ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕಳೆದ ಸುಮಾರು ವರ್ಷಗಳಿಂದ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರು ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಇದರ ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ, ಪಡೀಲ್ ಡಿಸ್ಟ್ರಿಕ್ಟ್ 317ಡಿ ಇದರ 2021-22ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಕೇಂದ್ರದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಲಯನ್ ವೇಣಿ ಮರೋಳಿಯವರಿಗೆ ಫಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಲಯನ್.ಎಂ.ಅರುಣ್ ಶೆಟ್ಟಿ ಎಂಜೆಎಫ್ ಅಧ್ಯಕ್ಷ ಅಧಿಕಾರವನ್ನು ಹಸ್ತಾಂತರಿಸಿ. ಉಳಿದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋದಿಸಿದರು. ಬಳಿಕ ನೂತನ ಅಧ್ಯಕ್ಷರಾದ ಲಯನ್ ವೇಣಿ ಮರೋಳಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಈ ಹಿಂದೆಯೂ ನನಗೆ ಲಯನ್ಸ್‌ನಲ್ಲಿ ಅವಕಾಶಗಳು ಬಂದಾಗ ಕೆಲವು ಕಾರಣಗಳಿಂದ ನಿರಾಕರಿಸಿದ್ದೆ. ಆದರೆ ಈ ಭಾರಿ ನನ್ನ ಮೇಲೆ ವಿಶ್ವಾಸವನ್ನಿಟ್ಟು ಲಯನ್ಸ್ ಕ್ಲಬ್ ಕಂಕನಾಡಿ, ಪಡೀಲ್‌ಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೀರಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.


ಬಳಿಕ ಬಳಿಕ ಫಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಲಯನ್.ಎಂ.ಅರುಣ್ ಶೆಟ್ಟಿ ಎಂಜೆಎಫ್‌ರವರು ಮಾತನಾಡಿ ಲಯನ್ಸ್‌ನ ಯಾವುದೇ ಕ್ಲಬ್‌ಅನ್ನು ಇನ್ಸ್ಟಾಲಿಂಗ್  ಮಾಡುವುದು ನನಗೆ ಸಂತೋಷದ ವಿಚಾರ, ಮತ್ತು ನನ್ನ ಸೌಭಾಗ್ಯ, ಯಾರೇ ಅಧ್ಯಕ್ಷರಾದರೂ ಲಯನ್ಸ್ ಕ್ಲಬ್‌ನ ತತ್ವ ಆದರ್ಶಗಳನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.


ಇನ್ನೂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಯನ್ ವೇಣಿ ಮರೋಳಿಯವರ ಜೊತಗೆ ಸೆಕ್ರೆಟರಿಯಾಗಿ ಲಯನ್ ಉಮಾ ಹೆಗ್ಡೆ ಎಂಜೆಎಫ್, ಮತ್ತು ಟ್ರೆಜರರ್ ಆಗಿ ಲಯನ್ ಎಡ್ವಿನ್ ವಾಲ್ಟರ್ ಎಂಜೆಎಫ್ ಅಧಿಕಾರವನ್ನು ಸ್ವೀಕರಿಸಿದರು. ಇದೇ ವೇಳೆ ಕ್ಲಬ್‌ನ ವತಿಯಿಂದ ಕೆಲವು ಬಡ ಕುಟುಂಬಗಳಿಗೆ ದಿನಸಿ ಸಮಾಗ್ರಿಗಳನ್ನು ವಿತರಿಸಲಾಯಿತು.


ಈ ಸಂದರ್ಭ ಈ ಸಂದರ್ಭ 2020-21ನೇ ಸಾಲಿನ ಅಧ್ಯಕ್ಷರಾಗಿದ್ದ ಲಯನ್ ಅರುಂಧತಿ ಶೆಟ್ಟಿ, ಎಂಜೆಎಫ್, ಸೆಕ್ರೆಟರಿ ದೀಪಾಲಿ ಕಂಭದಕೋಣೆ, ಎಂಜೆಎಫ್, ಟ್ರೆಜರರ್ ಲಯನ್ ಮಾಧವ ಉಳ್ಳಾಲ್, ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಶಶಿಧರ್ ಮಾರ್ಲ, ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಟ್ರೆಜರರ್ ಲಯನ್ ಶ್ರೀನಿವಾಸ್ ಪೂಜಾರಿ, ಡಿಸ್ಟ್ರೀಕ್ಟ್ ಕೊರ್ಡಿನೇಟರ್ ಲಯನ್ ದಾಮೋದರ್.ಬಿ.ಎಂ, ರೀಜನ್ ಚೈರ್ ಪರ್ಸನ್ ಸ್ವರೂಪಾ ಶೆಟ್ಟಿ, ಝೋನ್ ಚೈರ್‌ಮ್ಯಾನ್ ಲೊಕೇಶ್ ಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.