“ವಿದ್ಯೆಯನ್ನು ಬಳಸಿ – ಬೆಳೆಸಿ” : ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿಯ ಕಾರ್ಯದರ್ಶಿ ಶ್ರೀ. ಡಿ. ಹರ್ಷೇಂದ್ರ ಕುಮಾರ್

ಉಜಿರೆ : ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲಿ ಛಲ ಎನ್ನುವುದು ಮುಖ್ಯ. ಛಲ ಇದ್ದರೆ ಎಂತಹ ಕಷ್ಟದ ಕೆಲಸವನ್ನಾದರೂ ಸಾಧಿಸಲು ಸಾಧ್ಯ ಎಂದು ಎಸ್.ಡಿ.ಎಂ ಸೊಸೈಟಿಯ ಕಾರ್ಯದರ್ಶಿ ಶ್ರೀ. ಡಿ. ಹರ್ಷೇಂದ್ರ ಕುಮಾರ್ ಹೇಳಿದರು.

ಉಜಿರೆಯ ಎಸ್.ಡಿ.ಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಹಿರಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಮ್ಮ ವ್ಯಕ್ತಿತ್ವ ವಿಕಸನದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಕಲಿಕೆಯ ಸಮಯದಲ್ಲಿ ಮತ್ತು ಕಲಿಕೆಯ ನಂತರವೂ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ನಮ್ಮನ್ನು ನಾವೇ ಅರಿತುಕೊಳ್ಳಬಹುದು ಎಂದು ಹೇಳಿದರು.

ಜ್ಞಾನ ಸಂಪಾದನೆಗೆ ಕೊನೆಯಿಲ್ಲ. ಹಾಗಾಗಿ ನಮ್ಮ ಕಲಿಕೆಯ ಹಂತದಲ್ಲೇ ಸಾಧ್ಯವಾದಷ್ಟು ಜ್ಞಾನ ಸಂಪಾದನೆ ಮಾಡಿಕೊಳ್ಳವೇಕು. ಆ ಜ್ಞಾನವನ್ನು ವೃದ್ಧಿಸುವುದರಲ್ಲಿ ಸಿಗುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಆಗ ಎಂತಹ ಕಠಿಣ ಪರಿಸ್ಥಿತಿಗಳು ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿಕೊಟ್ಟರು.

ಸಮಾಜದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಆ ಸಮಸ್ಯೆಯ ಪರಿಹಾರಕ್ಕೆ ವಿದ್ಯೆ ಮತ್ತು ಕಲಿತ ವಿದ್ಯೆಯ ಅನುಷ್ಠಾನ ಅತೀ ಮುಖ್ಯವಾಗಿರುತ್ತದೆ. ಓದಿದ ವಿದ್ಯೆಯನ್ನು ಬಳಸಿಕೊಂಡಾಗ ಬೆಳೆವಣಿಗೆ ಸಾಧ್ಯವಾಗುತ್ತದೆ. ಮತ್ತು ಪ್ರಯೋಗಗಳ ಮೂಲಕ ಹೊಸತನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಉಜಿರೆ ಕಾಲೇಜಿನಲ್ಲಿ ಎಸ್. ಡಿ.ಎಮ್.ಐ.ಟಿ.ಐ 31 ವಿದ್ಯಾರ್ಥಿಗಳಿಗೆ 2019-20ನೇ ಸಾಲಿನ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರವನ್ನು ಡಾ. ಸುರೇಂದ್ರ ಹೆಗ್ಗಡೆ ವಿತರಿಸಿದರು. ವಿದ್ಯಾರ್ಥಿನಿ ಎಂ.ಎಸ್.ಯೋಗಿತ ಐ.ಟಿ. ಐ ಪರೀಕ್ಷೆಯಲ್ಲಿ 600 ಅಂಕಗಳಿಗೆ 523 ( 87.16%) ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ. ಡಿ. ಹರ್ಷೇಂದ್ರ ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಶಿಕ್ಷರೊಂದಿಗೆ ವಿದ್ಯಾರ್ಥಿನಿಯರು ಅವರಿಗೆ ಶುಭಕೋರಿದರು.

ಎಸ್.ಡಿ.ಎಂ ಮಹಿಳಾ ಐ.ಟಿ.ಐ ಕಾಲೇಜಿನ
ಪ್ರಾಂಶುಪಾಲ ವಿ.ಪ್ರಕಾಶ್ ಕಾಮತ್ ಸ್ವಾಗತಿಸಿ, ಎಸ್.ಡಿ.ಎಂ ಐ.ಟಿ.ಐ.ಡಬ್ಲ್ಯೂ ಕಿರಿಯ ತರಬೇತಿ ಅಧಿಕಾರಿಗಳಾದ ಸಂಧ್ಯಾ ಹಾಗೂ ನಿಶ್ಮಿತ ನಿರೂಪಿಸಿದರು.

Related Posts

Leave a Reply

Your email address will not be published.