ಸಿದ್ದಕಟ್ಟೆಯ 110 ಕೆವಿ ವಿದ್ಯತ್ ಉಪಕೇಂದ್ರ ನಿರ್ಮಾಣಕ್ಕೆಭೂಮಿ ಸಮತಟ್ಟು: ಹೆಚ್ಚಿನ ಹಣ ನಮೂದಿಸಿದ್ದಲ್ಲಿ ಕಠಿಣ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ

ಮಂಗಳೂರು: ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 110 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಜಮೀನು ಸಮತಟ್ಟು ಮಾಡಲು 15 ಕೋಟಿ ರೂಗಳು ವಯ್ಯವಾಗಲಿವೆ ಎಂಬ ಮೆಸ್ಕಾಂ ಅಧಿಕಾರಿಗಳ ವರದಿಯ ನೈಜತೆಯನ್ನು ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಹಾಗೂ ಇಂಜಿನಿಯರಿಂಗ್ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಳಿಂದ ಪರಿಶೀಲಿಸಿ, ಹೆಚ್ಚಿನ ಹಣ ನಮೂದಿಸಿದ್ದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಎಚ್ಚರಿಕೆ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜು.19ರ ಸೋಮವಾರ ಜಿಲ್ಲೆಯ ವಿದ್ಯುತ್ ಉಪಕೇಂದ್ರ ಹಾಗೂ ಪ್ರಸರಣ ಮಾರ್ಗಗಳ ಸಮಸ್ಯೆಗಳ ಕುರಿತು ಚರ್ಚಿಸಲು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಿದ್ದಕಟ್ಟೆಯಲ್ಲಿ ಮೆಸ್ಕಾಂ ನವರೆ ಭೂಮಿ ಗುರುತಿಸಿ, ಅಂದಾಜು ಪಟ್ಟಿ ತಯಾರಿಸಿ, 110 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಮುಂದಾಗಿದ್ದರು. 2014ರಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಯಿತು, ಆದರೆ ಭೂಮಿಯನ್ನು ಸಮತಟ್ಟು ಮಾಡಲು 15 ಕೋಟಿ ರೂ.ಗಳು ಬೇಕು ಎನ್ನುವ ಕುರಿತು ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಹಾಗೂ ನಿರ್ಮಿತಿ ಕೇಂದ್ರಗಳ ಎಂಜಿನಿಯರ್ ಗಳಿಂದ ಈ ಬಗ್ಗೆ ಪರಿಶೀಲಿಸಿ, ವರದಿ ಪಡೆಯಲಾಗುವುದು, ಭೂಮಿ ಸಮತಟ್ಟು ಮಾಡಲು ಹೆಚ್ಚು ಹಣ ನಮೂದಿಸಿರುವುದು ಕಂಡುಬಂದಲ್ಲಿ ತಪ್ಪಿಸ್ತರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.ಅಲ್ಲದೇ ಬಂಟ್ವಾಳ ಸಿದ್ದಕಟ್ಟೆಯಲ್ಲಿ ಮೂರೂವರೆಯಿಂದ ಐದು ಎಕರೆ ಪರ್ಯಾಯ್ಯ ಸ್ಥಳ ಗುರುತಿಸಿ 110 ಕೆವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಕ್ರಮವಹಿಸಲು ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಮಾತನಾಡಿ, 2014ರಲ್ಲಿ ಸಿದ್ದಕಟ್ಟೆಯಲ್ಲಿ ವಿದ್ಯುತ್ ಉಪಕೇಂದ್ರದ ನಿರ್ಮಾಣಕ್ಕೆ ಮೆಸ್ಕಾಂನವರೇ ಭೂಮಿ ಗುರುತಿಸಿದ್ದಾರೆ, ಅಂದು ಅವರು ಇತರೆ ಪರ್ಯಾಯಕ್ಕೆ ಯಾವುದೇ ಒಲವು ತೋರಿಲ್ಲ, ಅನುಮೋದನೆ, ಅನುಷ್ಠಾನಗೊಂಡ ನಂತರ ಹಣ ಬಿಡುಗಡೆಯಾಗುವ ಸಂದರ್ಭದಲ್ಲಿ ಭೂಮಿ ಸಮತಟ್ಟು ಮಾಡಲು 15 ಕೋಟಿ ರೂ.ಗಳು ವೆಚ್ಚವಾಗಲಿದೆ ಅಂಬುದರಲ್ಲಿ ಯಾವುದೇ ಸಮಂಜಸವಲ್ಲ ಕಂಡುಬರುತ್ತಿಲ್ಲ, ಪರ್ಯಾಯವಾಗಿ ಸರ್ಕಾರಿ ಜಾಗವನ್ನು ಅಥವಾ ಖಾಸಗಿಯಾದ ಸ್ಥಳವನ್ನು ಗುರುತಿಸಬೇಕಿತ್ತು ಈ ಬಗ್ಗೆ ಸಂಬಂಧಿಸಿದ ತಹಶೀಲ್ದಾರರೊಂದಿಗೆ ಚರ್ಚೆ ನಡೆಸಬೇಕಿತ್ತು ಹಾಗೂ ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸಬೇಕಿತ್ತು, ಆದರೆ, ಅದ್ಯಾವುದನ್ನು ಮಾಡಿರುವುದು ಕಂಡುಬಂದಿಲ್ಲ, ಈ ಹಿನ್ನಲೆಯಲ್ಲಿ ಭೂಮಿ ಸಮತಟ್ಟು ಮಾಡಲು 15 ಕೋಟಿ ರೂಪಾಯಿ ಬೇಕೆನ್ನುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಸಿದ್ದಕಟ್ಟೆ 110 ಕೆ.ವಿ.ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಇತರೆ ಪರ್ಯಾಯ ಗ್ರಾಮವನ್ನು ಗುರುತಿಸುವಂತೆ ಬಂಟ್ವಾಳ ತಹಶೀಲ್ದಾರ್ ರಶ್ಮೀ ಅವರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಅವರು ಆ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಿ ಗ್ರಾಮಸ್ಥರಲ್ಲಿ ಬಗ್ಗೆ ವಿಚಾರಿಸಿದರೆ ಲಭ್ಯವಿರುವ ಭೂಮಿಯ ಬಗ್ಗೆ ಮಾಹಿತಿ ದೊರೆಯಲಿದೆ ಈ ಗ್ರಾಮಸಭೆಗಳನ್ನು ಕೂಡಲೇ ನಡೆಸಿ ಮೂರೂವರೆಯಿಂದ ಐದು ಎಕರೆ ಜಮೀನು ಗುರುತಿಸುವಂತೆ ಈ ಸಂದರ್ಭದಲ್ಲಿ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ವಿವಿಧ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ ಹಾಗೂ ಕೈಗೊಂಡಿರುವ ಕಾಮಗಾರಿಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಶಾಸಕರಾದ ರಾಜೇಶ್ ನಾಯಕ್, ಉಮಾನಾಥ್ ಕೋಟ್ಯಾನ್ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ಮೆಸ್ಕಾಂ ಅಧಿಕಾರಿಗಳು, ಸಂಬಂಧಿಸಿದ ಇತರರು ಉಪಸ್ಥಿತರಿದ್ದರು

Related Posts

Leave a Reply

Your email address will not be published.