ವ್ಯಕ್ತಿ ಕಾನೂನಿನ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಿರಬೇಕು: ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಜಿ ತಿಮ್ಮಾಪುರ ಹೇಳಿಕೆ

ಬಂಟ್ವಾಳ: ಕಾನೂನಿನ ಅರಿವಿಲ್ಲದೆ ಮಾಡಿದ ತಪ್ಪುಗಳಿಗೆ ಶಿಕ್ಷೆಯಿಂದ ವಿನಾಯಿತಿ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನ ಬಗ್ಗೆ ಸಾಮಾನ್ಯ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಜಿ ತಿಮ್ಮಾಪುರ ಹೇಳಿದರು.

ಅವರು ತುಂಬೆ ಗ್ರಾಮ ಪಂಚಾಯತಿ, ತಾಲೂಕು ಕಾನೂನುಗಳ ಸೇವಾ ಸಮಿತಿ ಬಂಟ್ವಾಳ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ತುಂಬೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ನಡೆದ ದೌರ್ಜನ್ಯದಿಂದ ಮುಕ್ತಿ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಗಾರದಲ್ಲಿ ಸಿಗುವ ಮಾಹಿತಿಯನ್ನು ತೊಂದರೆಗೊಳಗಾದ ಜನರಿಗೆ ತಿಳಿಸುವ ಮೂಲಕ ನಾವು ಪ್ರತಿಯೊಬ್ಬರಿಗೂ ನೆರವಾಗಬಹುದಾಗಿದೆ. ನೊಂದ ಮಹಿಳೆಯರಿಗೆ ಕಾನೂನಡಿ ನೆರವು ನೀಡುವ ನಿಟ್ಟಿನಲ್ಲಿ ಈ ಕಾರ್ಯಗಾರವನ್ನು ನಡೆಸಲಾಗುತ್ತಿದೆ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ತುಂಬೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಬಿ.ತುಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾನೂನಿನ ಅರಿವು ಕಾರ್ಯಕ್ರಮ ಆಂದೋಲನದ ರೀತಿಯಲ್ಲಿ ನಡೆಯಬೇಕಾಗಿದೆ. ತುಂಬೆ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ದ್ರವ ತ್ಯಾಜ್ಯ ಇಂಗು ಗುಂಡಿ ನಿರ್ಮಿಸಿವ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ ಎಂದರು. ಸಹಾಯಕ ಸರಕಾರಿ ಅಭಿಯೋಜಕಿ ಹರಿಣಿ ಕುಮಾರಿ ಡಿ. ಕಾನೂನು ಮಾಹಿತಿ ನೀಡಿದರು.
ಪಂಚಾಯತಿ ಉಪಾಧ್ಯಕ್ಷೆ ಜಯಂತಿ ಕೇಶವ, ಬಂಟ್ವಾಳ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಮೋಹನ ಪ್ರಭು ಕೆ., ಆಪ್ತ ಸಮಾಲೋಚಕಿ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತಿ ಸದಸ್ಯರಾದ ಗಣೇಶ್ ಸಾಲ್ಯಾನ್, ಇಬ್ರಾಹಿಂ ವಳವೂರು, ಕಿಶೋರ್ ರಾಮಲ್ ಕಟ್ಟೆ, ಅಬ್ದುಲ್ ಅಜೀಜ್, ಮಹಮ್ಮದ್ ಝಹೂರ್, ಅರುಣ್ ಗಾಣದಲಚ್ಚಿಲ್, ಹೇಮಲತಾ ಜಿ. ಪೂಜಾರಿ, ಶಶಿಕಲಾ ಮನೋಹರ ಕೊಟ್ಟಾರಿ, ಜಯಂತಿ ನಾಗೇಶ, ಜಯಂತಿ ಶ್ರೀಧರ್, ಆತಿಕಾ ಬಾನು, ಜೆಸಿಂತಾ ಡಿಸೋಜಾ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಸ್ಥಳೀಯ ಪ್ರಮುಖರಾದ ಸದಾಶಿವ ಡಿ. ತುಂಬೆ, ಎಂ. ಆರ್ ನಾಯರ್, ಜಿ.ಪಂ. ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ಪ್ರಕಾಶ್ ಆಚಾರ್ಯ, ಮನೋಹರ ಕೊಟ್ಟಾರಿ, ದಿನೇಶ್ ಪರ್ಲಕೆ, ಜಗದೀಶ್ ಗಟ್ಟಿ ಪರ್ಲಕೆ ಮತ್ತಿತರರು ಭಾಗವಹಿಸಿದ್ದರು..
ಪಂಚಾಯತಿ ಅಭಿವೃದ್ದಿ ಅಧಿಕಾರಿ ಚಂದ್ರಾವತಿ ಸ್ವಾಗತಿಸಿದರು. ಸಿಡಿಪಿಒ ಗಾಯತ್ರಿ ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತಿ ಲೆಕ್ಕ ಸಹಾಯಕಿ ಚಂದ್ರಕಲಾ ವಂದಿಸಿದರು.

Related Posts

Leave a Reply

Your email address will not be published.