ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಕೋವಿಡ್ ಲಸಿಕೆ ಶಿಬಿರ

ಮಂಗಳೂರು: ನಗರದ ಶ್ರೀನಿವಾಸ್ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ ದ.ಕ. ಜಿಲ್ಲಾ ಆರೋಗ್ಯ ಕೇಂದ್ರ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ, ಕ್ಯಾಂಪಸ್‌ನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡುವ ಶಿಬಿರ ಜರಗಿತು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್ ಕೋವಿಡ್ ವಾರಿಯರ್ಸ್‌ಗಳನ್ನು ಈ ಸಂದರ್ಭ ಅಭಿನಂದಿಸಿದರು. ಈ ಸಂದರ್ಭ ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಶಿಲ್ಪ, ಸಿಬ್ಬಂದಿಗಳಾದ ಸುರೇಖಾ, ಸುಪ್ರಿತ, ವಿಜಯ್ ಹಾಗೂ ಅಶ್ವಿನಿ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಒಟ್ಟು 600 ಮಂದಿಗೆ ಲಸಿಕೆ ನೀಡಲಾಯಿತು.

 

Related Posts

Leave a Reply

Your email address will not be published.