ಮಳೆ ನೀರಿಗೆ ಸಮರ್ಪಕ ವ್ಯವಸ್ಥೆವಿಲ್ಲದೇ ಕೃಷಿಗೆ ತೊಂದರೆ: ಶಾಸಕ ಡಾ.ವೈ.ಭರತ್ ಶೆಟ್ಟಿ ಭೇಟಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಅರ್ಕುಳಬೈಲ್‌ನಿಂದ ಹರಿದು ಹೋಗುವ ನೀರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗುವುದನ್ನ ಮನಗಂಡ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ನೀರು ಹರಿದು ಹೋಗುವ ಮೋರಿಗಳು ಮಣ್ಣಿನಿಂದ ತುಂಬಿದ ಕಾರಣ ಕೃಷಿ ಭೂಮಿಯಲ್ಲಿ ನೀರು ತುಂಬಿ ಕೃಷಿಗೆ ತೊಂದರೆ ಆಗಿರುವುದರಿಂದ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟರು. ಇನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಇಲಾಖೆಯ ಆಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ತುರ್ತಾಗಿ ಸರಿಪಡಿಸಿ , ಈ ಭಾಗದ ಜನರ ಬೇಡಿಕೆಗೆ ಸ್ವಂದಿಸುವಂತೆ ಸೂಚನೆಗಳನ್ನು ನೀಡಿದ್ದಾರೆ . ಅರ್ಕುಳ ಬೈಲ್ ಮುಖ್ಯ ರಸ್ತೆ ಮತ್ತು ಆಡ್ಡರಸ್ತೆಯನ್ನು ಕಾಲು ನಡಿಗೆ ಮೂಲಕ ವೀಕ್ಷಿಸಿ ಅದನ್ನು ಕೂಡ ಅತೀ ಶೀಘ್ರದಲ್ಲಿ ಸರಿಪಡಿಸುವ ಭರವಸೆ ನೀಡಿದ್ದಾರೆ .

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಸಂತೋಷ್ ಕುಮಾರ್ ತುಪ್ಪೆಕಲ್ಲು , ಮಂಡಲ ಫಲಾನುಭವಿ ಪ್ರಕೋಷ್ಟದ ಸದಸ್ಯರಾದ ಅಶೋಕ ಕೊಟ್ಟಾರಿ ,ವಾರ್ಡಿನ ಆದ್ಯಕ್ಷರಾದ ರಘನಾಥ ಪೂಜಾರಿ ,ಅರ್ಕುಳ ಶಕ್ತಿ ಕೇಂದ್ರ ಪ್ರಮುಖರಾದ ಜಯರಾಮ್ ಶೆಟ್ಟಿಗಾರ್, ಜಗದೀಶ್ ಅರ್ಕುಳ , ವಾರ್ಡಿನ ಕಾರ್ಯದರ್ಶಿಯಾದ ನವೀನ್ ಕೊಟ್ಟಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ನಾಯ್ಕ್ , ಸುಚಿತ್ರ ,ಮಾಜಿ ಸದಸ್ಯರಾದ ಸುಕುಮಾರ್ ಕರ್ಕೇರ , ಅರ್ಕುಳ ೧ನೇ ವಾರ್ಡಿನ ಆಧ್ಯಕ್ಷರಾದ ಚಂದ್ರಹಾಸ ಕುಚ್ಚೂರು , ಹಿರಿಯರಾದ ಲೋಕಯ್ಯ ಪೂಜಾರಿ, ಪ್ರಮುಖರಾದ ವೇದಾವತಿ , ಸುರೇಶ್, ಕಿರಣ್, ಸುನೀಲ್, ಮನೋಜ್ , ಪ್ರಶಾಂತ್ ಕಿಶೋರ್ ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .

 

Related Posts

Leave a Reply

Your email address will not be published.