ಮೀನುಗಾರರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ: ಮಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್

ದಕ್ಷಿಣ ಕನ್ನಡ ಜಿಲೆಯಲ್ಲಿ ಮೀನುಗಾರರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಮಂಗಳೂರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿದ್ದಾರೆ. ಮೀನುಗಾರರ ಸಮಸ್ಯೆಗಳನ್ನ ಆಲಿಸಿ, ಬಳಿಕ ನಗರದ ಓಶಿಯನ್ ಪರ್ಲ್‌ನಲ್ಲಿ ಸುದ್ಧಿಗೋಷ್ಠಿ ನಡೆಸಿದ್ರು. ಈಗಾಗಲೇ ಮಂಗಳೂರಿನ ಮೀನುಗಾರರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ.ಪಕ್ಷದ ಕಾರ್ಯಕ್ರಮದ ಸಲುವಾಗಿ ಮಂಗಳೂರಿಗೆ ಬಂದಿಲ್ಲ. ಇನ್ನು ಮೇಕೆದಾಟು ಯೋಜನೆ ರಾಜ್ಯಕ್ಕೆ ಅತೀ ಮುಖ್ಯವಾದ ಯೋಜನೆವಾಗಿದೆ. ಈ ಹಿಂದೆ ನಾನು ಸಚಿವನಾಗಿದ್ದಾಗ ಕೂಡಾ ಈ ಯೋಜನೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿದ್ದೆ, ಅದಕ್ಕೆ ಕೇಂದ್ರ ಪರಿಸರ ಸಚಿವಾಲಯ ಒಪ್ಪಿಗೆ ನೀಡಿತ್ತು.


ನಮ್ಮ ಪಾಲಿನ ನೀರು ತಮಿಳುನಾಡು ಪಾಲಾಗೋಕೆ ಬಿಡಲ್ಲ. ಮೇಕೆದಾಟು ನನ್ನ ಕ್ಷೇತ್ರದಲ್ಲೇ ಇದೆ. ಮೂರು ವರ್ಷದೊಳಗೆ ಡ್ಯಾಂ ತಯಾರು ಮಾಡಿ ಬೆಂಗಳೂರಿಗೆ ನೀರು ಕೊಡಬೇಕು. ಡಿಪಿಆರ್ ಕೂಡಾ ಈಗಾಗಲೇ ತಯಾರಾಗಿದೆ ಎಂದು ಅವರು ಹೇಳಿದರು. ಇನ್ನು ಮೀನುಗಾರಿಕೆ ಇಲ್ಲದಿದ್ದರೆ ಮಂಗಳೂರಿಗೆ ಬೆಲೆ ಇಲ್ಲ, ಆರ್ಥಿಕ ಚಟುವಟಿಕೆಗೆ ಕಾರಣ ಮೀನುಗಾರಿಕೆಯಾಗಿದೆ,.ಮೀನುಗಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿಲ್ಲ. ಮೀನುಗಾರರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ. ಯಾವುದೇ ಸಬ್ಸಿಡಿಯನ್ನೂ ಮೀನುಗಾರರಿಗೆ ನೀಡಿಲ್ಲ.ಮೀನುಗಾರರಿಗೆ ಸಾಲ ನೀಡುವ ವ್ಯವಸ್ಥೆ ಯನ್ನೂ ಮಾಡಿಲ್ಲ. ಮೀನುಗಾರರ ಸಾಲಕ್ಕೆ ಸರ್ಕಾರವೇ ಜಾಮೀನುಹಾಕಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಯು.ಟಿ. ಖಾದರ್, ರಮಾನಾಥ ರೈ, ಮಿಥುನ್ ರೈ, ಜೆ.ಆರ್. ಲೋಬೊ, ಮೊಯ್ದಿನ್ ಬಾವ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.