ವಿನಾಯಕ ಬಾಳಿಗಾ ಕೊಲೆ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಲಿದೆ: ಡಿಕೆಶಿ ಭರವಸೆ

ಆರ್‌ಟಿಐ ಕಾರ್ಯಕರ್ತ ವಿನಾಯ ಬಾಳಿಗರವರ ಅಮಾನುಷ ಹತ್ಯೆ ನಡೆದು ಇಂದಿಗೆ 5 ವರುಷಗಳೇ ಸಂದರೂ ನೈಜ ಕೊಲೆ ಆರೋಪಿಗಳಿಗೆ ಇನ್ನೂ ಕೂಡ ಶಿಕ್ಷೆಯಾಗದಿರುವ ಹಿನ್ನೆಲೆಯಲ್ಲಿ ದುಃಖ ತೃಪ್ತ ಬಾಳಿಗಾ ಕುಟುಂಬ ಸದಸ್ಯರು ಮತ್ತು ಜಸ್ಟೀಸ್ ಫಾರ್ ವಿನಾಯಕ ಬಾಳಿಗ ಫೋರಂ, ಕಾನೂನು ಹೋರಾಟಗಾರರು ಸೇರಿಕೊಂಡು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಲ್ಲಿ ತಮ್ಮ ಸಂಕಟವನ್ನು ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಸಹಾಯ ಹಸ್ತ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಲು ನಗರಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ಭೇಟಿಯಾದ ಜಸ್ಟೀಸ್ ಫಾರ್ ವಿನಾಯಕ ಬಾಳಿಗ ತಂಡವು ಖಾಸಗಿ ಹೋಟೇಲೊಂದರಲ್ಲಿ ಡಿಕೆಶಿಯವರಿಗೆ ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು, ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ನನ್ನ ಧ್ವನಿಯು ಸದನದಲ್ಲಿ ಮೊಳಗುವ ಮೂಲಕ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ವಿನಾಯಕ ಬಾಳಿಗ ಸಹೋದರಿ ಅನುರಾಧ ಬಾಳಿಗ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್ ಹಾಗೂ ಜಿಎಸ್‌ಬಿ ಮುಖಂಡರಾದ ಸುಹಾಸ್ ಕಾಮತ್, ಮಂಜುನಾಥ್ ಬಾಳಿಗ, ಆರ್. ಗಣಪತಿ ಬಾಳಿಗ, ಅರುಣಾ ಪೈ, ಪ್ರಕಾಶ್ ಶೆಣೈ, ಮಂಜುಳ ನಾಯಕ್, ಸತೀಶ್ ಪ್ರಭು, ಯೋಗೀಶ್ ನಾಯಕ್, ಮೋಹನ್ ಪೈ, ಸಮರ್ಥ್ ಭಟ್, ಭವಾನಿ ಶಂಕರ್, ವೆಂಕಟೇಶ್ ನಾಯಕ್, ದೇವದಾಸ್ ಪ್ರಭು, ಸುಧಾಕರ್ ಶೆಣೈ ಹಾಗೂ ಇತರರು ಹಾಜರಿದ್ದರು.

Related Posts

Leave a Reply

Your email address will not be published.