರು.

 

 

Related Posts

Leave a Reply

Your email address will not be published.