ವಿಟ್ಲದಲ್ಲಿ ಚಿರತೆಗಳ ಕಾಟ: ಬೇಸತ್ತ ಸಾರ್ವಜನಿಕರಿಂದ ಬೋನು ಅಳವಡಿಕೆ

ಬಂಟ್ವಾಳ ತಾಲೂಕಿನ ವಿಟ್ಲದ ಕೊಳ್ನಾಡು ಗ್ರಾಮದ ಮದಕ, ಪಡಾರು, ಮಾದಕಟ್ಟೆ, ಬಾರೆಬೆಟ್ಟು, ಮುಂಡತ್ತಜೆ ಮತ್ತು ತಾಳಿತ್ತನೂಜಿ ಸುತ್ತಮುತ್ತ ಕಳೆದ ಎರಡು ತಿಂಗಳಿಂದ ಮಿತಿಮೀರಿದ ಚಿರತೆಗಳ ಕಾಟದಿಂದ ಬೇಸತ್ತ ಸಾರ್ವಜನಿಕರು ಬೋನು ಅಳವಡಿಸಿದ್ದಾರೆ.

ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರೂ ಒಂದು ಬಾರಿ ಮಾತ್ರ ಸ್ಥಳಕ್ಕಾಗಮಿಸಿ ಹರಕೆ ತೀರಿಸಿದ್ದಾರೆ. ಬೋನು ತಂದಿಟ್ಟು ಚಿರತೆ ಹಿಡಿಯುವಂತೆ ಸ್ಥಳೀಯರು ಅಂಗಲಾಚಿದ್ದರೂ  ತಂದಿರಿಸುತ್ತೇವೆಂದು ತಿಳಿಸಿದ್ದರು.

ಅದಾದ ಬಳಿಕ ಅರಣ್ಯಾಧಿಕಾರಿಗಳು ಬಳಿಕ ಅತ್ತ ಕಡೆ ತಲೆಹಾಕಿಲ್ಲ. ಇದರಿಂದ ಬೇಸತ್ತ ಸ್ಥಳೀಯ ಉತ್ಸಾಹಿ ಯುವಕರು ಸಮಾಜಮುಖಿ ಕಾರ್ಯಗಳಿಂದ ಹೆಸರು ಗಳಿಸಿದ್ದ ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲದ ಮೊರೆ ಹೋಗಿದ್ದರು. ತಕ್ಷಣವೇ ಸ್ಪಂದಿಸಿದ ಮುರಳೀಧರ ವಿಟ್ಲ ತನ್ನ ತಂಡದೊಂದಿಗೆ ಆಗಮಿಸಿ “ಆಪರೇಷನ್ ಚೀತಾ” ಕಾರ್ಯಾಚರಣೆಯ ಪ್ರಥಮ ಹಂತವಾಗಿ ಗುಡ್ಡದಲ್ಲಿ ಚಿರತೆ ಸೆರೆಗಾಗಿ ಬೋನು ಇರಿಸಿದ್ದಾರೆ. ಫ್ರೆಂಡ್ಸ್ ವಿಟ್ಲ ಹಾಗೂ ಸ್ಥಳೀಯ ಯುವಕರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Related Posts

Leave a Reply

Your email address will not be published.