ವಿ4 ನ್ಯೂಸ್‌ಗೆ 16ರ ಸಂಭ್ರಮ: ಕೋವಿಡ್ ವಾರಿಯರ್ಸ್‌ಗಳಿಗೆ ಗೌರವಾರ್ಪಣೆ

ಕರಾವಳಿ ಕರ್ನಾಟಕದಲ್ಲಿ ಮನೆ ಮಾತಾಗಿರುವ ವಿ4ನ್ಯೂಸ್ ವಾಹಿನಿಗೆ 16ರ ಸಂಭ್ರಮ. ಈ ಸಂಭ್ರಮವನ್ನು ಕೋವಿಡ್ ವಾರಿಯರ್ಸ್‌ಗಳಿಗೆ ಗೌರವಾರ್ಪಣೆ ಸಲ್ಲಿಸುವ ಮೂಲಕ ವಿನೂತನವಾಗಿ ಆಚರಿಸಲಾಯಿತು.


ಕರಾವಳಿಯಲ್ಲಿ ನಡೆಯುವ ಕ್ಷಿಪ್ರ ಬೆಳವಣಿಗೆಗಳನ್ನು ನೇರಪ್ರಸಾರದಲ್ಲೇ ಅತ್ಯಂತ ವೇಗವಾಗಿ ಪ್ರಸಾರ ಮಾಡುವ ನ್ಯೂಸ್ ಬುಲೆಟಿನ್‌ಗಳು, ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಡಿಬೇಟ್ ಶೋಗಳು, ಮನರಂಜನಾ ಕಾರ್ಯಕ್ರಮಗಳು, ಕಾಮಿಡಿ ರಿಯಾಲಿಟಿ ಶೋ, ಹೆಲ್ತ್ ಶೋಗಳು, ಶೈಕ್ಷಣಿಕ ಕಾರ್ಯಕ್ರಮಗಳು, ಕರಾವಳಿಯ ಸಮಸ್ತ ದೈವ-ದೇವಾಲಯಗಳ ಪರಿಚಯ ನೀಡುವ ದೈವ-ದೇವರು ಎನ್ನುವ ಕಾರ್ಯಕ್ರಮವೂ ವಿ4 ನ್ಯೂಸ್‌ನಲ್ಲಿ ಮೂಡಿಬರುತ್ತಿದೆ. ಕಾಮಿಡಿ ಪ್ರೀಮಿಯರ್ ಲೀಗ್ ಕಳೆದ ಮೂರು ವರ್ಷಗಳಿಂದ ಚಾನೆಲ್‌ನ ಜನಪ್ರಿಯತೆಯನ್ನು ಉತ್ತುಂಗಕ್ಕೆ ಏರಿಸಿದೆ ದಿನವಿಡೀ ತಾಜಾ ತಾಜಾ, ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡುತ್ತಿರುವುದು ವಿ೪ ನ್ಯೂಸ್‌ನ ವಿಶೇಷತೆ. ಇಷ್ಟೇಲ್ಲಾ ವಿಶೇಷತೆಗಳ ನಡುವೆಯೇ ಇದೀಗ ವಿ4 ನ್ಯೂಸ್ ವಾಹಿನಿಗೆ 16ರ ಸಂಭ್ರಮ.

ವಿ೪ ನ್ಯೂಸ್‌ಗೆ 16ರ ಈ ಶುಭ ಸಂದರ್ಭದಲ್ಲಿ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವಿನೂತನ ರೀತಿಯಲ್ಲಿ ಸೇವೆಗೈದ ವಾರಿಯರ್ಸ್‌ಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿ೪ ನ್ಯೂಸ್ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಸ್ಮರಣಿಕೆ ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ವಿ4 ನ್ಯೂಸ್‌ಗೆ 16ರ ಸಂಭ್ರಮದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.


ಇನ್ನು ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳಾದ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕುಳಾಯಿ ಫೌಂಡೇಶನ್‌ನ ಪ್ರತಿಭಾ ಕುಳಾಯಿ, ಪಟ್ಲ ಫೌಂಡೇಶನ್, ತುಳುನಾಡ ರಕ್ಷಣಾ ವೇದಿಕೆ, ಟೀಮ್ ಬಿ. ಹ್ಯೂಮನ್, ಮೇಕ್ ಸಮ್ ವನ್ ಸ್ಮೈಲ್, ಮಂಗಳೂರಿನ ಬ್ಲಾಕ್ ಮಹಿಳಾ ಕಾಂಗ್ರೆಸ್, ವೆಲ್‌ನೆಸ್ ಹೆಲ್ಪ್ ಕೇರ್, ಬಿರುವೆರ್ ಕುಡ್ಲ, ಸೇವಾ ಭಾರತಿ, ಸೇವಾಂಜಲಿ ಟ್ರಸ್ಟ್ ಮನಪಾ ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ಕಾರ್ಪೋರೇಟರ್ ಗಣೇಶ್ ಕುಲಾಲ್, ಮಂಜುನಾಥ್ ರೇವಣ್ಕರ್, ಡಾ. ಸುರೇಶ್ ಸುರತ್ಕಲ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ವೇತಾ ಪೂಜಾರಿ, ಡಾ ಸತೀಶ್ ಕಲಿಮಾರ್, ಜೆರಾಲ್ಡ್ ಟವರ್, ಕದ್ರಿ ಮನೋಹರ್ ಶೆಟ್ಟಿ, ಅವರನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿ4 ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್, ಉಪಾಧ್ಯಕ್ಷರಾದ ರೋಸ್ಲಿನ್ ಡಿಲೀಮಾ, ಸಂಪಾದಕರಾದ ತಾರನಾಥ್ ಗಟ್ಟಿ ಕಾಪಿಕಾಡ್ ಅವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಮೈಮ್ ರಾಮ್‌ದಾಸ್ ಕಾರ್ಯಕ್ರಮ ನಿರೂಪಿಸಿದರು.

 

Related Posts

Leave a Reply

Your email address will not be published.