ಮೂಡುಬಿದಿರೆಯಲ್ಲಿ ರಾಜ್ಯಮಟ್ಟದ ಕವಿಕಾವ್ಯ ಸಂಗಮ-2021

ಮೂಡುಬಿದಿರೆ: ಕನ್ನಡ ಸಾಹಿತ್ಯ ಪರಿಷತ್ ಮೂಲಕ ಸರ್ಕಾರದ ಮಟ್ಟದಲ್ಲಿ ಸಾಹಿತ್ಯದ ಕೆಲಸವಾಗುತ್ತಿದೆ. ಹಾಗೆಯೇ ರಾಜ್ಯದಲ್ಲಿ ಖಾಸಗಿ ಸಂಘ ಸಂಸ್ಥೆಗಳು ಕೂಡ ಮಾದರಿ ಸಾಹಿತ್ಯ ಸೇವೆಗಳನ್ನು ಮಾಡುತ್ತಿವೆ. ಅಂತಹ ಸಂಸ್ಥೆಗಳನ್ನು ಗುaರುತಿಸಬೇಕು.ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸ್ತಬ್ಧವಾದ ನಮ್ಮ ಜೀವನಕ್ರಮ ಸಾಹಿತ್ಯ, ಸಾಂಸ್ಕೃತಿಕಗಳ ಮೂಲಕ ಮತ್ತೆ ಚೈತನ್ಯವನ್ನು ಪಡೆಯಲಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.
ನವಪರ್ವ ಫೌಂಡೇಶನ್ ಬೆಂಗಳೂರು ಇದರ ಮಂಗಳೂರು ಘಟಕದ ವತಿಯಿಂದ ಸಮಾಜಮಂದಿರದಲ್ಲಿ ನಡೆದ ರಾಜ್ಯಮಟ್ಟದ ಕವಿಕಾವ್ಯ ಸಂಗಮ 2021 ಹಾಗೂ ಕವಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಪತಂಗ ಪರ್ವ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ನವಪರ್ವ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮುರಳೀಧರ್ ಕೆ.ಎಸ್ ಅಧ್ಯಕ್ಷತೆವಹಿಸಿದರು. ಡಾ.ಎಂ ಮೋಹನ ಆಳ್ವ, ಮರುಳೀಧರ್ ಅವರನ್ನು ನವಪರ್ವ ಮಂಗಳೂರು ಘಟಕದ ವತಿಯಿಂದ ಸನ್ಮಾನಿಸಲಾಯಿತು.ಕಸಾಪ ನಿಕಟಪೂರ್ವ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕವಿಗೋಷ್ಠಿಯ ಅಧ್ಯಕ್ಷ ಪಿ.ವಿ ಪ್ರದೀಪ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.

ಪ್ರಶಸ್ತಿ ಪ್ರದಾನ: ನವಪರ್ವ ಫೌಂಡೇಶನ್ ಮಂಗಳೂರು ಘಟಕದ ಉಪಾಧ್ಯಕ್ಷೆ ಮಾನಸ ಪ್ರವೀಣ್ ಭಟ್ ಅವರಿಗೆ ನವಪರ್ವ ನಕ್ಷತ್ರ 2021 ಪ್ರಶಸ್ತಿ, ನಿರ್ಣಾಯಕರಾದ ಹರೀಶ್ ಕಜೆ ಅವರಿಗೆ ಕುವೆಂಪು ಪ್ರಶಸ್ತಿ, ಸಂಭ್ರಮ ಕಾರ್ತಿಕ್ ಭಟ್, ಸೌಮ್ಯ ಕುಗ್ವೆ ಅವರಿಗೆ ತ್ರಿವೇಣಿ ಪ್ರಶಸ್ತಿ ನೀಡಲಾಯಿತು. ಆನಂತಕೃಷ್ಣ ಕಲ್ಲೂರಾಯ ಅವರನ್ನು ಗೌರವಿಸಲಾಯಿತು. 20 ಮಂದಿಗೆ ನವಪರ್ವ ಸವ್ಯಸಾಚಿ ಪ್ರಶಸ್ತಿ ಹಾಗೂ ಎಂಟು ಮಂದಿ ಕವಿಗಳಿಗೆ ನವಪರ್ವ ಕವಿ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕವಿಗಳಾದ ಡಾ.ಸುರೇಶ್ ನೆಗಳಗುಳಿ, ರೆಮಂಡ್ ಡಿಕುನ್ಹಾ, ಸುಮಾ ಕಿರಣ್, ಸದಾನಂದ ನಾರಾವಿ, ನವೀನ್ ಕುಲಾಲ್, ರಶ್ಮಿ ಸನಿಲ್, ರೇಖಾ ಸುದೇಶ್ ರಾವ್, ಪರಿಮಳ ಮಹೇಶ್ ರಾವ್, ಶರಣ್ಯ ಬೆಳುವಾಯಿ, ವಿದ್ಯಾಶ್ರೀ ಆಡೂರು, ಆಶಾ ಆಡೂರು, ಸಮ್ಯಕ್ ಜೈನ್, ಡಾ.ಬದರಿನಾಥ ಜಹಗೀರದಾರ ಕವಿಗೋಷ್ಠಿಯಲ್ಲಿ ಭಾಗವಹಿಸಿದರು.

Related Posts

Leave a Reply

Your email address will not be published.