ಸಂಪರ್ಕದ ವಿಚಾರವಾಗಿ ಬಹಳಷ್ಟು ಅಭಿವೃದ್ಧಿದಾಯಕ ನಡೆ ಅಗತ್ಯವಿದೆ: ಮಂಗಳೂರಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ 

 ಮುಂದಿನ ದಿನಗಳಲ್ಲಿ ಭಾರತ್ ನೆಟ್ ಯೋಜನೆಯನ್ನ ೫ ಸಾವಿರ ಹಳ್ಳಿಗಳಿಗೆ ತಲುಪಿಸುವ ಯೋಜನೆ ಹಾಕಿದ್ದೇವೆ ಎಂದು ಕೌಶಲಾಭಿವೃದ್ಧಿ ಮತ್ತು ಉದ್ಯಮ ಶೀಲತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ರು. ಅವರು ಮಂಗಳೂರಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದ ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ರು, ಅದನ್ನ ಮತ್ತಷ್ಟು ಉತ್ತಮವಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ.ಅದರ ಜೊತೆಗೆ ೫ ಸಾವಿರ ಹಳ್ಳಿಗಳಿಗೆ ಇಂಟರ್ ನೆಟ್ ತಲುಪಿಸುವ ಯೋಜನೆ ಹಾಕಿದ್ದೇವೆಕೋವಿಡ್‌ಗೂ ಮೊದಲು ಭರತ್ ನೆಟ್ ಯೋಜನೆಯ ಉದ್ದೇಶ ಬೇರೆ ಇತ್ತು.ಆದ್ರೆ ಕೋರೋನಾ ಬಳಿಕ ಭಾರತದಲ್ಲಿ ಸಾಮಾನ್ಯ ವ್ಯಕ್ತಿಗೂ ಸದ್ಯ ಇಂಟರ್ ನೆಟ್ ಅವಶ್ಯಕತೆ ಇದೆ. ಆರೋಗ್ಯ ಸೇತುವಿನಿಂದ ಹಿಡಿದು ಎಲ್ಲದಕ್ಕೂ ಇಂಟರ್ ನೆಟ್ ಬಳಕೆಯಾಗುತ್ತೆ.

ನಾನು ಈಗಾಗಲೇ ನನ್ನ ಸಚಿವಾಲಯವನ್ನ ಇಂಟರ್ನೆಟ್ ಸಂಪರ್ಕದ ಅಧ್ಯಯನಕ್ಕೆ ಬಿಟ್ಟಿದ್ದೇನೆ. ಸಂಪರ್ಕದ ವಿಚಾರವಾಗಿ ಬಹಳಷ್ಟು ಅಭಿವೃದ್ಧಿದಾಯಕ ನಡೆಯ ಅಗತ್ಯವಿದೆ.ತಂತ್ರಜ್ಞಾನದಲ್ಲಿ ನಾವು ಜಗತ್ತಿಗೇ ನಾಯಕರಾಗಬೇಕು ಅನ್ನೋದು ಮೋದಿಯವರ ವಿಷನ್ ಆಗಿದೆ. ಡಿಜಿಟಲ್ ಗ್ರಾಮ ಎನ್ನುವ ಕಲ್ಪನೆ ಸರ್ಕಾರದ ಪೈಲೆಟ್ ಪ್ರಾಜೆಕ್ಟ್ ಆಗಿದೆ ಎಂದು ಅವರು ಹೇಳಿದರು. ನಳಿನ್ ಕಟೀಲ್ ಅವರು ಜಿಲ್ಲೆಗೆ ಒಂದು ಐಟಿ ಪಾರ್ಕ್ ಕೇಳಿದ್ದಾರೆ.ಈ ಬಗ್ಗೆ ನನ್ನಿಂದ ಆಗುವ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ. ಐಟಿ ತಂತ್ರಜ್ಞಾನದ ಅಭಿವೃದ್ಧಿ ಈ ದೇಶದ ಅತೀ ದೊಡ್ಡ ಭವಿಷ್ಯವಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ಶಾಸಕರಾದ ಸಂಜೀವ ಮಠಂದೂರು, ಡಿ.ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.