ಶ್ರೀನಿವಾಸ್ ಸಮೂಹ ಕಾಲೇಜುಗಳ ಘಟಿಕೋತ್ಸವ ಸಮಾರಂಭ

ಎ. ಶಾಮರಾವ್ ಪ್ರತಿಷ್ಟಾನದ ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ 2019ನೇ ಬ್ಯಾಚ್‌ನ ಪದವೀಧರರಿಗೆ ಪದವಿ ಪ್ರಧಾನ ಸಮಾರಂಭವನ್ನು ಶ್ರೀನಿವಾಸ್ ಸಮೂಹ ಸಂಸ್ಥೆಯ ವಲಚ್ಚಿಲ್ ಕ್ಯಾಂಪಸ್‌ನಲ್ಲಿ ಆಚರಿಸಲಾಯಿತು.
ಡಾ. ಸಿ. ಎ. ರಾಘವೇಂದ್ರ ರಾವ್, ಕುಲಾಧಿಪತಿಗಳು, ಶ್ರೀನಿವಾಸ್ ಯುನಿವರ್ಸಿಟಿ, ಅಧ್ಯಕ್ಷರು, ಎ. ಶಾಮರಾವ್ ಫೌಂಡೇಶನ್, ಮಂಗಳೂರು, ಇವರು ಸಮಾರಂಭದ ಆಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಪದವಿ ನಿಮ್ಮ ವೃತ್ತಿ ಜೀವನಕ್ಕೆ ಅಡಿಪಾಯವಾಗಿದೆ ಮತ್ತು ಅವರ ಸ್ವಂತ ಕ್ಷೇತ್ರದಲ್ಲಿ ಮಿಂಷಲು ಆಶೀರ್ವದಿಸುತ್ತದೆ. ನಿಮ್ಮ ಜ್ಞಾನವನ್ನು ನವೀಕರಿಸಿ ಮತ್ತು ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಒಬ್ಬರು ಯಶಸ್ವಿಯಾಗಬಹುದು.
ಮುಖ್ಯ ಅತಿಥಿಗಳಾಗಿ ಶ್ರೀ ರೋಹನ್ ಡಿ.ಸೋಜ, ಡೆಲಿವರಿ ಮ್ಯಾನೇಜರ್, ಇನ್‌ಪೋಸಿಸ್ ಲಿಮಿಟೆಡ್, ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜಕ್ಕೆ ಮೌಲ್ಯಾಧಾರಿತ ಸಾಮಾಜಿಕ ಜವಾಬ್ದಾರಿಯುತ ಪದವೀಧರರನ್ನು ನೀಡಿದ ಸಂಸ್ಥೆಯನ್ನು ಅಭಿನಂದಿಸಿದರು ಮತ್ತು ಪದವೀಧರರಿಗೆ ಏಕಾಗ್ರತೆ ಇರಲಿ, ತಾಳ್ಮೆಯಿಂದ ದೀರ್ಘಾವಧಿಯ ಗುರಿಯನ್ನು ಹೊಂದಿಸಿ, ಸವಾಲುಗಳ ಮೂಲಕ ಬದುಕುವ ಅವಕಾಶಗಳು ನಿಮ್ಮ ಬಾಗಿಲನ್ನು ತಟ್ಟುತ್ತದೆ ಎಂದು ಕರೆಯಿತ್ತರು.
ಡಾ. ಎ.ಶ್ರೀನಿವಾಸ್ ರಾವ್, ಉಪಕುಲಾಧಿಪತಿಗಳು, ಶ್ರೀನಿವಾಸ್ ಯುನಿವರ್ಸಿಟಿ, ಉಪಾಧ್ಯಕ್ಷರು, ಎ. ಶಾಮರಾವ್ ಫೌಂಡೇಶನ್, ಮಂಗಳೂರು, ಈ ಸಂದರ್ಭದಲ್ಲಿ ಆಸಕ್ತಿವಹಿಸಿ ಭಾಗವಹಿಸಿದ ಪದವೀಧರರನ್ನು ಅಭಿನಂದಿಸಿದರು. ಪ್ರಸ್ತುತ ಸವಾಲುಗಳನ್ನು ಎದುರಿಸಲು ಯಾವಾಗಲೂ ನಿಮ್ಮ ಜ್ಞಾನವನ್ನು ನವೀಕರಿಸಿ ಎಂದು ಕರೆಯಿತ್ತರು.
ಶ್ರೀಮತಿ ವಿಜಯಲಕ್ಷ್ಮಿ ಆರ್ ರಾವ್, ಡೈರೆಕ್ಟರ್, ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆ ಇವರು ಪದವೀಧರರು ತಮ್ಮ ವೃತ್ತಿ ಜೀವನದಲ್ಲಿ ಎತ್ತರವನ್ನು ಸಾಧಿಸಲಿ ಎಂದು ಆಶೀರ್ವದಿಸಿದರು. ಹಾಗೂ ಶ್ರೀಮತಿ ಮಿತ್ರ ಎಸ್. ರಾವ್, ಕಾರ್ಯದರ್ಶಿಗಳು ಎ. ಶಾಮರಾವ್ ಫೌಂಡೇಶನ್, ಮಂಗಳೂರು ಇವರು ಎಲ್ಲಾ ಪದವೀಧರರಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿ ತಮ್ಮ ಜೀವನದಲ್ಲಿ ಯಶಸ್ಸನ್ನು ಬಯಸಿದರು.
ಡಾ.ಶ್ರೀನಿವಾಸ್ ಮಯ್ಯ ಡಿ, ಪ್ರಾಂಶುಪಾಲರು, ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಡಾ. ಎ.ಆರ್ ಶಬರಾಯ, ಪ್ರಾಂಶುಪಾಲರು, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಪ್ಲೋರಿನ್ ಕ್ಲಾರ ಪೆರ್ನಾಂಡಿಸ್, ಪ್ರಾಂಶುಪಾಲರು, ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ದೇಚಮ್ಮ ಬಿ.ಬಿ, ದ್ವಿತೀಯ ಎಮ್.ಬಿ.ಎ ಮತ್ತು ಕುಮಾರಿ ವಂದನಾ ತೃತೀಯ ಇ.ಸಿ ವಿಭಾಗ ಇವರ ಕಾರ್ಯಕ್ರಮ ನಿರೂಪಿಸಿದರು. ಕು. ವೈಭವಿ ದ್ವಿತೀಯ ಐಎಸ್ ವಿಭಾಗ ಪ್ರಾರ್ಥಿಸಿದರು, ಕು. ಸೌಮಿತ್ರಿ, ನಾಲ್ಕನೇ ವರ್ಷದ ಐಎಸ್ ವಿಭಾಗ ಇವರು ಅತಥಿಗಳನ್ನು ಪರಿಚಯಿಸಿದರು. ಡಾ.ಶ್ರೀನಿವಾಸ್ ಮಯ್ಯ ಡಿ, ಪ್ರಾಂಶುಪಾಲರು, ಶ್ರೀನಿವಾಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅತಿಥಿಗಳನ್ನು ಸ್ವಾಗತಿಸಿದರು, ಡಾ. ಎ.ಆರ್ ಶಬರಾಯ, ಪ್ರಾಂಶುಪಾಲರು, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಇವರು ವಂದನಾರ್ಪಣೆಗೈದರು.

 

Related Posts

Leave a Reply

Your email address will not be published.