ಹಾಸನ : ಅತಂತ್ರ ಸ್ಥಿತಿಯಲ್ಲಿರುವ ಗಣೇಶ ಮೂರ್ತಿ ತಯಾರಕರ ಬದುಕು

ಇಂದು ದೇಶದಾದ್ಯಂತ ಕೋವಿಡ್‍ನಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ ಕೆಲವೊಂದು ಕಸುಬುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಇಂದು ಹೀನಾಯವಾಗಿದೆ ಅದಕ್ಕೆ ಉದಾಹರಣೆ ಎಂಬಂತೆ ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಅದರ ಅಂಗವಾಗಿ ಪ್ರತಿ ವರ್ಷವೂ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದ ಕಲಾವಿದರು ಇಂದು ಕೋವಿಡ್‍ನಿಂದಾಗಿ ಹೀನಾಯ ಬದುಕನ್ನು ಬದುಕುತ್ತಿದ್ದಾರೆ. ಪ್ರತಿವರ್ಷವು ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶ ಚತುರ್ಥಿ ಕಳೆದ 2 ವರ್ಷಗಳಿಂದ ಕೊರೋನಾ ಎದುರಿಸಿದ್ದು ಗಣೇಶ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದ ಕಲಾವಿದರು ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಹಾಸನ ಜಿಲ್ಲೆ ಆಲೂರು ತಾಲ್ಲೂಕು ಬೈರಾಪುರದಲ್ಲಿ ಕಳೆದ ನಲವತ್ತು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಲತೇಶ್ ರವರು ಮಾಧ್ಯಮದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾನು ಕಳೆದ ನಲವತ್ತು ವರ್ಷಗಳಿಂದ ಗಣೇಶ ಮೂರ್ತಿಗಳನ್ನು ಮಾಡುವ ಕಸುಬನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಈ ಹಿಂದೆ ಪ್ರತಿ ವರ್ಷವೂ ಗಣೇಶ ಚತುರ್ಥಿ ಎಂದರೆ ಮೂರರಿಂದ 4 ತಿಂಗಳು ನಮಗೆ ಕೆಲಸ ನಡೆಯುತ್ತಿತ್ತು ಅದಾದ ಮೇಲೆಯೇ ನಾವು ಆದಾಯವನ್ನು ಕಾಣುತ್ತಿದ್ದು, 4 ತಿಂಗಳು ನಮಗೆ ಬೇರೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಈ ಮೂರ್ತಿಗಳು ವ್ಯಾಪಾರವಾದರೆ ಮಾತ್ರ ನಮಗೆ ಆದಾಯ ಬರುತ್ತದೆ. ಆದರೆ ಈಗ ಕಳೆದ 2 ವರ್ಷಗಳಿಂದ ಕೊರೋನಾ ಬಂದಿದ್ದು ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಸರ್ಕಾರ ತಡೆ ತಂದಿದ್ದು ಮಾಡಿದ್ದ ಗಣಪತಿ ವಿಗ್ರಹಗಳು ಹಾಗೇ ಉಳಿದಿವೆ ವ್ಯಾಪಾರವಾಗಿದೆ. ಆದರೂ ಕೂಡ ಸರ್ಕಾರ ನಮ್ಮಂಥ ಕಲಾವಿದರಿಗೆ ಯಾವುದೇ ಸಹಕಾರ ಅಥವಾ ಪರಿಹಾರವನ್ನು ನೀಡಿಲ್ಲ ಈಗಲಾದರೂ ಸರಕಾರ ಮನಸ್ಸು ಮಾಡಿ ಗಣಪತಿ ಪ್ರತಿಷ್ಠಾಪನೆಗೆ ಅನುಕೂಲ ಮಾಡಿಕೊಟ್ಟರೆ ನಾವು ಮಾಡಿರುವ ಗಣಪತಿ ಮೂರ್ತಿಗಳು ಮಾರಾಟವಾಗಿ ನಮ್ಮ ಬದುಕು ಹಸನಾಗುತ್ತದೆ ಎಂದು ಹೇಳಿದರು.

Related Posts

Leave a Reply

Your email address will not be published.