ಮಿಸ್ಬಾ ವುಮೆನ್ಸ್ ಕಾಲೇಜು ಕಾಟಿಪಳ್ಳ:ನಾಲ್ವರು ಮಹಿಳಾ ಸಾಧಕರಿಗೆ ಸಮ್ಮಾನ

ಸುರತ್ಕಲ್:ಮಿಸ್ಬಾ ವುಮೆನ್ಸ್ ಕಾಲೇಜ್ ಕಾಟಿಪಳ್ಳ ಇದರ ವತಿಯಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ  ಮೂವರು ವೈದ್ಯರ ಸಹಿತ ಅಲ್ಪಸಂಖ್ಯಾತ ಮಹಿಳಾ ಸಾಧಕರಿಗೆ  ಸಮ್ಮಾನ ಕಾರ್ಯಕ್ರಮ ಹಾಗೂ ನೂತನ ಕಂಪ್ಯೂಟರ್ ಲ್ಯಾಬ್ ಉದ್ಗಾಟನೆ  ಮಿಸ್ಬಾ ವುಮೆನ್ಸ್ ಕಾಲೇಜಿನ ಕ್ಯಾಂಪಸ್ ನಲ್ಲಿ  ಜರಗಿತು.

ಈ ಸಂದರ್ಭ ಅತಿಥಿಗಳು ಮಿಸ್ಬಾ ವುಮೆನ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಶೈಕ್ಷಣಿಕ ಚಟುವಟಿಕೆ ವೀಕ್ಷಿಸಿದರು. ಕಾಲೇಜಿನ ಕಂಪ್ಯೂಟರ್ ಲ್ಯಾಬ್ ನ್ನು  ಗಣ್ಯರು ಉದ್ಘಾಟಿಸಿದರು. ಬಳಿಕ ಸಮಾರಂಭದಲ್ಲಿ ಡಾ.ಸೈಮಾ ಸಯೀಮ್, ಡಾ.ಖತೀಜ ಶಿರೀನ್,ಡಾ.ಖತೀಜಾ ಸನಾ ಹಾಗೂ ಆಯಿಷಾ ಮಝೂಂ ಅವರನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸ್ಫೂರ್ತಿ ದಾಯಕ ಮಾತುಗಳನ್ನಾಡಿದ ಸಮ್ಮಾನಿತರು, ಶಿಕ್ಷಣ ಪಡೆಯಬೇಕೆಂಬ ಹಂಬಲ, ಗುರಿಯನ್ನು ಸಾಧಿಸಬೇಕು ಎಂಬ ಛಲ,ಆತ್ಮ ವಿಶ್ವಾಸವಿದ್ದಾಗ ಏನೂ ಬೇಕಾದರೂ ಸಾಧಿಸಬಹುದು ಎಂದರು.

ಮುಖ್ಯ ಅತಿಥಿಗಳಾಗಿದ್ದ ಅನಿವಾಸಿ ಉದ್ಯಮಿಗಳಾದ  ಜನಾಬ್ ಶರೀಫ್ ಜೋಕಟ್ಟೆ ಶಾರ್ಜಾ, ಎನ್ ಅಬ್ದುಲ್ ಸಮಾದ್,ಇಕ್ಬಾಲ್ ಜುಬೈಲ್ ಬಂಟ್ವಾಳ,ಹಾಗೂ ಮಂಗಳೂರು ಉದ್ಯಮಿ ಶೌಕತ್ ಸೌರಿ ಅವರು ಮಿಸ್ಬಾ ಕಾಲೇಜಿನ ಸೈಕ್ಷಣಿಕ ಸಾಧನೆ ಹಾಗೂ ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ  ಚೇಯರ್ ಮನ್ ಮಮ್ತಾಜ್ ಆಲಿ ಹಾಗೂ ಟ್ರಸ್ಟಿಗಳ ಪರಿಶ್ರಮವನ್ನು ಶ್ಲಾಘಿಸಿ ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು.


ಮಮ್ತಾಜ್ ಆಲಿ ಅವರು  ಮಾತನಾಡಿ ಟ್ರಸ್ಟಿಗಳ,ದಾನಿಗಳ ಕೊಡುಗೆಯನ್ನು ಸ್ಮರಿಸಿಕೊಂಡರು. ಟ್ರಸ್ಟಿಗಳಾದ  ಟಿ.ಎಚ್.ಮೆಹಬೂಬ್ ಜುಬೈಲ್ ,ಮಹಮ್ಮದ್ ಮುಬೀನ್, ಕೆ.ಮಹಮ್ಮದ್ ಹ್ಯಾರಿಸ್, ಬಿ.ಎ ನಜೀರ್, ನಾಸೀರ್ ಲಕ್ಕಿಸ್ಟಾರ್,ಹಕೀಮ್ ಫಾಲ್ಕಾನ್ ,ಫಕ್ರುದ್ದೀನ್ ಬಾವಾ, ಪೋಷಕರು,ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.ಪ್ರಾಂಶುಪಾಲೆ ಝಾಹೀದಾ ಜಲೀಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೌಸೀನ್, ನುಬೀರ ಮತ್ತು ಮಮತ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.