ಹಳೆಯಂಗಡಿಯ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಿಂದ ಆಟಿದ ನೆಂಪು ಕಾರ್ಯಕ್ರಮ

ಮಂಗಳೂರು :ಆಟಿ ತಿಂಗಳ ತಿಂಡಿ ತಿನಿಸುಗಳು ಆಹಾರ ಕ್ರಮಗಳು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸಮಯದಲ್ಲಿ ಪ್ರಕೃತಿ ದತ್ತವಾಗಿ ಸಿಗುವ ಆಹಾರಗಳು ಜೌಷಧಿಯ ಗುಣಗಳನ್ನು ಹೊಂದಿದೆ. ಅಮಾಸ್ಯೆ ದಿನದ ಹಾಳೆ ಮರದ ಕೆತ್ತೆ ಅತ್ಯಧಿಕ ರೋಗ ನಿರೋಧಕ ಶಕ್ತಿಯಿಂದ ಕೂಡಿದೆ.ಇದರ ಕಷಾಯ ಸೇವಿಸಿದರೆ ರೋಗ ರುಜಿನಗಳು ದೂರವಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು  ಇದರ ಸದಸ್ಯ ನಾಗೇಶ್ ಕುಲಾಲ್  ಅವರು ಅಭಿಪ್ರಾಯ ಪಟ್ಟರು.
ಆ.1 ರಂದು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು,ಹಳೆಯಂಗಡಿ ಆಯೋಜಿಸಿದ್ದ ಆಟಿದ ನೆಂಪು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ತುಳುನಾಡಿನ ಪುರಾತನ ಧಾರ್ಮಿಕ ಆಚರಣೆಗಳು ತೆರೆಯ ಮರೆಗೆ ಹೋಗುತ್ತಿದ್ದು ಮುಂದಿನ ತಲೆಮಾರಿಗೆ ಅದು ಕಣ್ಮರೆಯಾಗಲೂ ಬಹುದು. ಈ ನಿಟ್ಟಿನಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತುಳು ಸಂಸ್ಕೃತಿಯನ್ನು ಆಚರಿಸಿ  ಭದ್ರ ನೆಲೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
 ತುಳುನಾಡಿನ ತುಡಾರಿನೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ  ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ  ಎಡ್ಮೆಮಾರ್ ಅವರು ಮಾತನಾಡಿ ಕಡು ಬಡತನ, ನಿರುದ್ಯೋಗ, ಸಾಂಕ್ರಾಮಿಕ ರೋಗಗಳು ಆಟಿ ತಿಂಗಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಪ್ರಕೃತಿಯ ಮಾತೃ ವಾತ್ಸಲ್ಯದಿಂದ ಈ ತಿಂಗಳಲ್ಲಿ ದೊರಕುವ ಅಹಾರಗಳು ಜೌಷಧೀಯ ಗುಣಗಳನ್ನು ಹೊಂದಿದೆ. ಅದ್ದರಿಂದಲೇ ನಮ್ಮ ಪೂರ್ವಜರು ಕಷ್ಟದ ಸಮಯದಲ್ಲಿ ಆರೋಗ್ಯಕರ ಜೀವನ ನಡೆಸುತ್ತಿದ್ದರು. ಎಂದರು. ಕ್ಲಬ್‌ನ ಅಧ್ಯಕ್ಷ ಸಂತೋಷ ದೇವಾಡಿಗ ಅವರು ಮುಂದಿನ ಕಾರ್ಯಯೋಜನೆಯ ಬಗ್ಗೆ ವಿವರಿಸಿ ಸಾಮಾಜಿಕ , ಶೈಕ್ಷಣಿಕ, ಆರ್ಥಿಕ , ಕ್ರೀಡಾ  ಕ್ಷೇತ್ರದಲ್ಲಿ ವಿಶಿಷ್ಠವಾದ ಯೋಗದಾನ ನೀಡಿದ್ದರಿಂದ ನಮ್ಮ ಸಂಸ್ಥೆ ರಾಜ್ಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಯಿತು. ಕಳೆದ ನಾಲ್ಕು ವರ್ಷಗಳಿಂದ ಹಡಿಲು ಭೂಮಿಯನ್ನು ಉಚಿತವಾಗಿ ನಾಟಿ ಮಾಡಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ ಎಂದು ಹೇಳಿದ ಅವರು 34 ಬಗೆಯ  ಖಾದ್ಯಗಳನ್ನು ತಯಾರಿಸಿದ ಸರ್ವ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು.
 ಸದಸ್ಯೆಯರಾದ ಸುದಿಕ್ಷಾ, ಸಮೀಕ್ಷಾ, ನಿಖಿತಾ ಪ್ರಾರ್ಥಿಸಿದರು. ಕಾರ್ಯದರ್ಶಿ ಜಗದೀಶ್ ಕುಲಾಲ್ ವಂದಿಸಿದರು, ನಿಯೋಜಿತ ಮಹಿಳಾ ಕಾರ್ಯದರ್ಶಿ ನೀಮಾ ಸನಿಲ್ ಅವರು ಖಾದ್ಯೋತ್ಸದಲ್ಲಿ ಭಾಗವಹಿಸಿದವರ  ಹೆಸರು ವಾಚಿಸಿದರು. ಕಾರ್ಯಾಧ್ಯಕ್ಷರಾದ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಂಸ್ಥೆಯ  ಗೌರವ ಅಧ್ಯಕ್ಷ  ನಾರಾಯಣ ಜಿ ಕೆ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ವಾಣಿ ಮಹೇಶ್ ಉಪಸ್ಥಿತರಿದ್ದರು. 
ಗೌರವ ಮಾರ್ಗದರ್ಶಕರು, ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು, ಗ್ರಾಮದ ಹಿರಿಯ ನಾಗರಿಕರು, ಗ್ರಾಮಸ್ಥರು ಸಹಕರಿಸಿದರು.

Related Posts

Leave a Reply

Your email address will not be published.