ಮಣ್ಣಿನ ಮಕ್ಕಳ ಹೋರಾಟಕ್ಕೆ ಮಣಿದ ಮೋದಿ ಸರಕಾರ, ಮಂಗಳೂರಿನಲ್ಲಿ ಸಂಭ್ರಮಾಚರಣೆ

ಮಣ್ಣಿನ ಮಕ್ಕಳ ಹೋರಾಟಕ್ಕೆ ಕೇಂದ್ರದ ನರೇಂದ್ರ ಮೋದಿ ಸರಕಾರವು ಮಣಿದಿದ್ದು,ಇದು ರೈತರ ಚಾರಿತ್ರಿಕ ಹೋರಾಟಕ್ಕೆ ಸಂದ ವಿಜಯವಾಗಿದೆ.ಈ ನಿಟ್ಟಿನಲ್ಲಿ ರೈತ ಕಾರ್ಮಿಕ ದಲಿತ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ನಾಯಕರಾದ ರವಿಕಿರಣ್ ಪೂನಚ,ಜಿಲ್ಲಾ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್,ಓಸ್ವಾಲ್ಡ್ ಪ್ರಕಾಶ್, DYFI ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಹೋರಾಟವನ್ನು ಮಾಧ್ಯಮಗಳನ್ನು ಬಳಸಿ ಅಪಪ್ರಚಾರ ನಡೆಸಿರುವುದು ಮಾತ್ರವಲ್ಲದೆ ದೇಶದ್ರೋಹಿಗಳೆಂದು ಕರೆದು ಅಪಹಾಸ್ಯ ಮಾಡಿದ ಕೇಂದ್ರದ ಫ್ಯಾಸಿಸ್ಟ್ ಸರಕಾರವು ರೈತರ ಸಮರಧೀರ ಹೋರಾಟಕ್ಕೆ ಮಣಿದಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರೈತ ನಾಯಕರಾದ ಯಾದವ ಶೆಟ್ಟಿ, ಪ್ರೇಮನಾಥ ಶೆಟ್ಟಿ, ಆಲ್ವಿನ್ ಮೆನೇಜಸ್,ರಾಮಣ್ಣ ವಿಟ್ಲ, ಶೇಖರ್ ಕುಂದರ್,ಕಾರ್ಮಿಕ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ನೋಣಯ್ಯ ಗೌಡ,ಜಯಂತ ನಾಯಕ್,ಅಶೋಕ್ ಸಾಲ್ಯಾನ್, ಶಶಿಧರ್ ಶಕ್ತಿನಗರ,ಯುವಜನ ನಾಯಕರಾದ ಬಿ.ಕೆ.ಇಮ್ತಿಯಾಜ್,ಸಂತೋಷ್ ಬಜಾಲ್, ನೌಷಾದ್ ಬೆಂಗರೆ, ಜಗದೀಶ್ ಬಜಾಲ್,ದಲಿತ ಸಂಘಟನೆಗಳ ನಾಯಕರಾದ ಎಂ.ದೇವದಾಸ್, ತಿಮ್ಮಯ್ಯ ಕೊಂಚಾಡಿ,ರಘು ಎಕ್ಕಾರ್, ಮಹಿಳಾ ನಾಯಕರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ,ನಳಿನಾಕ್ಷಿ ತೊಕ್ಕೋಟು,ಪ್ರಮೀಳಾ ದೇವಾಡಿಗ,ಅಸುಂತ ಡಿಸೋಜ, ವಕೀಲರಾದ ನಿತಿನ್ ಕುತ್ತಾರ್, ಸುನಂದ ಕೊಂಚಾಡಿ,ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.