ವೆನ್ಲಾಕ್ ಆಸ್ಪತ್ರೆಯಲ್ಲಿ ಚಾರಿಟೇಬಲ್ ಕೋವಿಡ್ ವಾರ್ಡ್ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರೌಂಡ್ ಟೇಬಲ್ ಇಂಡಿಯಾ ಟ್ರಸ್ಟ್ ಮತ್ತು ಅಸೋಸಿಯೇಶನ್ ಆಫ್ 41 ಕ್ಲಬ್ಸ್ ಆಫ್ ಇಂಡಿಯಾ ವತಿಯಿಂದ ವನ್ ಮೋರ್ ಬ್ರೆತ್ ನೂತನ ಚಾರಿಟೇಬಲ್ ಕೋವಿಡ್ ವಾರ್ಡ್ ಉದ್ಘಾಟನೆಗೊಂಡಿತು.


 ರೌಂಡ್ ಟೇಬಲ್ ಇಂಡಿಯಾ ಟ್ರಸ್ಟ್ ಮತ್ತು ಅಸೋಸಿಯೇಶನ್ ಆಫ್ 41 ಕ್ಲಬ್ಸ್ ಆಫ್ ಇಂಡಿಯಾದ ವತಿಯಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವನ್ ಮೋರ್ ಬ್ರೆತ್ ನೂತನ ಚಾರಿಟೇಬಲ್ ಕೋವಿಡ್ ವಾರ್ಡ್ ಉದ್ಘಾಟನೆಗೊಂಡಿತು. ಶುಕ್ರವಾರದಂದು ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ ಅವರು ಉದ್ಘಾಟಿಸಿದ್ರು.. ಈ ವೇಳೆ ಮಾತನಾಡಿದ 41 ಕ್ಲಬ್ ಆಫ್ ಇಂಡಿಯಾದ ಏರಿಯಾ3 ಚೇರ್‌ಮೆನ್ ಎಂ.ಅಲೀಮ್ ಮಾತನಾಡಿ, ಕರ್ನಾಟಕ ಸೇರಿದಂತೆ ವಿವಿಧ ಕಡೆಗಳ ಆಸ್ಪತ್ರೆಗಳಿಗೆ ಸಮಾಜಮುಖಿ ಕೆಲಸವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.


ಈ ವೇಳೆ ವೆನ್ಲಾಕ್ ಅಧೀಕ್ಷಕ ಡಾ|ಸದಾಶಿವ ಶಾನುಭಾಗ್, ಮಂಗಳೂರು 41ಕ್ಲಬ್ಸ್ 120 ಚೇರ್ಮನ್ ಡೆನ್ಸಿಲ್ ಕ್ಯಾಸ್ಟಲಿನೊ, ರೌಂಡ್ ಟೇಬಲ್ ಮಂಗಳೂರು ಚೇರ್ಮನ್ ವಿನಯ್ ಫರ್ನಾಂಡಿಸ್, ಮಂಗಳೂರು ರೌಂಡ್ ಟೇಬಲ್ 115 ಪ್ರತಿನಿಧಿ ರಾಯ್‌ಸ್ಟರ್ ಡಿಸೋಜಾ, ಕ್ಲಬ್ ಸದಸ್ಯ ಮೆಲ್ರಾಯ್ ಡಿಸೋಜಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಇನ್ನು ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 52.81ಲಕ್ಷ ವೆಚ್ಚದಲ್ಲಿ ವಾರ್ಡ್ ಸಾಪಿಸಲಾಗಿದ್ದು, ಇಲ್ಲಿ 50ಬೆಡ್, 50ಟೇಬಲ್, 50ದಿಂಬು, 150ಬೆಡ್ ಶೀಟ್, 150 ಬ್ಲಾಂಕೆಟ್, 150 ಟವಲ್,50 ಚೇರ್, 10 ಸಿಂಗಲ್ ಫ್ಲೋ, ಮತ್ತು 20 ಡ್ಯುವೆಲ್ ಫ್ಲೋ ಆಕ್ಸಿಜನ್ ಕಾನ್ಸಂಟ್ರೇಟರ್, 50ಐವಿ ಸ್ಟ್ಯಾಂಡ್ ಸಹಿತ ವಿವಿಧ ವಸ್ತು, ಉಪಕರಣಗಳನ್ನ ನೀಡಲಾಗಿದೆ.

Related Posts

Leave a Reply

Your email address will not be published.