ರಾಷ್ಟ್ರೀಯ ಹೆದ್ದಾರಿ ಅಗಲೀಕರಣ : ತಲಪಾಡಿಯಲ್ಲಿ ಮರಗಳ ಮಾರಣ ಹೋಮ

 ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಭಾಗದ ಮೊದಲ ಹಂತವಾಗಿ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿರುವ ಮರಗಳನ್ನು ತೆರವುಗೊಳಿಸಲು ಸರಕಾರವು ಗುತ್ತಿಗೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ತಲಪಾಡಿಯಿಂದ ಮರಗಳ ಮಾರಣ ಹೋಮದದ ಪ್ರಕ್ರಿಯೆ ಆರಂಭಗೊಂಡಿತ್ತು.
ಮರಗಳನ್ನು ಕಡಿದು ಅದರ ರೆಂಬೆಗಳನ್ನು ರಸ್ತೆ ಬದಿಗಳಲ್ಲಿ ಹಾಗೂ ಬಸ್ಸು ನಿಲ್ದಾಣ ಪರಿಸರಗಳಲ್ಲಿ ಮತ್ತು ಸಾರ್ವಜನಿಕರು ನಡೆದಾಡುತ್ತಿರುವ ಸ್ಥಳಗಳಲ್ಲಿ ಉಪೇಕ್ಷಿಸಿ ಅದನ್ನು ತೆರವುಗೊಳಿಸದೇ ಇರುವುದು ಸಾರ್ವಜನಿಕರಿಗೆ ಸಮಸ್ಯೆಯನ್ನು ಸೃಷ್ಟಿಸಿದೆ. ಕುಂಜತ್ತೂರು, ಉದ್ಯಾವರ, ಪೊಸೋಟು, ಮಂಜೇಶ್ವರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಬಸ್ಸು ತಂಗುದಾಣ ಹಾಗೂ ಸಾರ್ವಜನಿಕರು ನಡೆದಾಡುತ್ತಿರುವ ಸ್ಥಳಗಳಲ್ಲಿ ಮರದ ರೆಂಬೆಗಳನ್ನು ಹಾಕಲಾಗಿದ್ದು, ಅದರ ಮೇಲೆ ಮಳೆ ನೀರು ಬಿದ್ದು ಸಾರ್ವಜನಿಕರಿಗೆ ನಡೆದಾಡಲು ಹಾಗೂ ಬಸ್ಸು ತಂಗುದಾಣಕ್ಕೆ ತಲುಪಲು ಸಂಕಷ್ಟ ಎದುರಾಗಿದೆ.

Related Posts

Leave a Reply

Your email address will not be published.