ಶಿಕ್ಷಣದಲ್ಲಿ ಸಮಗ್ರ ಗುಣಮಟ್ಟ ನಿರ್ವಹಣೆ’ ಬಗ್ಗೆ ಜೂ.28ರಂದು ವರ್ಚುವಲ್ ವಿಚಾರ ಸಂಕಿರಣ

ಮಂಗಳೂರು: ಶ್ರೀನಿವಾಸ ವಿ.ವಿ ಯ ಶಿಕ್ಷಣ ವಿದ್ಯಾಲಯದ ವತಿಯಿಂದ ‘ಶಿಕ್ಷಣದಲ್ಲಿ ಸಮಗ್ರ ಗುಣಮಟ್ಟ ನಿರ್ವಹಣೆ’ ಬಗ್ಗೆ ಜೂ.28ರಂದು ವರ್ಚುವಲ್ ವಿಚಾರ ಸಂಕಿರಣ ನಡೆಯಲಿದೆ. ಈ ವಿಚಾರಸಂಕಿರಣದಲ್ಲಿ ಮಹಾತ್ಮ ಜ್ಯೋತಿ ಬಾಪುಲೆ ರೋಹಿಲ್ ಖಂಡ್, ಉತ್ತರ ಪ್ರದೇಶ ವಿ.ವಿಯ ಶಿಕ್ಷಣ ವಿಭಾಗದ ಪ್ರೊ. ಗೌರವ್ ರಾವ್, ದಿಕ್ಸೂಚಿ ಭಾಷಣವನ್ನು ಮಂಡಿಸಲಿದ್ದಾರೆ.

ಶ್ರೀನಿವಾಸ್ ವಿ.ವಿಯ ಸಹ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್, ಇವರ ಉತ್ತರಾಧಿತ್ವದಲ್ಲಿ ನಡೆಯುವ, ಈ ವಿಚಾರಸಂಕಿರಣದಲ್ಲಿ, ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ವಿ. ವಿ ಯ ಉಪಕುಲಪತಿ ಡಾ. ಎ. ಶ್ರೀನಿವಾಸ ರಾವ್, ಹೋಟೆಲ್ ಶ್ರೀನಿವಾಸ್ ಆಡಳಿತ ನಿರ್ದೇಶಕರಾದ ಶ್ರೀಮತಿ ವಿಜಯಲಕ್ಷ್ಮಿ ಆರ್ ರಾವ್, ಎ. ಶಾಮರಾವ್ ಫೌಂಡೇಶನ್ ಕಾರ್ಯದರ್ಶಿ ಶ್ರೀಮತಿ ಮಿತ್ರಾ ಎಸ್ ರಾವ್ ಭಾಗವಹಿಸಲಿದ್ದಾರೆ. ಶ್ರೀನಿವಾಸ ವಿ.ವಿ ಕುಲಪತಿ ಪಿ.ಎಸ್.ಐತಾಳ್ ಅಧ್ಯಕ್ಷತೆ ವಹಿಸಲಿದ್ದಾರೆ, ಎಂದು ಸಂಯೋಜಕರಾದ ಶ್ರೀಮತಿ ಶಕೀಲಾ ತಿಳಿಸಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಪ್ರಸ್ತುತ ಪಡಿಸಲಿರುವ ಸಂಶೋಧನಾ ಪ್ರಬಂಧಗಳ ನಿರ್ವಹಣೆಯನ್ನು ಪಾಂಡಿಚೇರಿ ವಿ.ವಿ ಯ, ಮಾಹೆ ಸಹಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಸಿದ್ದೀಕಿ ಅಸ್ಲಾಂ ನಿರ್ವಹಿಸಲಿದ್ದಾರೆ. ಸುಮಾರು 25ಕ್ಕಿಂತ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ.

Related Posts

Leave a Reply

Your email address will not be published.